ಅಗ್ನಿಸಾಕ್ಷಿ ರಾಧಿಕಾ ನಟನೆಯ 'ಮನರೂಪ' ಚಿತ್ರದ ಮೋಷನ್ ಪೋಸ್ಟರ್ ರಿಲೀಸ್
Recommended Video

ದಶಕದ ನಂತರ ಭೇಟಿ ಮಾಡುವ ಐದು ಜನ ಗೆಳೆಯರು. ಪಶ್ಚಿಮ ಘಟ್ಟದ ಕತ್ತಲೆಯ ರಾತ್ರಿಯಲ್ಲಿ ನಿಗೂಢವಾಗಿರುವ ಕರಡಿಗುಹೆಯ ಅನ್ವೇಷಣೆಗೆ ಹೊರಟಿದ್ದಾರೆ. ಪ್ರಯಾಣದಲ್ಲಿ ಅವರು ತಮ್ಮ ಗುರಿಯತ್ತ ಸಾಗಿದಂತೆಲ್ಲ ಹಲವು ಅಡೆತಡೆಗಳು ಆಶ್ಚರ್ಯದ ರೂಪದಲ್ಲಿ ಎದುರಾಗುತ್ತವೆ. ಇಂದು ಬಿಡುಗಡೆಗೊಂಡ ಮನರೂಪ ಸಿನಿಮಾದ ಮೋಷನ್ ಪೋಸ್ಟರ್ ಹಲವು ಕುತೂಹಲಗಳನ್ನು ಹಾಗೇ ಉಳಿಸಿಕೊಂಡು, ನೋಡುಗರ ಮನದಲ್ಲಿ ಅಚ್ಚಳಿಯದೆ ನಿಲ್ಲುತ್ತದೆ.
'ಮನರೂಪ - ಎಪಿಸೋಡ್ ನೆವರ್ ಎಂಡ್ಸ್' ಎಂಬ ಹೊಸ ತಂಡದ ಸಿನಿಮಾ ತನ್ನ ಪೋಸ್ಟರ್ ಮೂಲಕವೇ ಗಮನ ಸೆಳೆದಿತ್ತು. ಈಗ ಬಿಡುಗಡೆಗೊಂಡಿರುವ ಮೋಷನ್ ಪೋಸ್ಟರ್ ಕೇವಲ ಕುತೂಹಲ ಕೆರಳಿಸುವುದು ಮಾತ್ರವಲ್ಲ, ನೋಡುಗರ ಮನದಲ್ಲಿ ಈ ಸಿನಿಮಾದಲ್ಲಿ ಇರುವ ರೋಚಕತೆಯ ಸುತ್ತ ಹತ್ತಾರು ಪ್ರಶ್ನೆಗಳನ್ನು ಮೂಡಿಸುತ್ತಾ ಹೋಗುತ್ತದೆ. ಸೈಕಲಾಜಿಕಲ್ ಸಸ್ಪೆನ್ಸ್ ಥ್ರಿಲ್ಲರ್ ಹಿನ್ನೆಲೆಯ ಮನರೂಪ ಸಿನಿಮಾ ಕಾಡಿನಲ್ಲಿ ನಡೆಯುವ ಕತೆ. ಇದು ಕಾಡಿನಲ್ಲಿ ನಡೆಯುವ ಕಥನ ಎಂಬುದನ್ನು ನಿರೂಪಿಸಲು ಚಿತ್ರತಂಡ ಮೋಷನ್ ಪೋಸ್ಟರ್ ಬಿಡುಗಡೆಗೊಳಿಸಿದೆ. ಮುಂದೆ ಓದಿ...

ಮೋಷನ್ ಪೋಸ್ಟರ್ ನಲ್ಲಿ ಏನಿದೆ?
ಕತ್ತಲೆಯ ರಾತ್ರಿ, ಒಂಟಿ ರಸ್ತೆಯಲ್ಲ್ಲಿ ಸಾಗುವ ಕಾರಿನಲ್ಲಿ ಸಂಭಾಷಣೆಯೊಂದಿಗೆ ಮೋಷನ್ ಪೋಸ್ಟರ್ ಆರಂಭವಾಗುತ್ತದೆ. ಅದರಲ್ಲಿ ಪುರುಷ ಪಾತ್ರವೊಂದು ‘ನಾನು ಕಾಡಿನ ಹಾದಿಯಲ್ಲಿ ಕಾರಿನಲ್ಲಿ ಚಲಿಸುತ್ತಿರುವಾಗ ಮನಸ್ಸು ಸೂರೆ ಹೋಗುತ್ತಿರುತ್ತದೆ' ಎಂದರೆ, ಅದಕ್ಕೆ ಪ್ರತಿಯಾಗಿ ಹೆಣ್ಣಿನ ಧ್ವನಿಯೊಂದು ನಿರಾಸಕ್ತವಾಗಿ `ಇನ್ನೆಷ್ಟು ದೂರ ಬೇಕು ಅಲ್ಲಿಗೆ ತಲುಪಲು' ಎಂದು ಕೇಳುತ್ತದೆ. ಈ ರೀತಿ ಟೀಸರ್ ಶುರು ಆಗುತ್ತದೆ.

