»   » ಪ್ರಿಯತಮೆಗೆ ಗುಂಡಿಕ್ಕಿ; ಕೊನೆಗೆ ತಾನೂ ಸತ್ತ ಪ್ರಿಯಕರ!

ಪ್ರಿಯತಮೆಗೆ ಗುಂಡಿಕ್ಕಿ; ಕೊನೆಗೆ ತಾನೂ ಸತ್ತ ಪ್ರಿಯಕರ!

Posted By:
Subscribe to Filmibeat Kannada

ಮಂಗಳೂರು, ಅ.23 : ಏಕಮುಖ ಪ್ರೀತಿಯ ಅಡ್ಡ ಪರಿಣಾಮಕ್ಕೆ ಇಲ್ಲಿದೆ ಉದಾಹರಣೆ. ತನ್ನ ಪ್ರೇಯಸಿಗೆ ಗುಂಡು ಹೊಡೆದ ಪ್ರಿಯತಮ, ನಂತರ ತಾನೂ ಗುಂಡಿಗೆ ಮೈಯೊಡ್ಡಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬುಧವಾರ(ಅ.24) ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವರದಿಯಾಗಿದೆ.

ಪ್ರೇಮದ ನೆಪದಲ್ಲಿ ವಿವೇಕ ಕಳೆದುಕೊಂಡು ಸಾವಿನ ಮನೆ ತಲುಪಿದ ಯುವಕನ ಹೆಸರು ವಿನೋದ್. ಗಾಯಗೊಂಡಿರುವ ಯುವತಿ ಸಾವು ಬದುಕಿನ ನಡುವೆ ಆಸ್ಪತ್ರೆಯಲ್ಲಿ ಹೋರಾಟ ನಡೆಸಿದ್ದಾಳೆ. ಪೊಲೀಸರು ಹೇಳುವ ಪ್ರಕಾರ, ವಿನೋದ್ ಪ್ರೀತಿಯನ್ನು, ಯುವತಿ ಅನೇಕ ಸಲ ಸ್ಪಷ್ಟವಾಗಿ ತಿರಸ್ಕರಿಸಿದ್ದಳು.ಆದರೂ ಛಲ ಬಿಡದ ಬೇತಾಳನಂತೆ, ಪದೇ ಪದೇ ವಿನೋದ್ ಪ್ರೇಮ ಭಿಕ್ಷೆಯನ್ನು ಯಾಚಿಸುತ್ತಲೇ ಇದ್ದ.

ಮಂಗಳವಾರ ಬೆಳಗ್ಗೆ ಮನೆಯಿಂದ ಹೊರಬಂದ ಯುವತಿಯ ಬಳಿ ವಿನೋದ್, ಪ್ರೇಮ ಭಿಕ್ಷೆಯನ್ನು ಮತ್ತೆ ಕೇಳಿದ್ದಾನೆ. ಆಕೆ ನಿರಾಕರಿಸಿದಾಗ, ಪಿಸ್ತೂಲ್ ನಿಂದ ಗುಂಡು ಹೊಡೆದ. ಆ ಸದ್ದಿಗೆ ಅಕ್ಕಪಕ್ಕದವರು ಅಲ್ಲಿಗೆ ಧಾವಿಸಿದರು. ಕೂಡಲೇ ಗುಂಡು ಹಾರಿಸಿಕೊಂಡು, ವಿನೋದ್ ಆತ್ಮಹತ್ಯೆ ಮಾಡಿಕೊಂಡ.
ಸುಳ್ಯ ತಾಲೂಕಿನ ಅರಂತೋಡು ಎಂಬಲ್ಲಿ ಈ ಘಟನೆ ನಡೆದಿದೆ.

(ದಟ್ಸ್ ಕನ್ನಡ ವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada