»   » ಮೋಹನ್ ಲಾಲ್ 'ಒಪ್ಪಂ' ಕನ್ನಡಕ್ಕೆ ರಿಮೇಕ್: ಹೀರೋ ಯಾರು ಗೊತ್ತಾ ?

ಮೋಹನ್ ಲಾಲ್ 'ಒಪ್ಪಂ' ಕನ್ನಡಕ್ಕೆ ರಿಮೇಕ್: ಹೀರೋ ಯಾರು ಗೊತ್ತಾ ?

Posted By:
Subscribe to Filmibeat Kannada
For Quick Alerts
ALLOW NOTIFICATIONS
For Daily Alerts

  ಖ್ಯಾತ ನಿರ್ದೇಶಕ ಪ್ರಿಯದರ್ಶನ್ ಅವರ ನಿರ್ದೇಶನದಲ್ಲಿ ಮೂಡಿಬಂದಿದ್ದ 'ಒಪ್ಪಂ' ಚಿತ್ರ ಮಲಯಾಳಂನಲ್ಲಿ ಸೂಪರ್ ಹಿಟ್ ಎನಿಸಿಕೊಂಡಿತ್ತು. ಮಾಲಿವುಡ್ ಸೂಪರ್ ಸ್ಟಾರ್ ಮೋಹನ್ ಲಾಲ್ ಚಿತ್ರದ ನಾಯಕರಾಗಿದ್ದರು.

  ಈಗ ಈ ಸೂಪರ್ ಹಿಟ್ ಚಿತ್ರ ಕನ್ನಡದಲ್ಲಿ ತಯಾರಾಗಲು ಸಿದ್ದವಾಗಿದೆ. ಮೋಹನ್ ಲಾಲ್ ಮಾಡಿದ್ದ ಪಾತ್ರವನ್ನ ಕನ್ನಡದಲ್ಲಿ ಬಿಗ್ ಸ್ಟಾರ್ ನಟರೊಬ್ಬರು ಅಭಿನಯಿಸಲಿದ್ದಾರಂತೆ. ಆ ಸ್ಟಾರ್ ನಟ ಯಾರು ಎಂಬ ಕುತೂಹಲ ಸ್ಯಾಂಡಲ್ ವುಡ್ ಮಂದಿಯನ್ನ ಕಾಡುತ್ತಿತ್ತು.

  ಕೇವಲ ಕನ್ನಡದಲ್ಲಿ ಮಾತ್ರವಲ್ಲದೆ, ತೆಲುಗು, ತಮಿಳು ಹಾಗೂ ಹಿಂದಿ ಭಾಷೆಯಲ್ಲೂ ಈ ಸಿನಿಮಾ ರಿಮೇಕ್ ಆಗಲಿದೆಯಂತೆ. ಈಗಾಗಲೇ ಎಲ್ಲ ಭಾಷೆಗಳ ನಟರ ಜೊತೆ ಈ ಚಿತ್ರಕ್ಕೆ ಸಂಬಂಧಪಟ್ಟಂತೆ ನಿರ್ಮಾಪಕರು ಮಾತನಾಡಿದ್ದು, ಎಲ್ಲರೂ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರಂತೆ[ಮಲಯಾಳಂನಲ್ಲಿ ಮೋಡಿ ಮಾಡಲಿದೆ ಪುನೀತ್ 'ಮೈತ್ರಿ' ].

  ಮೋಹನ್ ಲಾಲ್ ಅಭಿನಯಿಸಿದ್ದ ಈ ಚಿತ್ರದಲ್ಲಿ ಸಮುದ್ರಕಣಿ, ವಿಮಲ ರಾಮನ್, ಪುಟಾಣಿ ಮೀನಾಕ್ಷಿ ಸೇರಿದಂತೆ ಹಲವರು ಅಭಿನಯಿಸಿದ್ದರು. ಕಳೆದ ಸೆಪ್ಟಂಬರ್ ತಿಂಗಳಲ್ಲಿ ಬಿಡುಗಡೆಯಾಗಿತ್ತು.

