ದೂರದ ಮಲೇಷಿಯಾದಲ್ಲಿ ರಾಕಿಂಗ್ ಸ್ಟಾರ್ ಯಶ್ ಅಭಿಮಾನಿ ಸಂಘದಿಂದ ಮಹತ್ಕಾರ್ಯ!
ಕಳೆದೊಂದು ವಾರದಿಂದ ನಟ ಯಶ್ ಸುದ್ದಿಯಲ್ಲಿದ್ದಾರೆ. 'ಟಾಕ್ಸಿಕ್' ಸಿನಿಮಾ ಅಪ್‌ಡೇಟ್ ಸಿಗದೇ ಇದ್ದರೂ ರಾಕಿಭಾಯ್ ಹೊಸ ಲುಕ್ ಸದ್ದು ಮಾಡ್ತಿದೆ. ಮುಖೇಶ್ ಅಂಬಾನಿ ಮಗನ ಮದುವ ಸಮಾರಂಭದಲ್ಲಿ ನಟ ಯಶ್ ಪತ್ನಿ ರಾಧಿಕಾ ಪಂಡಿತ್ ಸಮೇತ ಭಾಗಿ ಆಗಿದ್ದರು. ಅವರ ಹೊಸ ಹೇರ್ ಸ್ಟೈಲ್ ಸಖತ್ ವೈರಲ್ ಆಗ್ತಿದೆ.
ಗೀತು ಮೋಹನ್ ದಾಸ್ ನಿರ್ದೇಶನದಲ್ಲಿ 'ಟಾಕ್ಸಿಕ್' ಸಿನಿಮಾ ನಿರ್ಮಾಣವಾಗುತ್ತಿದೆ. ಮುಂದಿನ ವರ್ಷ ಏಪ್ರಿಲ್ 10ಕ್ಕೆ ಸಿನಿಮಾ ತೆರೆಗೆ ಬರಲಿದೆ. ಸದ್ದಿಲ್ಲದೇ ಸಿನಿಮಾ ಚಿತ್ರೀಕರಣ ನಡೆಯುತ್ತಿದೆ. ಆದರೆ ಈ ಬಗ್ಗೆ ಯಾವುದೇ ಸುಳಿವು ಬಿಟ್ಟುಕೊಟ್ಟಿದ್ದಾರೆ. ಇನ್ನು ಇಷ್ಟು ಉದ್ದ ಕೂದಲಿನ ಹೇರ್‌ಸ್ಟೈಲ್‌ನಲ್ಲಿ ಮಿಂಚುತ್ತಿದ್ದ ಯಶ್ ದಿಢೀರನ್ ಕೊಂಚ ಟ್ರಿಮ್ ಆಗಿ ಖಡಕ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ.

ಯಶ್ ಹೊಸ ಲುಕ್ ಅಭಿಮಾನಿಗಳ ಮನಗೆದ್ದಿದೆ. ಅನಂದ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ಮದುವೆ ಸಮಾರಂಭದಲ್ಲಿ ರಾಕಿ ನಯಾ ಅವತಾರ್ ವೈರಲ್ ಆಗಿತ್ತು. ಮದುವೆ ಮನೆಯ ಫೋಟೊ, ವೀಡಿಯೋಗಳು ವೈರಲ್ ಆಗುತ್ತಿದೆ. ಕೆಲವರು ಯಶ್ ಜೊತೆ ಕ್ಲಿಕ್ಕಿಸಿಕೊಂಡಿರುವ ಫೋಟೊಗಳು ಸದ್ದು ಮಾಡ್ತಿದೆ. ಇದೀಗ ಮಲೇಷಿಯಾದಲ್ಲಿರುವ ಯಶ್ ಅಭಿಮಾನಿಗಳ ಸಮಾಜಮುಖಿ ಕೆಲಸ ಗಮನ ಸೆಳೆದಿದೆ.
ಸ್ಟಾರ್ ನಟರು, ಅವರ ಅಭಿಮಾನಿಗಳು ಸಹಾಯಹಸ್ತ ಚಾಚುವುದು ಹೊಸದೇನು ಅಲ್ಲ. ಹಸಿದವರಿಗೆ ಅನ್ನ ನೀಡುವುದರಿಂದ ಹಿಡಿದು ನಾನಾ ರೀತಿಯ ಸಮಾಜಮುಖಿ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಪ್ಯಾನ್ ಇಂಡಿಯಾ ಟ್ರೆಂಡ್ ಶುರುವಾದ ಮೇಲೆ ಸೌತ್ ಸ್ಟಾರ್ಸ್‌ಗೆ ವಿದೇಶಗಳಲ್ಲಿ ಅಭಿಮಾನಿಗಳ ಸಂಖ್ಯೆ ಹೆಚ್ಚಾಯಿತು. 'KGF' ಸರಣಿ ಸಿನಿಮಾಗಳಿಂದ ವಿದೇಶದಲ್ಲಿ ರಾಕಿಂಗ್ ಸ್ಟಾರ್ ಕ್ರೇಜ್ ಶುರುವಾಗಿದೆ.
