»   » ಮಲಯಾಳಂ ಸ್ಟಾರ್ ಮಮ್ಮುಟ್ಟಿ 'ನ್ಯೂಸ್ ಬ್ರೇಕರ್'

ಮಲಯಾಳಂ ಸ್ಟಾರ್ ಮಮ್ಮುಟ್ಟಿ 'ನ್ಯೂಸ್ ಬ್ರೇಕರ್'

Posted By:
Subscribe to Filmibeat Kannada
ಮಲಯಾಳಂ ಸೂಪರ್ ಸ್ಟಾರ್ 'ಮಮ್ಮುಟ್ಟಿ' ಮತ್ತೆ ಕನ್ನಡಕ್ಕೆ ಬರಲಿದ್ದಾರೆ. ಅಭಯ ಸಿಂಹ ನಿರ್ದೇಶನದ 'ಶಿಕಾರಿ' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ಮಲಯಾಳಂನ ಈ ಸೂಪರ್ ಸ್ಟಾರ್ ಮಮ್ಮುಟ್ಟಿ, ಸದ್ಯದಲ್ಲೇ 'ನ್ಯೂಸ್ ಬ್ರೇಕರ್' ಹೆಸರಿನ ಚಿತ್ರದ ಮೂಲಕ ಮತ್ತೆ ಕನ್ನಡ ಸಿನಿಪ್ರೇಕ್ಷಕರೆದುರು ಬರಲಿದ್ದಾರೆ. ನ್ಯೂಸ್ ಬ್ರೇಕರ್ ಚಿತ್ರದ ನಿರ್ದೇಶಕರು ದೀಪನ್.

ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ಏಕಕಾಲಕ್ಕೆ ಬಿಡುಗಡೆಯಾಗಿದ್ದ ಶಿಕಾರಿ, ಭಾರೀ ಪ್ರಚಾರ ಗಿಟ್ಟಿಸಿಕೊಂಡಿತ್ತು. ಆದರೆ ಚಿತ್ರ ನೋಡಿದವರು ಕಥೆ, ನಿರ್ದೇಶನ ಚೆನ್ನಾಗಿಲ್ಲ ಎಂದು ದೂರಿದ್ದರು. ಈ ಕಾರಣಕ್ಕೆ ಶಿಕಾರಿ ಚಿತ್ರ ಬಾಕ್ಸ್ ಆಫೀಸ್ ಗಳಿಕೆಯಲ್ಲಿ ಬಿದ್ದುಹೋಯ್ತು. ಆದರೆ ಈ ಚಿತ್ರದ ಸೋಲಿಗೆ ಮಮ್ಮುಟ್ಟಿ ಕಾರಣವಲ್ಲ ಎಂದು ನಂಬಿರುವ ಅವರ ಅಭಿಮಾನಿ, ಸಹಾಯಕ ಎಸ್. ಜಾರ್ಜ್, ಈಗ ಮತ್ತೊಂದು ಚಿತ್ರದ ನಿರ್ಮಾಣಕ್ಕೆ ಕೈಹಾಕಿದ್ದಾರೆ.

ಜಾರ್ಜ್ ನಿರ್ಮಾಣದ 'ನ್ಯೂಸ್ ಬ್ರೇಕರ್' ಚಿತ್ರವನ್ನು ನಿರ್ದೇಶಿಸಲಿರುವವರು ದೀಪನ್. ವಿನೋದ್ ಗುರುವಾಯೂರ್ ಚಿತ್ರಕಥೆ ಬರೆಯುತ್ತಿದ್ದು ಈ ಚಿತ್ರವನ್ನು ಕನ್ನಡ ಮತ್ತು ಮಲಯಾಳಂಗಳಲ್ಲಿ ಏಕಕಾಲದಲ್ಲಿ ಚಿತ್ರೀಕರಿಸಲು ಯೋಜನೆ ಹಮ್ಮಿಕೊಳ್ಳಲಾಗಿದೆ. ಕನ್ನಡದಲ್ಲಿ ಚಿತ್ರಕಥೆ, ಸಂಭಾಷಣೆ ಬರೆಯುತ್ತಿರುವವರು ಯಾರು ಎಂಬುದು ಸದ್ಯಕ್ಕೆ ಸಸ್ಪೆನ್ಸ್.

ಮಮ್ಮುಟ್ಟಿ ನಾಯಕರಾಗಿರುವ ಮಲಯಾಳಂ, ಕನ್ನಡದ ನ್ಯೂಸ್ ಬ್ರೇಕರ್ ಚಿತ್ರಕ್ಕೆ ನಟಿ ನಿಕೇಶಾ ಪಟೇಲ್ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಇತ್ತೀಚಿಗಷ್ಟೇ ಚಿತ್ರೀಕರಣ ಮುಗಿಸಿರುವ 'ವರದನಾಯಕ' ಚಿತ್ರದಲ್ಲಿ ಚಿರಂಜೀವಿ ಸರ್ಜಾರಿಗೆ ನಾಯಕಿಯಾಗಿರುವ ನಿಕೇಶಾ, ಈ ಚಿತ್ರದ ಮೂಲಕ ಈಗ ಮಲಯಾಳಂಗೂ ಕಾಲಿಟ್ಟಂತಾಗಿದೆ.

ಒಟ್ಟಿನಲ್ಲಿ ಮಲಯಾಳಂ ಸೂಪರ್ ಸ್ಟಾರ್ ಮಮ್ಮುಟ್ಟಿ ಈ ನ್ಯೂಸ್ ಬ್ರೇಕರ್ ಚಿತ್ರದ ಮೂಲಕವಾದರೂ ಕನ್ನಡಿಗರ ಮನಸ್ಸಿನಲ್ಲಿ ಮನೆಮಾಡಿಕೊಳ್ಳಬಹುದೇ ಎಂಬುದು ಸದ್ಯದ ಪ್ರಶ್ನೆ. ಶಿಕಾರಿ ಚಿತ್ರದಲ್ಲಿ ಪ್ರೇಕ್ಷಕರು ಅವರ ಅಭಿನಯ ಮೆಚ್ಚಿಕೊಂಡಿದ್ದರೂ ಅವರಿಗೆ ಗೊತ್ತಿಲ್ಲದ ಭಾಷೆ ಕನ್ನಡದಲ್ಲಿ ಅವರೇ ಸಂಭಾಷಣೆ ಹೇಳಿದ್ದರ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದರು. ಮುಂದೇನೋ ಕಾದು ನೋಡಬೇಕಾಗಿದೆ...(ಒನ್ ಇಂಡಿಯಾ ಕನ್ನಡ)

English summary
Malayalam Super Star Mammootty acts again in Kannada movie News Breaker. This movie ti direct by Deepan and produces by Mammootty's Assistant and Fan S Jorge. 
 
Please Wait while comments are loading...