»   » ತಮಿಳು 'ಬಿಗ್ ಬಾಸ್'ನಲ್ಲಿ ದುರಂತ: ಓರ್ವ ವ್ಯಕ್ತಿ ಸಾವು

ತಮಿಳು 'ಬಿಗ್ ಬಾಸ್'ನಲ್ಲಿ ದುರಂತ: ಓರ್ವ ವ್ಯಕ್ತಿ ಸಾವು

Posted By:
Subscribe to Filmibeat Kannada

ಸೂಪರ್ ಸ್ಟಾರ್ ಕಮಲ್ ಹಾಸನ್ ನಿರೂಪಣೆ ಮಾಡಿಕೊಡುವ ತಮಿಳಿನ ಖ್ಯಾತ ರಿಯಾಲಿಟಿ ಶೋ 'ಬಿಗ್ ಬಾಸ್'ನಲ್ಲಿ ಕಾರ್ಮಿಕನೊಬ್ಬ ಮೃತಪಟ್ಟಿದ್ದಾನೆ ಎಂದು ಪತ್ರಿಕೆಗಳು ವರದಿ ಮಾಡಿವೆ.

ಮುಂಬೈ ಮೂಲದ ಇಬ್ರಾಹಿಂ ಶೇಕ್ ಎಂಬುವರು ತಮಿಳಿನ 'ಬಿಗ್ ಬಾಸ್' ರಿಯಾಲಿಟಿ ಶೋ ಸೆಟ್ ನಲ್ಲಿ ಪ್ಲಂಬರ್ ಆಗಿ ಕೆಲಸ ಮಾಡುತ್ತಿದ್ದರು. ಬಿಗ್ ಬಾಸ್' ಕಾರ್ಯಕ್ರಮದ ವೇಲೆ ಸ್ಟುಡಿಯೋದಲ್ಲೇ ಇದ್ದಕ್ಕಿದ್ದಂತೆ ಇಬ್ರಾಹಿಂ ಕುಸಿದು ಬಿದ್ದಿದ್ದರು. ಕೂಡಲೇ ಅವರನ್ನ ಕೆಎಂಸಿ ಆಸ್ಪತ್ರೆಗೆ ದಾಖಲು ಮಾಡಲಾಯಿತು. ಆದ್ರೆ, ಮಾರ್ಗ ಮಧ್ಯದಲ್ಲೇ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.

'ತಮಿಳು ಬಿಗ್ ಬಾಸ್' ಬ್ಯಾನ್ ಮಾಡ್ಬೇಕಂತೆ!

Man dies on Bigg Boss Tamil sets, hosted by Kamal Haasan

28 ವರ್ಷದ ಇಬ್ರಾಹಿಂ ಶೇಕ್ ಈ ಸಾವಿಗೆ ನಿಖರವಾದ ಮಾಹಿತಿ ಸಿಕ್ಕಿಲ್ಲ. ಬಿಗ್ ಬಾಸ್ ಕಾರ್ಯಕ್ರಮ ಇದೇ ಮೊದಲನೇ ವರ್ಷ ತಮಿಳಿನಲ್ಲಿ ಪ್ರಸಾರವಾಗುತ್ತಿದೆ. ಈಗಾಗಲೇ ತಮಿಳಿನಾಡಿನಲ್ಲಿ ಈ ಕಾರ್ಯಕ್ರಮದ ಬಗ್ಗೆ ಹೆಚ್ಚು ಟೀಕೆಗಳು ಬಂದಿವೆ. ಹೀಗಿರುವಾಗ, ಈ ಸಾವು ಈ ಕಾರ್ಯಕ್ರಮಕ್ಕೆ ಮತ್ತೊಂದು ಕಪ್ಪುಚುಕ್ಕೆಯಾಗಿದೆ.

ಸಲ್ಮಾನ್, ಕಮಲ್ ಗಿಂತ ಸುದೀಪ್ 'ಬಿಗ್ ಬಾಸ್' ನಿರೂಪಣೆ ಚೆನ್ನಾಗಿದೆ ಎಂದಿದ್ದು ಯಾರು?

English summary
A 28-year-old man who worked as a plumber at the sets of Bigg Boss Tamil, hosted by Kamal Haasan, died of a seizure on Tuesday, a report says

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada