Don't Miss!
- News
ಮಂಗಳೂರಿನಲ್ಲಿ ಚಾಕು ಇರಿತದಿಂದ ಜ್ಯುವೆಲ್ಲರಿ ಅಂಗಡಿ ಸಿಬ್ಬಂದಿ ಸಾವು
- Automobiles
ಕಡಿಮೆ ಬೆಲೆಯ ಟಾಟಾ ಎಲೆಕ್ಟ್ರಿಕ್ ಕಾರಿನ ವಿತರಣೆ ಪ್ರಾರಂಭ: 2,000 ಕಾರುಗಳ ಹಸ್ತಾಂತರ
- Sports
Border-Gavaskar Trophy: ಭಾರತ ವಿರುದ್ಧ ಮೊದಲ ಪಂದ್ಯದಲ್ಲಿ ಈ ವೇಗಿ ಬೌಲಿಂಗ್ ಮಾಡಲ್ಲ; ಪ್ಯಾಟ್ ಕಮ್ಮಿನ್ಸ್
- Finance
ಅದಾನಿ ಗ್ರೂಪ್ ಬಿಕ್ಕಟ್ಟಿನ ಮಧ್ಯೆ ಭರವಸೆ ನೀಡಿದ ವಿತ್ತ ಸಚಿವೆ, ಹೇಳಿದ್ದೇನು?
- Lifestyle
ಗಂಡ-ಹೆಂಡತಿ ಜಗಳವಾಡಿದರೆ ಈ ಪ್ರಯೋಜನಗಳೂ ಇವೆ!
- Technology
ಕ್ಯಾನನ್ ಕಂಪೆನಿಯಿಂದ ಹೊಸ ಪ್ರಿಂಟರ್ ಬಿಡುಗಡೆ! ಏನೆಲ್ಲಾ ಸೌಲಭ್ಯವಿದೆ ಗೊತ್ತಾ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಉಡುಪಿಯಲ್ಲಿ ರಿಯಲ್ 'ಕಾಂತಾರ': ಕೋರ್ಟ್‌ಗೆ ಹೋದ ವ್ಯಕ್ತಿ ಅಸಹಜ ಸಾವು!
"ಕೋರ್ಟ್‌ಗೆ ಹೋಗ್ತಿ, ಆದರೆ ನಿನ್ನ ತೀರ್ಮಾನ ಮೆಟ್ಲಲ್ಲಿ ನಾನು ಮಾಡುತ್ತೇನೆ", ಎಂದು ಪಂಜುರ್ಲಿ ದೈವ ನುಡಿಯುತ್ತದೆ. ಆದರೂ ಇದನ್ನು ಲೆಕ್ಕಿಸದೆ ಕೋರ್ಟ್ ಮೆಟ್ಟಿಲೇರಿದ ವ್ಯಕ್ತಿ ರಕ್ತಕಾರಿ ಸಾವನ್ನಪ್ಪುತ್ತಾನೆ. ಇದು ಕನ್ನಡದ ಸೂಪರ್ ಹಿಟ್ ಮೂವಿ ಕಾಂತಾರ ಸಿನಿಮಾದ ರೀಲ್ ಸ್ಟೋರಿ. ಆದರೆ ಉಡುಪಿಯಲ್ಲಿ ಇದೇ ರೀತಿಯ ನೈಜ ಘಟನೆಯೊಂದು ನಡೆದಿದೆ.
ಉಡುಪಿ ಜಿಲ್ಲೆಯ ಪಡುಬಿದ್ರೆ ತಾಲೂಕಿನ ಪಡುಹಿತ್ಲು ಗ್ರಾಮದಲ್ಲಿ ದೈವಕೋಲದ ವಿಚಾರದಲ್ಲಿ ಕೋರ್ಟ್ ಮೆಟ್ಟಿಲೇರಿದ್ದ ವ್ಯಕ್ತಿ ದೈವದ ತಂಬಿಲ ಸೇವೆ ಸಂದರ್ಭದಲ್ಲಿ ಸ್ಥಾನದ ಎದುರೇ ಕುಸಿದುಬಿದ್ದು ಸಾವನ್ನಪ್ಪಿದ್ದು, ಊರ ಜನ ಮೂಕವಿಸ್ಮಿತರಾಗಿದ್ದಾರೆ. ಪಡುಹಿತ್ಲು ಗ್ರಾಮದಲ್ಲಿ ಜಾರಂದಾಯ ಬಂಟ ದೈವಸ್ಥಾನದಲ್ಲಿ ವರ್ಷಕ್ಕೊಮ್ಮೆ ವಿಜೃಂಭಣೆಯ ನೇಮೋತ್ಸವ ನಡೆಯುತ್ತದೆ. ಈ ನೇಮದಲ್ಲಿ ಸಮಸ್ತ ಊರವರು ಭಾಗಿಯಾಗುತ್ತಾರೆ. ಈ ದೈವಸ್ಥಾನ ನೋಡಿಕೊಳ್ಳಲು ಪಡುಹಿತ್ಲು ಜಾರಂದಾಯ ಬಂಟ ಸೇವಾ ಸಮಿತಿ ಇದೆ. ಈ ಸಮಿತಿಯಲ್ಲಿ ಪ್ರಕಾಶ್ ಶೆಟ್ಟಿ ಅಧ್ಯಕ್ಷರಾಗಿದ್ದರು. ಸಮಿತಿ ಬದಲಾದಾಗ ಪ್ರಕಾಶ್ ಶೆಟ್ಟಿ ಸಹಜವಾಗಿ ಅಧಿಕಾರ ಕಳೆದುಕೊಂಡಿದ್ದಾರೆ. ಅಧಿಕಾರದ ಹಪಹಪಿಯಿಂದ ಪ್ರತ್ಯೇಕ ಟ್ರಸ್ಟ್ ರಚಿಸಿದ ಪ್ರಕಾಶ್ ಶೆಟ್ಟಿ, ಇಲ್ಲಿಯ ಭಂಡಾರ ಮನೆಯ ಗುರಿಕಾರರಾದ ಜಯ ಪೂಜಾರಿಯನ್ನು ಅಧ್ಯಕ್ಷರನ್ನಾಗಿ ನೇಮಿಸುತ್ತಾರೆ. ಹೀಗೆ 9 ಜನರ ಟ್ರಸ್ಟ್ ರಚಿಸಿದ ಪ್ರಕಾಶ್ ಶೆಟ್ಟಿ, ಇದರಲ್ಲಿ ಜಯ ಪೂಜಾರಿಯನ್ನು ಅಧ್ಯಕ್ಷರನ್ನಾಗಿ ನೇಮಿಸ್ತಾರೆ. ದೈವಸ್ಥಾನ ತಮಗೆ ಸೇರಿದ್ದು ಎಂದು ಹಕ್ಕು ಸ್ಥಾಪಿಸಲು ಯತ್ನಿಸುತ್ತಾರೆ.
ವರ್ಷಂಪ್ರತಿಯಂತೆ ಈ ವರ್ಷ ನೇಮೋತ್ಸವ ನಡೆಸಲು ಜಾರಂದಾಯ ದೈವಸ್ಥಾನ ಸಮಿತಿ ತೀರ್ಮಾನಿಸಿ, ಜನವರಿ 7 ರಂದು ಕೋಲ ನಡೆಸಲು ತೀರ್ಮಾನಿಸುತ್ತದೆ. ಇದರ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರುವ ಜಯಪೂಜಾರಿ ಮತ್ತು ಪ್ರಕಾಶ್ ಶೆಟ್ಟಿ ಕೋಲಕ್ಕೆ ತಡೆಯಾಜ್ಞೆ ತರುವಲ್ಲಿ ಯಶಸ್ವಿಯಾಗುತ್ತಾರೆ. ಆಶ್ಚರ್ಯದ ಸಂಗತಿ ಎಂದರೆ ಡಿಸೆಂಬರ್ 23ಕ್ಕೆ ತಡೆಯಾಜ್ಞೆ ತಂದ ಜಯಪೂಜಾರಿ, ಡಿಸೆಂಬರ್ 24 ರಂದು ಹಠಾತ್ ಕುಸಿದು ಬಿದ್ದು ಸಾವನ್ನಪ್ಪುತ್ತಾರೆ.
ಟ್ರಸ್ಟಿ ಪ್ರಕಾಶ್ ಶೆಟ್ಟಿ ಕೀಟಲೆ ಕೋರ್ಟ್‌ಗೆ ಮಾತ್ರ ಸೀಮಿತವಾಗಿರಲಿಲ್ಲ. ಬೇರೆ ಬೇರೆ ರೀತಿಯಲ್ಲಿ ಕಿರುಕುಳ ನೀಡುತ್ತಾರೆ. ಕೊನೆಗೆ ಜಾರಂದಾಯ ದೈವಸ್ಥಾನದ ದೈವ ನರ್ತಕ ಭಾಸ್ಕರ ಬಂಗೇರ ಅವರನ್ನು ಬೆದರಿಸಿ ತಾವು ಹೇಳುವ ರೀತಿ ದೈವದ ನುಡಿ ಕೊಡಬೇಕು ಎಂದು ಬೆದರಿಸಿತ್ತಾರೆ ಅಂತಾ ದೈವ ನರ್ತಕರು ಆರೋಪ ಮಾಡಿದ್ದಾರೆ.
ಉಡುಪಿ ಜಿಲ್ಲೆಯ ಪಡುಬಿದ್ರೆ ಜಾರಂದಾಯ ಬಂಟ ದೇವಸ್ಥಾನ ವಾರ್ಷಿಕ ನೇಮೋತ್ಸವದ ಗೊಂದಲದಿಂದ ಕೂಡಿದ ಹಿನ್ನಲೆಯಲ್ಲಿ ದೈವ ನೇಮೋತ್ಸವ ಮಾಡದೆ ಇರಲು ದೇವಸ್ಥಾನದ ಟ್ರಸ್ಟ್ ನಿರ್ಧಾರ ಮಾಡಿದೆ.ದೇವಸ್ಥಾನದ ಮುಂದೆ ನಿಂತು ಪ್ರಾರ್ಥನೆ ಸಲ್ಲಿಸಿದ ಟ್ರಸ್ಟ್ ಮುಖಂಡರು,ಕಾನೂನು ತೀರ್ಮಾನದ ನಂತರ ಮುಂದಿನ ನಿರ್ಧಾರ ಮಾಡಿದ್ದಾರೆ..ಈ ಹಿನ್ನಲೆಯಲ್ಲಿ ಜಾರಂದಾಯ ದೈವಕ್ಕೆ ನೇಮೋತ್ಸವ ಮಾಡದೆ ಇರಲು ನಿರ್ಧರಿಸಿದ್ದಾರೆ..ಸೂತಕ ಹಿನ್ನಲೆ ಇಂದು ನಡೆಯಬೇಕಿದ್ದ ನೇಮೋತ್ಸವನ್ನು ನೂತನ ಸಮಿತಿ ಮುಂದೂಡಿದೆ.
ಅಗೇಲು (ತಂಬಿಲ) ಸೇವೆ ವೇಳೆ ಕುಸಿದುಬಿದ್ದ ಜಯಪೂಜಾರಿ ಮೃತಪಟ್ಟು ಇಂದು ಏಳನೇ ದಿನವಾಗಿದ್ದು,ಹೀಗಾಗಿ ಜನವರಿ 13ಕ್ಕೆ ಕೋಲ ನಡೆಸಲು ನಿರ್ಧಾರ ಮಾಡಿದೆ.

ನೂತನ ಸಮಿತಿ ನಿರ್ಧಾರಕ್ಕೆ ಕೋರ್ಟ್ ಮೆಟ್ಟಿಲೇರಿದ್ದ ಪ್ರಕಾಶ್ ಶೆಟ್ಟಿ ವಿರೋಧ ವ್ಯಕ್ತಪಡಿಸಿದ್ದಾರೆ..ಇಂದು ಕೋಲ ನಿರ್ಧಾರ ಆಗಿರೋದು ಏಕಾಏಕಿ ಮುಂದೂಡಿದ್ದು ಸರಿಯಲ್ಲ.ಸೂತಕ ಇಡೀ ಗ್ರಾಮಕ್ಕೆ ಇಲ್ಲ ಹೀಗಾಗಿ ಕೋಲ ನಡೆಸಲೇ ಬೇಕು ಎಂದು ಪಟ್ಟು ಹಿಡಿದಿದ್ದಾರೆ..ಆದರೆ ದೈವ ನೇಮೋತ್ಸವ ಮಾಡದೆ ಇರಲು ದೇವಸ್ಥಾನದ ಟ್ರಸ್ಟ್ ನಿರ್ಧಾರಿಸಿದ್ದು, ದೇವಸ್ಥಾನದ ಮುಂದೆ ನಿಂತು ಟ್ರಸ್ಟ್ ಮುಖಂಡರು ಪ್ರಾರ್ಥನೆ ಸಲ್ಲಿಸಿದ್ದಾರೆ..
ನೇಮೋತ್ಸವದ ತಯಾರಿಯಾಗಿ 2,000 ಜನರಿಗೆ ಊಟದ ವ್ಯವಸ್ಥೆ ಮಾಡಿದ ಟ್ರಸ್ಟ್ ಮಾಡಿತ್ತು..ಸಾವಿರಾರು ಚಯರ್, ಸೀಯಾಳ, ಹೂ ಗಳನ್ನು ಜಾರಂದಾಯ ಸೇವಾ ಟ್ರಸ್ಟ್ ತರಿಸಿತ್ತು.ಆದರೆ ನೇಮ ರದ್ದಾದ ಹಿನ್ನಲೆಯಲ್ಲಿ ಸದ್ಯ ಊಟವನ್ನು ಸ್ಥಳೀಯ ಶಾಲೆಗಳಿಗೆ ನೀಡಿದೆ.
ಒಟ್ಟಿನಲ್ಲಿ ದೈವಸ್ಥಾನ ಸಮಿತಿ, ಟ್ರಸ್ಟ್ ವಿಚಾರ ವಿಕೋಪಕ್ಕೆ ತಿರುಗಿದ್ದು ಇಂದು ನಡೆಯಬೇಕಾದ ಕೋಲ ಮುಂದಿನ ದಿನದಲ್ಲಿ ನಡೆಯಲು ಟ್ರಸ್ಟ್ ನಿರ್ಧಾರ ಮಾಡಿದೆ. ಮುಂದಿನ ದಿನದಲ್ಲಿ ಈ ವಿಚಾರ ಯಾವ ಸ್ವರೂಪ ಪಡೆದುಕೊಳ್ಳುತ್ತದೆ ಎಂಬುವುದನ್ನು ಕಾದು ನೋಡಬೇಕಾಗಿದೆ.