ವಿದೇಶಗಳಲ್ಲಿ ನಟ ಯಶ್ ಅಭಿಮಾನಿ ಸಂಘಗಳು ಹುಟ್ಟಿಕೊಂಡಿದೆ. ಸದ್ಯ ಮಲೇಷಿಯಾದಲ್ಲಿರುವ ಯಶ್ ಅಭಿಮಾನಿ ಸಂಘ ಅಲ್ಲಿನ ವಿಶೇಷ ಚೇತನ ಮಕ್ಕಳ ಆಶ್ರಮಕ್ಕೆ ಊಟ ನೀಡಿದ್ದಾರೆ. ಆ ಮಕ್ಕಳ ಜೊತೆ ತಾವು ಊಟ ಮಾಡಿ ಖುಷಿಪಟ್ಟಿದ್ದಾರೆ. ಅದಕ್ಕೆ ಸಂಬಂಧಿಸಿದ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
'KGF' ಸರಣಿ ಸಿನಿಮಾಗಳು ಮಲೇಷಿಯಾದಲ್ಲಿ ದೊಡ್ಡಮಟ್ಟಕ್ಕೆ ಸದ್ದು ಮಾಡಿತ್ತು. ಮುಖ್ಯವಾಗಿ ತಮಿಳು ವರ್ಷನ್‌ಗೆ ಒಳ್ಳೆ ರೆಸ್ಪಾನ್ಸ್ ಸಿಕ್ಕಿತ್ತು. ಕೆಲ ದಿನಗಳ ಹಿಂದೆ ಮಲೇಷಿಯಾದಲ್ಲಿ ಯಶ್ ಚಿನ್ನದ ಮಳಿಗೆ ಉದ್ಘಾಟನೆ ಮಾಡಿದ್ದರು. ಆಗ ಅಲ್ಲಿಗೆ ಹೋಗಿದ್ದ ರಾಕಿಂಗ್ ಸ್ಟಾರ್‌ಗೆ ಅಭಿಮಾನಿಗಳಿಂದ ಅದ್ಭುತ ರೆಸ್ಪಾನ್ಸ್ ಸಿಕ್ಕಿತ್ತು. ಅಲ್ಲಿ ಯಶ್‌ಗೆ ಇರುವ ಕ್ರೇಜ್ ನೋಡಿ ಅವರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿತ್ತು.
ಚಿನ್ನದ ಮಳಿಗೆ ಉದ್ಘಾಟನೆಗೆ ತೆರಳಿದ್ದ ಯಶ್‌ಗೆ ಭಾರೀ ಸ್ವಾಗತ ಸಿಕ್ಕಿತ್ತು. ಉದ್ಘಾಟನೆ ಬಳಿಕ 'KGF' ಸಿನಿಮಾ ಡೈಲಾಗ್ ಹೇಳಿ ಅಭಿಮಾನಿಗಳ ಮನಗೆದ್ದಿದ್ದರು. ಕೆಲ ತಮಿಳು ನಟರಿಗೂ ಮಲೇಷಿಯಾದಲ್ಲಿ ಅಭಿಮಾನಿ ಸಂಘಗಳಿವೆ. ಇದೀಗ ಯಶ್ ಅಭಿಮಾನಿ ಸಂಘ ಅಲ್ಲಿ ಸಮಾಜಮುಖಿ ಕೆಲಸಗಳನ್ನು ಹಮ್ಮಿಕೊಂಡಿರುವುದು ವಿಶೇಷ.
'ಟಾಕ್ಸಿಕ್' ಮಾತ್ರವಲ್ಲದೇ ಬಾಲಿವುಡ್‌ನ 'ರಾಮಾಯಣ' ಚಿತ್ರವನ್ನು ಯಶ್ ನಿರ್ಮಿಸಿ ನಟಿಸುತ್ತಿದ್ದಾರೆ. ನಿತೇಶ್ ತಿವಾರಿ ನಿರ್ದೇಶನದ ಚಿತ್ರದಲ್ಲಿ ರಾಮನಾಗಿ ರಣ್‌ಬೀರ್ ಕಪೂರ್, ಸೀತೆಯಾಗಿ ಸಾಯಿ ಪಲ್ಲವಿ ನಟಿಸುತ್ತಿದ್ದಾರೆ. ಬಹಳ ದೊಡ್ಡಮಟ್ಟದಲ್ಲಿ ಈ ಸಿನಿಮಾ ಪ್ರೇಕ್ಷಕರ ಮುಂದೆ ಬರಲಿದೆ.


Click it and Unblock the Notifications











