twitter
    For Quick Alerts
    ALLOW NOTIFICATIONS  
    For Daily Alerts

    ಮೈಸೂರು ಮಹಾರಾಜ ಕಾಲೇಜಿನಲ್ಲಿ ಸಿನಿಮಾ ಚಿತ್ರೀಕರಣ, ತರಗತಿಗಳಿಗೆ ಅಡಚಣೆ

    By ಮೈಸೂರು ಪ್ರತಿನಿಧಿ
    |

    ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಮಲಯಾಳಂ ಸಿನಿಮಾ ಚಿತ್ರೀಕರಣ ನಡೆಯುತ್ತಿದ್ದು, ತರಗತಿಗಳಿಗೆ ಅಡಚಣೆಯಾಗಿದೆ.

    Recommended Video

    ಮಹಾರಾಜ ಕಾಲೇಜಿನಲ್ಲಿ ಸಿನಿಮಾ ಶೂಟಿಂಗ್: ವಿಧ್ಯಾರ್ಥಿಗಳಿಗೆ ಕಿರಿಕಿರಿ

    ಮಲಯಾಳಂ ಸಿನಿಮಾ 'ಜನಗಣಮನ' ಸಿನಿಮಾದ ಚಿತ್ರೀಕರಣ ಮಹಾರಾಜ ಕಾಲೇಜು ಆವರಣದಲ್ಲಿ ಹಾಗೂ ಒಳಾಂಗಣದಲ್ಲಿ ನಡೆಯುತ್ತಿದೆ. ಚಿತ್ರೀಕರಣ ಸಂಬಂಧ ಮೈಕ್‌, ಧ್ವನಿವರ್ಧಕ, ಜನರೇಟರ್‌ಗಳನ್ನು ಚಿತ್ರತಂಡ ಬಳಸಿದ್ದು ಇದರಿಂದಾಗಿ ತರಗತಿಗಳಿಗೆ ಅಡಚಣೆಯಾಗಿದೆ. ಕಳೆದ ನಾಲ್ಕು ದಿನದಿಂದಲೂ ಚಿತ್ರೀಕರಣ ನಡೆಯುತ್ತಿದ್ದು, ಇದರಿಂದಾಗಿ ವಿದ್ಯಾರ್ಥಿಗಳು ಉಪನ್ಯಾಸಕರು ಸಮಸ್ಯೆ ಎದುರಿಸುತ್ತಿದ್ದಾರೆ.

    ಚಿತ್ರೀಕರಣದಿಂದ ಅಡಚಣೆಯ ಜೊತೆಗೆ ವಿದ್ಯಾರ್ಥಿಗಳು ತರಗತಿಗಳಿಗೆ ಚಕ್ಕರ್ ಹೊಡೆದು ಶೂಟಿಂಗ್ ನೋಡಲು ನಿಂತುಬಿಟ್ಟಿದ್ದಾರೆ. ಚಿತ್ರೀಕರಣ ಪ್ರಾರಂಭವಾದ ದಿನದಿಂದ ವಿದ್ಯಾರ್ಥಿಗಳು ತರಗತಿಗಳಿಗೆ ಸರಿಯಾಗಿ ಹೋಗುತ್ತಿಲ್ಲ.

    Malayalam Movie Shooting In Mysore Maharaja College, Classes Disturbed Due To Shooting

    ಕಾಲೇಜಿನಲ್ಲಿ ಕೋರ್ಟ್ ದೃಶ್ಯಗಳ ಚಿತ್ರೀಕರಣವನ್ನು ಮಾಡಲಾಗುತ್ತಿದೆ. ಚಿತ್ರೀಕರಣಕ್ಕಾಗಿ ಪೊಲೀಸ್ ಜೀಪ್‌ಗಳು, ವ್ಯಾನ್‌ಗಳನ್ನು ಬಳಸಿಕೊಂಡು ಚಿತ್ರೀಕರಣ ಮಾಡಲಾಗುತ್ತಿದೆ. ಸಹ ಕಲಾವಿದರು, ಚಿತ್ರೀಕರಣದ ತಂಡ, ತಂತ್ರಜ್ಞರು, ಇವುಗಳಿಂದಾಗಿ ಆವರಣದಲ್ಲಿ ಜನಜಂಗುಳಿ ಹೆಚ್ಚಾಗಿದೆ.

    'ಜನಗಣಮನ' ಸಿನಿಮಾದಲ್ಲಿ ಪೃಥ್ವಿರಾಜ್ ಸುಕುಮಾರ್ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದು, ಸಿನಿಮಾವನ್ನು ಡಿಜೊ ಜೋಸ್ ಆಂಟೊನಿ ನಿರ್ದೇಶನ ಮಾಡಿದ್ದಾರೆ. ಸಿನಿಮಾದ ಪ್ರೋಮೊ ಈಗಾಗಲೇ ಬಿಡುಗಡೆ ಆಗಿದ್ದು ಪ್ರೋಮೋದಲ್ಲಿ ಖೈದಿಯ ಪಾತ್ರದಲ್ಲಿ ಪೃಥ್ವಿರಾಜ್ ಸುಕುಮಾರ್ ಕಾಣಿಸಿಕೊಂಡಿದ್ದಾರೆ. ಸಿನಿಮಾದಲ್ಲಿ ನಟ ಸೂರಜ್ ವೆಂಜರಮೋಡು ಸಹ ಇದ್ದಾರೆ. ಜೊತೆಗೆ ಶ್ರೀದಿವ್ಯಾ, ಧೃವನ್, ಶಾರಿ ಸಹ ಇದ್ದಾರೆ. ಸಿನಿಮಾವನ್ನು ಸುಪ್ರಿಯಾ ಮೆನನ್, ಲಿಸ್ಟಿನ್ ಸ್ಟಿಫನ್ ನಿರ್ಮಾಣ ಮಾಡುತ್ತಿದ್ದಾರೆ. ಸಂಗೀತ ಜೇಕ್ಸ್ ಬಿಜಾಯ್. ಪೃಥ್ವಿರಾಜ್ ಸುಕುಮಾರನ್ ಹಾಗೂ ಸೂರಜ್ ವೆಂಜರಮೋಡು ಒಟ್ಟಿಗೆ ನಟಿಸಿದ್ದ 'ಡ್ರೈವಿಂಗ್ ಲೈಸೆನ್ಸ್' ಸಿನಿಮಾ ದೊಡ್ಡ ಹಿಟ್ ಆಗಿತ್ತು.

    English summary
    Malayalam movie Jana Gana Mana shooting in Mysore Maharaja college. Classes disturbed due to shooting.
    Friday, November 12, 2021, 15:16
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X