  'ಒಪ್ಪಂ' ಸೂಪರ್ ಹಿಟ್

  ಮೋಹನ್ ಲಾಲ್ ನಟಿಸಿದ್ದ 'ಒಪ್ಪಂ' ಸೆಪ್ಟಂಬರ್ ನಲ್ಲಷ್ಟೇ ತೆರೆಕಂಡಿತ್ತು. ಪ್ರಿಯದರ್ಶನ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದು, ಭಾವನಾತ್ಮಕ ಕಥಾಹಂದರವನ್ನ ಹೊಂದಿತ್ತು. ಮೋಹನ್ ಲಾಲ್ ಅಭಿನಯಕ್ಕೆ ಪ್ರಶಂಸೆಗಳ ಸುರಿಮಳೆ ಬಂದಿತ್ತು. 'ಇದಕ್ಕೆ ಭಾಷೆಯ ಮಿತಿಯಿಲ್ಲ. ಎಲ್ಲರೂ ನೊಡಲೇಬೇಕಾದ ಸಿನಿಮಾ' ಅಂತ ವಿಮರ್ಶಕರಿಂದ ಶಬ್ಬಾಶ್ ಎನಿಸಿಕೊಂಡಿತ್ತು.

  ಕುರುಡನ ಪಾತ್ರದಲ್ಲಿ ನಾಯಕ

  ಚಿತ್ರದಲ್ಲಿ ನಾಯಕ ಅಂಧನಾಗಿರುತ್ತಾನೆ. ಆದರೆ, ತನ್ನ ಶ್ರವಣ, ತೀಕ್ಷ್ಣತೆ, ಹಾಗೂ ಗ್ರಹಣ ಶಕ್ತಿಯಿಂದ ಎಲ್ಲವನ್ನೂ ಗುರುತಿಸುವ ವಿಶೇಷ ಶಕ್ತಿ ಹೊಂದಿರುತ್ತಾನೆ. ಈ ಪಾತ್ರದಲ್ಲಿ ಮೋಹನ್ ಲಾಲ್ ಅತ್ಯಾದ್ಬುತವಾದ ನಟನೆ ಮಾಡಿದ್ರು. ಹೀಗಾಗಿ, ಕನ್ನಡದಲ್ಲಿ ಈ ಪಾತ್ರವನ್ನ ಯಾರು ಸಮರ್ಥವಾಗಿ ನಿರ್ವಹಿಸಬಲ್ಲರು ಎಂಬ ಚರ್ಚೆ ಜೋರಾಗಿಯೇ ನಡೆಯುತ್ತಿದೆ.

  'ಹಯಗ್ರೀವ' ಸಂಸ್ಥೆಯಡಿ ನಿರ್ಮಾಣ

  'ಒಪ್ಪಂ' ಚಿತ್ರದ ರಿಮೇಕ್ ಹಕ್ಕನ್ನ 'ಹಯಗ್ರೀವ ಸಂಸ್ಥೆ' ಕೊಂಡುಕೊಂಡಿದೆ ಸಂಪತ್ ಕುಮಾರ್ ನಿರ್ಮಾಣ ಮಾಡಲಿದ್ದಾರೆ. 'ಹಯಗ್ರೀವ' ಕನ್ನಡದಲ್ಲಿ ಸಿನಿಮಾ ಮಾಡುತ್ತಿರುವುದು ಇದೇ ಮೊದಲಲ್ಲ. ಈಗಾಗಲೇ ಕನ್ನಡದ ಚಿತ್ರವೊಂದಕ್ಕೆ ಬಂಡವಾಳ ಹೂಡಿದ್ದು, ತೆಲುಗಿನ 'ಕುಮಾರಿ21F' ಚಿತ್ರವನ್ನ ಕನ್ನಡದಲ್ಲಿ ನಿರ್ಮಾಣ ಮಾಡುತಿದ್ದಾರೆ. ಈ ಚಿತ್ರದಲ್ಲಿ ಹಿರಿಯ ನಟ ದೇವರಾಜ್ ಅವರ ಎರಡನೇ ಪುತ್ರ ಪ್ರಣಾಮ್ ನಾಯಕನಾಗಿದ್ದಾರೆ.

  ತಮಿಳನಲ್ಲಿ ಕಮಲ್ ಹಾಸನ್

  ಮೊದಲೇ ಹೇಳಿದಂತೆ 'ಒಪ್ಪಂ' ಚಿತ್ರ ಎಲ್ಲ ಭಾಷೆಗಳಲ್ಲಿ ಸಿದ್ದವಾಗಲಿದೆ. ತಮಿಳು ವರ್ಷನ್ ನಲ್ಲಿ ಸೂಪರ್ ಸ್ಟಾರ್ ನಟ ಕಮಲ್ ಹಾಸನ್ ಕಾಣಿಸಿಕೊಳ್ಳಲಿದ್ದಾರಂತೆ.

  ಹಿಂದಿಯಲ್ಲಿ ಅಕ್ಷಯ್

  'ಒಪ್ಪಂ' ಚಿತ್ರದ ಹಿಂದಿಯಲ್ಲೂ ರೀಮೇಕ್ ಆಗುತ್ತಿದ್ದು, ಹಿಂದಿ ಅವತರಣಿಕೆಯಲ್ಲಿ ಬಾಲಿವುಡ್ ಸ್ಟಾರ್ ನಟ ಅಕ್ಷಯ್ ಕುಮಾರ್ ಬಣ್ಣ ಹಚ್ಚಲಿದ್ದಾರಂತೆ.

  ತೆಲುಗಿನಲ್ಲಿ ಇಬ್ಬರು ಸೂಪರ್ ಸ್ಟಾರ್ ಗಳು?

  ಇನ್ನೂ ಈ ಚಿತ್ರವನ್ನ ತೆಲುಗಿನಲ್ಲಿ ಕೂಡ ತರಲಾಗುತ್ತಿದ್ದು, ಇಬ್ಬರು ಸೂಪರ್ ಸ್ಟಾರ್ ನಟರು ಮೋಹನ್ ಲಾಲ್ ಮಾಡಿದ್ದ ಪಾತ್ರದಲ್ಲಿ ಅಭಿನಯಿಸಲು ಮುಂದೆ ಬಂದಿದ್ದಾರಂತೆ. ಮೂಲಗಳ ಪ್ರಕಾರ ಅಕ್ಕಿನೇನಿ ನಾಗಾರ್ಜುನ ಹಾಗೂ ವಿಕ್ಟರಿ ವೆಂಕಟೇಶ್ ತೆಲುಗು ಚಿತ್ರದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.

  ಕನ್ನಡದಲ್ಲಿ ಯಾರು?

  ಹೀಗೆ, ಎಲ್ಲ ಭಾಷೆಗಳಲ್ಲೂ ದೊಡ್ಡ ನಟರೇ ಕಾಣಿಸಿಕೊಳ್ಳುತ್ತಿದ್ದಾರೆ. ಹೀಗಾಗಿ ಕನ್ನಡದಲ್ಲಿ ಯಾರು ಅಭಿನಯಿಸುತ್ತಾರೆ ಎಂಬುದು ಸದ್ಯದ ಕುತೂಹಲ. ಆದ್ರೆ ನಿರ್ಮಾಪಕರ ಸಂಪತ್ ಕುಮಾರ್ ಹೇಳುವ ಪ್ರಕಾರ, ಕನ್ನಡದಲ್ಲೂ ದೊಡ್ಡ ನಟರೊಬ್ಬರು ಬಣ್ಣಹಚ್ಚಲಿದ್ದಾರಂತೆ. ಈಗಾಗಲೇ ಅವರೊಂದಿಗೆ ಮಾತುಕತೆ ಕೂಡ ನಡೆಯುತ್ತಿದೆ. ಆದಷ್ಟೂ ಬೇಗ ಅದು ಯಾರು ಅಂತ ಬಹಿರಂಗಪಡಿಸುತ್ತೇವೆ ಎನ್ನುತ್ತಿದ್ದಾರೆ.

  English summary
  Mohanlal starrer 'Oppam', will now be remade in Kannada. the original Movie directed by Priyadarshan. the filmmaker Sampath Kumar, who was keen to make it in Sandalwood has bought the remake rights of the Malaylam flick.

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more