ಮತ್ತೊಮ್ಮೆ 'ಮಾಲ್ಗುಡಿ ಡೇಸ್': ಚಿತ್ರದ ಬಿಡುಗಡೆಯ ದಿನಾಂಕ ನಿಗದಿ

'ಮಾಲ್ಗುಡಿ ಡೇಸ್' ಎಂದ ಕೂಡಲೇ ಶಂಕರ್ ನಾಗ್ ನೆನಪಿಗೆ ಬರುತ್ತಾರೆ. ಆದರೆ, ಈಗ ಅದೇ ಹೆಸರಿನಲ್ಲಿ ನಟ ವಿಜಯ ರಾಘವೇಂದ್ರ ಸಿನಿಮಾ ಮಾಡುತ್ತಿರುವ ವಿಷಯ ಈಗಾಗಲೇ ಎಲ್ಲರಿಗೆ ತಿಳಿದಿದೆ. ಈ ಸಿನಿಮಾದ ಬಿಡುಗಡೆಯ ದಿನಾಂಕ ಇದೀಗ ನಿಗದಿಯಾಗಿದೆ.

ಮುಂದಿನ ತಿಂಗಳು ಸಿನಿಮಾವನ್ನು ರಿಲೀಸ್ ಮಾಡಲು ಪ್ಲಾನ್ ಮಾಡಲಾಗಿದೆ. ಫೆಬ್ರವರಿ 7 ರಂದು ಸಿನಿಮಾ ರಾಜ್ಯಾದಂತ್ಯ ಬಿಡುಗಡೆ ಆಗುತ್ತಿದೆ. ಕಥೆಗಳ ಊರಿನಲ್ಲಿ ಕಥೆಗಾರದ ಕಥೆ ಅಂದಿನಿಂದ ಪ್ರಾರಂಭವಾಗುತ್ತಿದೆ.

ಸಿನಿಮಾದ ಪೋಸ್ಟರ್ ಗಳು ಗಮನ ಸೆಳೆದಿವೆ. ವಯಸ್ಕನ ಪಾತ್ರದಲ್ಲಿ ನಟ ವಿಜಯ ರಾಘವೇಂದ್ರ ಲುಕ್ ತುಂಬ ಚೆನ್ನಾಗಿದೆ. ಅವರ ಪಾತ್ರದ ಮೇಲೆ ನಿರೀಕ್ಷೆ ಇದೆ. ಹೊಸತನವನ್ನು ಜನ ಬಯಸಿದ್ದಾರೆ. ಕಿಶೋರ್ ಮೂಡಬಿದ್ರೆ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ.

Malgudi Days Kannada Movie Will Be Releasing On February 7th 2020

ಕೆ ರತ್ನಾಕರ್ ಸಿನಿಮಾಗೆ ಬಂಡವಾಳ ಹಾಕಿದ್ದಾರೆ. ಸಾತ್ವಿಕ್ ಹೆಬ್ಬಾರ್, ಸಂದೀಪ್ ಬೆದ್ರ, ಕರುನಾಕರ್ ಉಡುಪಿ ಹಾಗೂ ಶಶಾಂಕ್ ನಾರಾಯಣ್ ನಿರ್ದೇಶಕರ ತಂಡದಲ್ಲಿ ಕೆಲಸ ಮಾಡಿದ್ದಾರೆ. ಗಗನ್ ಬಡೇರಿಯಾ ಸಂಗೀತ ನೀಡಿದ್ದಾರೆ.

ವಿಜಯ ರಾಘವೇಂದ್ರ ಈ ಸಿನಿಮಾದ ಮೂಲಕ ಹೊಸ ಪ್ರಯೋಗಕ್ಕೆ ಕೈ ಹಾಕಿದ್ದು, ಈ ಚಿತ್ರ ಅವರಿಗೆ ಬ್ರೇಕ್ ನೀಡುತ್ತದೆಯೇ ಎನ್ನುವ ನಿರೀಕ್ಷೆ ಇದೆ.

More from Filmibeat

English summary
Malgudi Days kannada movie will be releasing on february 7th 2020.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X