ಹಿಮಾಚಲ ಪ್ರದೇಶದ ಭೀಕರ ಪ್ರವಾಹದಲ್ಲಿ ಸಿಲುಕಿಕೊಂಡ ಖ್ಯಾತ ನಟಿ
ಮಂಜಿನ ನಾಡು ಹಿಮಾಚಲ ಪ್ರದೇಶದಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದ ಭೀಕರ ಪ್ರವಾಹ ಉಂಟಾಗಿದೆ. ಜಳಪ್ರಳಯಕ್ಕೆ ಸುಮಾರು 22 ಮಂದಿ ಸಾವಿಗೀಡಾಗಿದ್ದಾರೆ. ಹಿಮಾಚಲ ಪ್ರದೇಶದ ಪ್ರಯಳದಲ್ಲಿ ದಕ್ಷಿಣ ಭಾರತದ ನಟಿ ಮಲಯಾಳಂನ ಲೇಡಿ ಸೂಪರ್ ಸ್ಟಾರ್ ಮಂಜು ವಾರಿಯರ್ ಮತ್ತು ಚಿತ್ರತಂಡ ಸಿಲುಕಿಕೊಂಡಿದ್ದಾರೆ.
ಚಿತ್ರೀಕರಣಕ್ಕೆಂದು ಜುಲೈ 25ಕ್ಕೆ ಹಿಮಾಚಲ ಪ್ರದೇಶಕ್ಕೆ ತೆರಳಿದ್ದ ಸುಮಾರು 30 ಮಂದಿ ಚಿತ್ರತಂಡ ಈಗ ನೆರೆಯಲ್ಲಿ ಸಿಲುಕಿ ಪ್ರಾಣಾಪಾಯದಲ್ಲಿದ್ದಾರೆ. ಹಿಮಾಚಲ ಪ್ರದೇಶದ ಗುಡ್ಡಗಾಡು ಪ್ರಾಂತ್ಯ ಚಟ್ರೂ ಪ್ರದೇಶದಲ್ಲಿ ಚಿತ್ರೀಕರಣ ಮಾಡುತ್ತಿದ್ದ ಚಿತ್ರತಂಡ ಭಾರಿ ಮಳೆ ಮತ್ತು ನೆರೆಯಿಂದ ನಡುಗಡ್ಡೆ ಪ್ರದೇಶದಲ್ಲೆ ಸಿಲುಕಿಕೊಂಡಿದ್ದಾರೆ.
Recommended Video
ಚಟ್ರೂ ಪ್ರದೇಶದಲ್ಲಿ ಸುಮಾರು 200 ಜನ ನೆಲೆಸಿದ್ದಾರೆ. ಆದ್ರೆ ಅವರನ್ನು ರಕ್ಷಿಸಿ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ ಎಂದು ಹಿಮಾಚಲ ಪ್ರದೇಶದ ಮುಖ್ಯ ಮಂತ್ರಿ ಹೇಳಿದ್ದಾರೆ. ನೆರೆಯ ಬಗ್ಗೆ ಮೊದಲೆ ಸೂಚನೆ ನೀಡಿದ್ದೆವು, ಅದ್ರೆ ಅವರು ಈ ಬಗ್ಗೆ ಗಮನ ಹರಿಸಿಲ್ಲ ಎಂದು ಸಿಎಂ ಹೇಳಿದ್ದಾರೆ.

ಹಿಮಾಚಲ ಪ್ರದೇಶದಲ್ಲಿ ಪ್ರವಾಹ ಹೆಚ್ಚಾಗುತ್ತಿದ್ದಂತೆ ಸಂಪರ್ಕ ಕಡಿತಗೊಂಡಿದೆ. ಕುಟುಂಬದವರೊಂದಿಗೆ ಸಂಪರ್ಕ ಸಾಧಿಸಲು ಮಂಜು ವಾರಿಯರ್ ಮತ್ತು ಚಿತ್ರತಂಡಕ್ಕೆ ಸದ್ಯವಾಗಲಿಲ್ಲ. ಕುಟುಂಬದವರು ಸಹ ಆತಂಕಗೊಂಡಿದ್ದಾರೆ. ಮಂಜು ವಾರಿಯರ್ ಸಹೋದರ ಮಧು ವಾರಿಯರ್ ಕೇರಳ ಅಧಿಕಾರಿಗಳ ಸಹಾಯದೊಂದಿಗೆ ಅರುಣಾಚಲ ಪ್ರದೇಶ ಸಿಎಂ ಅವರನ್ನು ಸಂಪರ್ಕ ಮಾಡಿ ಸುರಕ್ಷಿತವಾಗಿರುವ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರಂತೆ.
ಸದ್ಯ ಇಡೀ ಚಿತ್ರತಂಡ ಸುರಕ್ಷಿತವಾಗಿದೆ ಎನ್ನುವ ಮಾಹಿತಿಯನ್ನು ಮಂಜು ವಾರಿಯರ್ ಸಹೋದರ ತಿಳಿಸಿದ್ದಾರೆ. ಮಂಜು ವಾರಿಯರ್ ಸದ್ಯ ಮೂರ್ನಾಲ್ಕು ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. 2014ರಲ್ಲಿ ಮಲಯಾಳಂ ನಟ ದಿಲೀಪ್ ಜೊತೆ 24 ವರ್ಷಗಳ ದಾಪಂತ್ಯ ಜೀವನ ಮುರಿದುಕೊಂಡಿರುವ ನಟಿ ಮಂಜು ವಾರಿಯರ್ ದೀರ್ಘಕಾಲದ ನಂತರ ಮತ್ತೆ ಬಣ್ಣಹಚ್ಚಿದ್ದರು.


Click it and Unblock the Notifications