ಗುಮ್ಮಾ 1 ಎಂಬ ಅಕ್ಷರ
''ಆದರೆ ಈ ಸ್ನೇಹಿತರ ಗುಂಪು ಮುಂದೆ ಚಲಿಸಿದಂತೆ, ಇದ್ದಕ್ಕಿದ್ದಂತೆ ಒಂದು ಅಸ್ಪಷ್ಟ ಧ್ವನಿ ಕೇಳುತ್ತದೆ. ಕಾರು ಗಕ್ಕನೆ ಒಂದು ಮರದಡಿಯಲ್ಲಿ ನಿಲ್ಲುತ್ತದೆ. ಈ ಕ್ಷಣದಲ್ಲಿ ಮೋಷನ್ ಪೋಸ್ಟರ್ ಮೇಲೆ ಗುಮ್ಮಾ 1 ಎಂಬ ಅಕ್ಷರಗಳು ಮೂಡುತ್ತವೆ. ಕಾರು ನಿಂತಿದ್ದೇಕೆ? ಯಾರು ಈ ಗುಮ್ಮ 1? ಕಗ್ಗತ್ತಲ ರಾತ್ರಿ ಮುಂದೆ ಹೇಗೆ ಮುಂದುವರಿಯುತ್ತದೆ? ಎಂಬ ಪ್ರಶ್ನೆಗಳನ್ನು ಮೂಡಿಸಿ ಮೋಷನ್ ಪೋಸ್ಟರ್ ಕೊನೆಯಾಗುತ್ತದೆ. ಜೊತೆಗೆ ಶರ್ವಣ ಅವರ ಹಿನ್ನಲೆ ಸಂಗೀತ ಇನ್ನಷ್ಟು ನಿಗೂಢತೆಯೊಂದಿಗೆ ಸಾಗುತ್ತದೆ.

ಹೊಸ ಪರಿಚಯ ದಿಲೀಪ್ ಕುಮಾರ
ಅಭಿನಯ ವಿಷಯಕ್ಕೆ ಬಂದರೆ, ದಿಲೀಪ್ ಕುಮಾರ ಈ ಚಿತ್ರದ ಮೂಲಕ ಹೊಸ ಪರಿಚಯ. ದಿಲೀಪ್ ತಮ್ಮ ಪ್ರಬುದ್ಧ ಅಭಿನಯವನ್ನು ಈ ಚಲನಚಿತ್ರದಲ್ಲಿ ಶ್ರುತಿ ಪಡಿಸಿದ್ದಾರೆ. ಕನ್ನಡ ಕಿರುತೆರೆಯ ಪರಿಚಿತ ಮುಖ ಅನುಷಾ ರಾವ್ ಹಾಗೂ ಈಗಾಗಲೇ ಕನ್ನಡದ ಹಲವು ಚಿತ್ರಗಳಲ್ಲಿ ನಟಿಸಿರುವ ನಿಶಾ ಬಿ. ಆರ್ ಮತ್ತು ಆರ್ಯನ್, ಶಿವ ಪ್ರಸಾದ್ ಈ ಚಿತ್ರದ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಅಮೋಘ್ ಸಿದ್ದಾರ್ಥ್, ಗಜ ನೀನಾಸಂ, ಹಾಗೂ ಪ್ರಜ್ವಲ್ ಗೌಡ ಪ್ರೇಕ್ಷಕರನ್ನು ತಮ್ಮ ಅಭಿನಯದ ಮೂಲಕವೇ ಆವರಿಸಿಕೊಳ್ಳಲಿದ್ದಾರೆ.

ನಿರ್ದೇಶಕ ಕಿರಣ ಹೆಗಡೆ ಮಾತು
ಮನರೂಪದ ನಿರ್ದೇಶಕ ಕಿರಣ ಹೆಗಡೆ ಪ್ರಕಾರ "ವಿಭಿನ್ನತೆಯಿಂದ ಕೂಡಿದ ಸಿನಿಮಾ ಮೋಷನ್ ಪೋಸ್ಟರ್ ಬಿಡುಗಡೆ ಮಾಡಬೇಕೆಂಬ ನಮ್ಮ ಹಂಬಲ ಮತ್ತು ಪ್ರಯತ್ನದ ಫಲ ಈ ಪೋಸ್ಟರ್. ಕಲಾವಿದ ನವೀನ್ ರೇವಣ್ ಮತ್ತು ಫಿಕ್ಸೆಲ್ ಪ್ರೇಮ್ ನ ಮಹೇಶ್ ಅವರು ಈ ಮೋಷನ್ ಪೋಸ್ಟರ್ ಮಾಡಿಕೊಟ್ಟಿದ್ದಾರೆ. ನಮ್ಮ ಮೊದಲ ಸಿನಿಮಾ ಪೋಸ್ಟರ್ ನಲ್ಲಿ ನಾವು ನಮ್ಮ ಚಿತ್ರಕಥೆಯ ವಸ್ತು ಏನೆಂಬುದನ್ನು ತಿಳಿಸಿದ್ದೆವು. ಐದೂ ಜನ ಸ್ನೇಹಿತರ ಸ್ವಭಾವ ಹೇಗೆ ಎಂಬುದನ್ನೂ ಸಂಕ್ಷಿಪ್ತವಾಗಿ ಸೂಚಿಸುತ್ತದೆ.

