twitter
    For Quick Alerts
    ALLOW NOTIFICATIONS  
    For Daily Alerts

    'ಮಾಲ್ಗುಡಿ ಡೇಸ್': ಮತ್ತೊಂದು ಹೊಸ ಪೋಸ್ಟರ್ ನಲ್ಲಿ ವಿಜಯ್ ರಾಘವೇಂದ್ರ

    |

    ಸಾಲು ಸಾಲು ಸಿನಿಮಾಗಳ ನಂತರ ಒಂದು ವಿಭಿನ್ನ ಸಿನಿಮಾ ಮೂಲಕ ವಿಜಯ್ ರಾಘವೇಂದ್ರ ಬರುತ್ತಿದ್ದಾರೆ. ಈ ಹಿಂದೆಯೇ 'ಮಾಲ್ಗುಡಿ ಡೇಸ್' ಸಿನಿಮಾದ ಮೊದಲ ಪೋಸ್ಟರ್ ಗಮನ ಸೆಳೆದಿತ್ತು. ಇದೀಗ ಮತ್ತೊಂದು ಪೋಸ್ಟರ್ ಹೊರ ಬಂದಿದೆ.

    ತಾತನ ಲುಕ್ ನಲ್ಲಿ ವಿಜಯ್ ರಾಘವೇಂದ್ರ ಕಾಣಿಸಿಕೊಂಡಿದ್ದಾರೆ. ಇದು ಅವರೇನಾ ಎಂದು ಪದೇ ಪದೇ ನೋಡಬೇಕು ಆ ರೀತಿ ಗುರುತು ಸಿಗದೆ ಇರುವ ರೀತಿ ಪಾತ್ರಕ್ಕಾಗಿ ಬದಲಾಗಿದ್ದಾರೆ. ಮನೆಯಿಂದ ಹೊರಗೆ ಕೈ ಕಟ್ಟಿ ನಿಂತುಕೊಂಡ ಈ ಪೋಸ್ಟರ್ ತುಂಬ ಚೆನ್ನಾಗಿದೆ.

    'ಚೌಕ' ನಂತರ ಒಟ್ಟಿಗೆ ಬರ್ತಿದ್ದಾರೆ ವಿಜಯ್ ರಾಘವೇಂದ್ರ ಮತ್ತು ಪ್ರಜ್ವಲ್ 'ಚೌಕ' ನಂತರ ಒಟ್ಟಿಗೆ ಬರ್ತಿದ್ದಾರೆ ವಿಜಯ್ ರಾಘವೇಂದ್ರ ಮತ್ತು ಪ್ರಜ್ವಲ್

    65 ರಿಂದ 70ರ ಅಸುಪಾಸಿನ ಪಾತ್ರ ಇದಾಗಿದೆ. ಈ ಪಾತ್ರ ನಿರ್ವಹಿಸುತ್ತಿರುವ ವಿಜಯ್ ರಾಘವೇಂದ್ರಗೆ ಮೆಚ್ಚುಗೆ ಮಾತುಗಳು ಬಂದಿವೆ. ಪೋಸ್ಟರ್ ಪಾಸಿಟಿವ್ ರೆಸ್ಪಾನ್ಸ್ ಪಡೆದಿದೆ. ಅದರ ಮೇಲೆ 'ಕೆಲವು ಕಥೆಗಳು ಅಂತ್ಯದಲ್ಲಿಯೇ ಆರಂಭ ಆಗುತ್ತದೆ' ಎಂದು ಬರೆಯಲಾಗಿದೆ. ಪೋಸ್ಟರ್ ಸಿನಿಮಾದ ಮೇಲೆ ನಂಬಿಕೆ ಹುಟ್ಟು ಹಾಕಿದೆ.

    Malgudi Days Kannada Movie New Poster Out

    ಕಿಶೋರ್ ಮೂಡಬಿದ್ರೆ ಈ ಸಿನಿಮಾದ ಕಥೆ, ಚಿತ್ರಕಥೆ ಸಂಭಾಷಣೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಶಶಾಂಕ್ ನಾರಾಯಣ್, ಸಾತ್ವಿಕ್ ಹೆಬ್ಬಾರ್, ಸಂದೀಪ್ ಬೆದ್ರ, ಕರುಣಾಕರ್ ಉಡುಪಿ ನಿರ್ದೇಶಕರ ತಂಡಕ್ಕೆ ಕೆಲಸ ಮಾಡಿದ್ದಾರೆ. ಗಗನ್ ಬಡೇರಿಯಾ ಸಂಗೀತ ನೀಡಿದ್ದಾರೆ.

    ಮತ್ತೊಮ್ಮೆ 'ಮಾಲ್ಗುಡಿ ಡೇಸ್': ಹೀರೋ ಆಗಿ 'ಚಿನ್ನಾರಿ ಮುತ್ತಾ' ವಿಜಯ್ ರಾಘವೇಂದ್ರಮತ್ತೊಮ್ಮೆ 'ಮಾಲ್ಗುಡಿ ಡೇಸ್': ಹೀರೋ ಆಗಿ 'ಚಿನ್ನಾರಿ ಮುತ್ತಾ' ವಿಜಯ್ ರಾಘವೇಂದ್ರ

    ಗ್ರೀಷ್ಮ ಶ್ರೀಧರ್ ಸಿನಿಮಾದ ನಾಯಕಿ ಆಗಿದ್ದಾರೆ. ರತ್ನಾಕರ್ ಕಾಮತ್ ನಿರ್ಮಾಣ ಮಾಡಿದ್ದಾರೆ. ಸಿನಿಮಾ 2020ರ ಜನವರಿ ತಿಂಗಳಿನಲ್ಲಿ ಬಿಡುಗಡೆ ಆಗಲಿದೆ.

    English summary
    Malgudi Days kannada movie new poster out.
    Friday, December 6, 2019, 17:34
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X