For Quick Alerts
  ALLOW NOTIFICATIONS  
  For Daily Alerts

  'ಗೂಳಿ ಹಟ್ಟಿ'ಯಲ್ಲಿ ಮಮತಾ ರಾವತ್ ಮಸಾಲೆ

  By ರವಿಕಿಶೋರ್
  |

  ಸ್ಯಾಂಡಲ್ ವುಡ್ ಗೆ ಮತ್ತೊಬ್ಬ ಐಟಂ ಬೆಡಗಿಯ ಪಾದಾರ್ಪಣೆಯಾಗಿದೆ. ಐಟಂ ರಾಣಿ ಎಂದ ಮೇಲೆ ಅವರೇನು ಲಾಲಿ ಹಾಡು ಬಂದಿಲ್ಲ, ಪೋಲಿ ಹಾಡೊಂದಕ್ಕೆ ಹೆಜ್ಜೆ ಹಾಕಲು ಬಂದಿದ್ದಾರೆ. ಐಟಂ ಹಾಡಿಗೆ ಹೆಜ್ಜೆ ಹಾಕುತ್ತಿರುವ ಬೆಡಗಿ ಹೆಸರು ಮಮತಾ ರಾವತ್. ಈ ಹಿಂದೆ ಇವರು 'ಆಶೀರ್ವಾದ' ಚಿತ್ರದಲ್ಲೂ ತಮ್ಮ ಸೊಂಟ ಬಳುಕಿಸಿದ್ದರು.

  'ಗೂಳಿ ಹಟ್ಟಿ' ಎಂಬ ವಿವಾದಾತ್ಮಕ ಶೀರ್ಷಿಕೆಯನ್ನಿಟ್ಟುಕೊಂಡು ನಿರ್ಮಾಣವಾಗುತ್ತಿರುವ ಚಿತ್ರದಲ್ಲಿ ಇದೀಗ ತಮ್ಮ ಮೈಮಾಟ ತೋರಲು ಬಂದಿದ್ದಾರೆ. ಈ ಸಿನಿಮಾದಲ್ಲಿ ನಟಿ ಮಮತಾ ರಾವತ್ ಅವರು ಐಟಂ ಹಾಡಿಗೆ ಹೆಜ್ಜೆ ಹಾಕಿದ್ದಾರೆ. "ಆಯಿಕೊಂಡ್ ತಿನ್ನೋರ ಮಧ್ಯೆ..." ಎಂಬ ಸಾಹಿತ್ಯವಿರುವ ಈ ಹಾಡಿಗೆ ಕಂಬಿ ರಾಜ್ ಅವರ ನೃತ್ಯ ನಿರ್ದೇಶನವಿದೆ.

  ಇತ್ತೀಚೆಗೆ ಈ ಹಾಡನ್ನು ಕಂಠೀರವ ಸ್ಟುಡಿಯೋದಲ್ಲಿ ಎರಡು ದಿನಗಳ ಕಾಲ ಚಿತ್ರೀಕರಣ ಮಾಡಲಾಗಿದೆ. ಇನ್ನೊಂದು ಹಾಡು ಹಾಗೂ ಮಾತಿನ ಭಾಗದ ಚಿತ್ರೀಕರಣ ಸ್ವಲ್ಪ ಉಳಿದಿದ್ದು ಮೇಲುಕೋಟೆಯಲ್ಲೂ ಚಿತ್ರೀಕರಣ ನಡೆಸಲಿದೆ.

  ಮೈಲಾರ ಲಿಂಗೇಶ್ವರ ಜಾತ್ರೆ ಚಿತ್ರೀಕರಣ

  ಮೈಲಾರ ಲಿಂಗೇಶ್ವರ ಜಾತ್ರೆ ಚಿತ್ರೀಕರಣ

  ಮೊದಲ ಬಾರಿಗೆ ಬಳ್ಳಾರಿಯ ಮೈಲಾರ ಲಿಂಗೇಶ್ವರ ಜಾತ್ರೆಯ ದೃಶ್ಯಗಳನ್ನು ಚಿತ್ರೀಕರಿಸಲಾಗಿರುವುದು ಈ ಚಿತ್ರದ ವಿಶೇಷಗಳಲ್ಲಿ ಒಂದು.

