'ಮಾಲ್ಗುಡಿ ಡೇಸ್': ಮತ್ತೊಂದು ಹೊಸ ಪೋಸ್ಟರ್ ನಲ್ಲಿ ವಿಜಯ್ ರಾಘವೇಂದ್ರ

ಸಾಲು ಸಾಲು ಸಿನಿಮಾಗಳ ನಂತರ ಒಂದು ವಿಭಿನ್ನ ಸಿನಿಮಾ ಮೂಲಕ ವಿಜಯ್ ರಾಘವೇಂದ್ರ ಬರುತ್ತಿದ್ದಾರೆ. ಈ ಹಿಂದೆಯೇ 'ಮಾಲ್ಗುಡಿ ಡೇಸ್' ಸಿನಿಮಾದ ಮೊದಲ ಪೋಸ್ಟರ್ ಗಮನ ಸೆಳೆದಿತ್ತು. ಇದೀಗ ಮತ್ತೊಂದು ಪೋಸ್ಟರ್ ಹೊರ ಬಂದಿದೆ.

ತಾತನ ಲುಕ್ ನಲ್ಲಿ ವಿಜಯ್ ರಾಘವೇಂದ್ರ ಕಾಣಿಸಿಕೊಂಡಿದ್ದಾರೆ. ಇದು ಅವರೇನಾ ಎಂದು ಪದೇ ಪದೇ ನೋಡಬೇಕು ಆ ರೀತಿ ಗುರುತು ಸಿಗದೆ ಇರುವ ರೀತಿ ಪಾತ್ರಕ್ಕಾಗಿ ಬದಲಾಗಿದ್ದಾರೆ. ಮನೆಯಿಂದ ಹೊರಗೆ ಕೈ ಕಟ್ಟಿ ನಿಂತುಕೊಂಡ ಈ ಪೋಸ್ಟರ್ ತುಂಬ ಚೆನ್ನಾಗಿದೆ.

65 ರಿಂದ 70ರ ಅಸುಪಾಸಿನ ಪಾತ್ರ ಇದಾಗಿದೆ. ಈ ಪಾತ್ರ ನಿರ್ವಹಿಸುತ್ತಿರುವ ವಿಜಯ್ ರಾಘವೇಂದ್ರಗೆ ಮೆಚ್ಚುಗೆ ಮಾತುಗಳು ಬಂದಿವೆ. ಪೋಸ್ಟರ್ ಪಾಸಿಟಿವ್ ರೆಸ್ಪಾನ್ಸ್ ಪಡೆದಿದೆ. ಅದರ ಮೇಲೆ 'ಕೆಲವು ಕಥೆಗಳು ಅಂತ್ಯದಲ್ಲಿಯೇ ಆರಂಭ ಆಗುತ್ತದೆ' ಎಂದು ಬರೆಯಲಾಗಿದೆ. ಪೋಸ್ಟರ್ ಸಿನಿಮಾದ ಮೇಲೆ ನಂಬಿಕೆ ಹುಟ್ಟು ಹಾಕಿದೆ.

Malgudi Days Kannada Movie New Poster Out

ಕಿಶೋರ್ ಮೂಡಬಿದ್ರೆ ಈ ಸಿನಿಮಾದ ಕಥೆ, ಚಿತ್ರಕಥೆ ಸಂಭಾಷಣೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಶಶಾಂಕ್ ನಾರಾಯಣ್, ಸಾತ್ವಿಕ್ ಹೆಬ್ಬಾರ್, ಸಂದೀಪ್ ಬೆದ್ರ, ಕರುಣಾಕರ್ ಉಡುಪಿ ನಿರ್ದೇಶಕರ ತಂಡಕ್ಕೆ ಕೆಲಸ ಮಾಡಿದ್ದಾರೆ. ಗಗನ್ ಬಡೇರಿಯಾ ಸಂಗೀತ ನೀಡಿದ್ದಾರೆ.

ಗ್ರೀಷ್ಮ ಶ್ರೀಧರ್ ಸಿನಿಮಾದ ನಾಯಕಿ ಆಗಿದ್ದಾರೆ. ರತ್ನಾಕರ್ ಕಾಮತ್ ನಿರ್ಮಾಣ ಮಾಡಿದ್ದಾರೆ. ಸಿನಿಮಾ 2020ರ ಜನವರಿ ತಿಂಗಳಿನಲ್ಲಿ ಬಿಡುಗಡೆ ಆಗಲಿದೆ.

More from Filmibeat

English summary
Malgudi Days kannada movie new poster out.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X