ಸೂಕ್ತ ದೃಶ್ಯಗಳಿಗಾಗಿ ಈ ಪ್ರಯಾಸ
ಚಿತ್ರದ ಛಾಯಾಚಿತ್ರಗ್ರಾಹಕ ಗೋವಿಂದರಾಜ್ ಪ್ರಕಾರ "ಈ ಚಿತ್ರ ಛಾಯಾಗ್ರಹಣ ತಂಡಕ್ಕೆ ನಾನಾ ಹೊಸ ರೀತಿಯ ಸವಾಲುಗಳನ್ನು ಒಡ್ಡಿತು. ಕ್ಯಾಮರಾ ಹಾಗೂ ಇನ್ನಿತರ ಛಾಯಾಗ್ರಹಣದ ಸಲಕರಣೆಗಳೊಂದಿಗೆ ನಾವು ಹಲವಾರು ಮೈಲಿಗಳಷ್ಟು ದೂರ ನಡೆಯಬೇಕಾಯಿತು. ಏಕೆಂದರೆ ನಮಗೆ ಬೇಕಾದ ಅತಿ ಸೂಕ್ತ ದೃಶ್ಯಗಳಿಗಾಗಿ ಈ ಪ್ರಯಾಸ ಪಡಲೇಬೇಕಿತ್ತು. ಈ ಪ್ರಯಾಸವನ್ನು ನಮ್ಮ ಇಡೀ ತಂಡ ಖುಷಿ ಖುಷಿಯಾಗಿಯೇ ಕಳೆಯಿತು. 'ಪಶ್ಚಿಮ ಘಟ್ಟದ ದಟ್ಟ ಕಾನನ ಹಾಗೂ ಕಠಿಣ ಬೌಗೋಳಿಕ ಸ್ಥಿತಿಯ ನಡುವೆ ಛಾಯಾಗ್ರಹಣ ಅತ್ಯಂತ ಸವಾಲಿನ ಕೆಲಸ," ಎನ್ನುತ್ತಾರೆ ಗೋವಿಂದರಾಜ್.

ಹೊಸ ಬಗೆಯ ಕಥಾನಕ
''1981 ಹಾಗೂ 1996 ನಡುವಣ ಜನಿಸಿದ, 2019ರ ವೇಳೆಗೆ 23 ಹಾಗೂ 38 ವರ್ಷ ವಯೋಮಾನದ ಮಿಲೆನಿಯಲ್ಸ್ ಜನಾಂಗದ ವ್ಯಕ್ತಿತ್ವವನ್ನು ಹಿಡಿದುಕೊಳ್ಳುವ ಚಿತ್ರ ಮನರೂಪ. ಈ ಪ್ರಯತ್ನ ನಮ್ಮ ಚಿತ್ರರಂಗಕ್ಕೆ ತೀರಾ ಹೊಸದು. ಈ ಜನಾಂಗದ ಬಹುಮುಖ್ಯ ಮನಸ್ಥಿತಿಯಂದರೆ ಸ್ವಾರ್ಥ, ಅತಿಯಾಗಿ ತಮ್ಮನ್ನು ತಾವೇ ಪ್ರೀತಿಸುವುದು, ತನ್ನನ್ನೇ ಗಮನಿಸಬೇಕು ಎಂಬ ಅಭಿಲಾಷೆ ಹಾಗೂ ಎಲ್ಲೂ ನಿಲ್ಲದೆ ಯಾವುದೋ ಒಂದು ಅಪರೂಪದ ಸಂಗತಿಯನ್ನು ಅರಸಿಕೊಂಡು ತಿರುಗಾಡುವುದು. ನಿರ್ದೇಶಕ ಕಿರಣ್ ಹೆಗಡೆ ಪ್ರಕಾರ ಈ ಮನೋಸ್ಥಿಯನ್ನು, ಅದರ ಮೂಲ ಪ್ರೇರಣೆಯನ್ನು ಅತ್ಯಂತ ಪರಿಣಾಮಕಾರಿಯಾಗಿ ಈ ಸಿನಿಮಾ ಜನರಿಗೆ ತಲುಪಿಸಲಿದೆ.


Click it and Unblock the Notifications