  ಹೆಲಿಕಾಪ್ಟರ್ ಬಳಸಿ ಚಿತ್ರೀಕರಣ

  ಹೆಲಿಕಾಪ್ಟರ್ ಬಳಸಿ ಚಿತ್ರೀಕರಣ

  ನಿರ್ಮಾಪಕರಾದ ಭಾರ್ಗವ ಹಾಗೂ ಎಚ್ ಎಂ ಅಶೋಕ್ ಅವರು ಅರ್ಜುನ್ ಎಂಟರ್ ಪ್ರೈಸಸ್ ಅಡಿಯಲ್ಲಿ ಅಪಾರ ವೆಚ್ಚದಲ್ಲಿ ಈ ಪ್ರಸಿದ್ಧ ಜಾತ್ರೆಯ ಸನ್ನಿವೇಶಗಳನ್ನು ಹೆಲಿಕಾಪ್ಟರ್ ಬಳಸಿ ಹಲವು ಕ್ಯಾಮರಾಗಳಲ್ಲಿ ಚಿತ್ರೀಕರಿಸಿಕೊಂಡಿದ್ದಾರೆ.

  ಪಾತ್ರವರ್ಗದಲ್ಲಿ ಯಾರ್ಯಾರಿದ್ದಾರೆ?

  ಪಾತ್ರವರ್ಗದಲ್ಲಿ ಯಾರ್ಯಾರಿದ್ದಾರೆ?

  ಪವನ್ ಸೂರ್ಯ, ತೇಜಸ್ವಿನಿ ಪ್ರಕಾಶ್, ದೊಡ್ಡಣ್ಣ, ಆದಿ ಲೋಕೇಶ್, ಸುಧಾ ಬೆಳವಾಡಿ, ಮಮತ ರಾವತ್, ಅಮನ್, ರಾಘವೇಂದ್ರ, ಮಹೇಶ್, ಅಪ್ಪುವೆಂಕಟೇಶ್, ರಂಗಾಯಣ ರಘು, ಅವಿನಾಶ್, ಶರತ್ ಲೋಹಿತಾಶ್ವ, ಸುರೇಶ್‍ಚಂದ್ರ, ಸ್ವಯಂವರ ಚಂದ್ರು, ಮೈಕೊ ನಾಗರಾಜ್, ಲಕ್ಷ್ಮಿ ದೇವಮ್ಮ ಹಾಗೂ ಇತರರು ತಾರಾಗಣದಲ್ಲಿ ಇದ್ದಾರೆ.

  ತಾಂತ್ರಿಕ ವರ್ಗದಲ್ಲಿ ಯಾರ್ಯಾರಿದ್ದಾರೆ?

  ತಾಂತ್ರಿಕ ವರ್ಗದಲ್ಲಿ ಯಾರ್ಯಾರಿದ್ದಾರೆ?

  ತಾಂತ್ರಿಕ ವರ್ಗದಲ್ಲಿ ಆರ್ ವಿ ನಾಗೇಶ್ವರ ರಾವ್ ಅವರ ಛಾಯಾಗ್ರಹಣ, ಶ್ರೀಮಂಜು ಅವರ ಸಂಗೀತ. ಬಾಬು ಖಾನ್ ಅವರ ಕಲೆ, ಅಲ್ಟಿಮೇಟ್ ಶಿವು, ಕುಂಗ್ ಫೂ ಚಂದ್ರು ಅವರ ಸಾಹಸ, ಸಂಜೀವ್ ರೆಡ್ಡಿ ಅವರ ಸಂಕಲನ ಚಿತ್ರಕ್ಕಿದೆ.

  ಶೀರ್ಷಿಕೆಯಲ್ಲೇ ಸೆಳೆದಿರುವ ಚಿತ್ರ

  ಶೀರ್ಷಿಕೆಯಲ್ಲೇ ಸೆಳೆದಿರುವ ಚಿತ್ರ

  ಇನ್ನು ಈ ಚಿತ್ರಕ್ಕೆ ಕೆ ಕಲ್ಯಾಣ್, ನಾಗೇಂದ್ರ ಪ್ರಸಾದ್, ಭಂಗಿರಂಗ, ಶಶಾಂಕ್, ತ್ಯಾಗರಾಜ್ ಅವರ ಗೀತಸಾಹಿತ್ಯವಿದ್ದು, ಗೂಳಿ ಹಟ್ಟಿ ಚಿತ್ರ ತನ್ನ ಶೀರ್ಷಿಕೆಯಿಂದಲೇ ಪ್ರೇಕ್ಷಕರಲ್ಲಿ ಅಪಾರ ಕುತೂಹಲ ಮೂಡಿಸಿರುವ ಚಿತ್ರ.

  English summary
  Hot actress Mamatha Rawat shakes a leg for hot song in Kannada movie Gooli Hatti. The film starring Pawan Surya and Tejaswini in lead roles.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X