ಅನಾರೋಗ್ಯದಿಂದ ಸಾವನ್ನಪ್ಪಿದ ಟಿಕ್ ಟಾಕ್ ಸ್ಟಾರ್, ಬಾಲ ನಟಿ ಅರುಣಿ ಕುರುಪ್
ಟಿಕ್ ಟಾಕ್ ಮೂಲಕ ಇತ್ತೀಚಿನ ದಿನಗಳಲ್ಲಿ ಅನೇಕರು ಸ್ಟಾರ್ ಆಗುತ್ತಿದ್ದಾರೆ. ಮಕ್ಕಳಿಂದ ಹಿಡಿದು ವಯಸ್ಸಾದವರು ಸಹ ಈ ಟಿಕ್ ಟಾಕ್ ಮಾಡಿ ವಿಡಿಯೋವನ್ನು ಹರಿಬಿಡುತ್ತಾರೆ. ಹೀಗೆ ಟಿಕ್ ಟಾಕ್ ಮೂಲಕ ಖ್ಯಾತಿಗಳಿದ್ದ ಪುಟ್ಟ ಪೋರಿ ಅರುಣಿ ಕುರುಪ್ ನಿಗೂಢ ಖಾಯಿಲೆಯಿಂದ ಸಾವನ್ನಪ್ಪಿದ್ದಾರೆ.
9 ವರ್ಷದ ಅರುಣಿ ಕುರುಪ್ ಮೂಲತಹ ಕೇರಳದವರು. ನಾಲ್ಕನೆ ತರಗತಿ ಓದುತ್ತಿದ್ದ ಅರುಣಿ ಅಪರೂಪದ ಕಾಯಿಲೆಗೆ ತುತ್ತಾಗಿ ಇಹಲೋಕ ತ್ಯಜಿಸಿದ್ದಾರೆ. ಕಳೆದ ಕೆಲವು ದಿಗಳ ಹಿಂದೆ ದಿಢೀರನೆ ಜ್ವರ ಮತ್ತು ತೀವ್ರ ತಲೆನೋವು ಕಾಣಿಸಿಕೊಂಡ ಹಿನ್ನಲೆ ಅರುಣಿಯನ್ನು ತಕ್ಷಣ ತಿರುವನಂತಪುರಂನ ಎಸ್ ಐ ಟಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಎರಡು ದಿನಗಳು ಐಸಿಯುನಲ್ಲಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ಅರುಣಿ ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ. ಅರುಣಿ ಟಿಕ್ ಟಾಕ್ ಮೂಲಕ ಸಾಕಷ್ಟು ಖ್ಯಾತಿಗಳಿಸಿದ್ದರು. ದೊಡ್ಡ ಫ್ಯಾನ್ ಫಾಲೋವರ್ಸ್ ಹೊಂದಿರುವ ಅರುಣಿ ಸುಮಾರು 14 ಸಾವಿರಕ್ಕು ಹೆಚ್ಚು ಫಾಲೋವರ್ಸ್ ಅನ್ನು ಹೊಂದಿದ್ದಾರೆ.

ಕೇವಲ ಟಿಕ್ ಟಾಕ್ ಮಾತ್ರವಲ್ಲದೆ ಬಾಲ ನಟಿಯಾಗಿಯು ಮಲಯಾಳಂನ ಕೆಲವು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಬಟ್ಟಲು ಕಣ್ಣಿನ ಮುದ್ದಾದ ಅರುಣಿಯ ಟಿಕ್ ಟಾಕ್ ವಿಡಿಯೋಗೆ ಸಾಕಷ್ಟು ಮಂದಿ ಫಿದಾ ಆಗಿದ್ದಾರೆ. ಆಕೆಯ ಎಕ್ಸ್ ಪ್ರೆಶನ್, ಹಾಗೂ ಹಳೆಯ ನಟಿಯರ ಡೈಲಾಗ್ ಮತ್ತು ಹಾಡುಗಳಿಗೆ ಅದ್ಭುತವಾಗಿ ನಟಿಸುತ್ತಿದ್ದರು. ಅರುಣಿ ನಿಧನದ ಸುದ್ದಿ ಕೇಳಿ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸಂತಾಪ ವ್ಯಕ್ತವಾಗಿದೆ.


Click it and Unblock the Notifications











