For Quick Alerts
  ALLOW NOTIFICATIONS  
  For Daily Alerts

  ಮಂಚು ಮನೋಜ್ ಸಂಸಾರದಲ್ಲಿ ಬಿರುಗಾಳಿ: ಪತ್ನಿಗೆ ವಿಚ್ಛೇದನ ನೀಡಿದ ನಟ

  |

  ಟಾಲಿವುಡ್ ನ ಖ್ಯಾತ ನಟ ಮಂಚು ಮನೋಜ್ ಸಂಸಾರದಲ್ಲಿ ಬಿರುಗಾಳಿ ಬೀಸಿದೆ. ಮಂಚು ಮನೋಜ್ ಮತ್ತು ಪತ್ನಿ ಪ್ರಣತಿ ರೆಡ್ಡಿ ತಮ್ಮ ದಾಂಪತ್ಯಕ್ಕೆ ಫುಲ್ ಸ್ಟಾಪ್ ಇಟ್ಟಿದ್ದಾರೆ. ಪರಸ್ಪರ ಒಪ್ಪಿಗೆಯ ಮೇರೆಗೆ ಮಂಚು ಮನೋಜ್ ಮತ್ತು ಪ್ರಣತಿ ರೆಡ್ಡಿ ವಿಚ್ಛೇದನ ಪಡೆದಿದ್ದಾರೆ.

  ಅಲ್ಲಿಗೆ, ಎರಡು ವರ್ಷಗಳ ದಾಂಪತ್ಯ ಜೀವನಕ್ಕೆ ಮಂಚು ಮನೋಜ್ ಮತ್ತು ಪ್ರಣತಿ ರೆಡ್ಡಿ ಅಂತ್ಯ ಹಾಡಿದ್ದಾರೆ. ಈ ವಿಚಾರವನ್ನು ಸ್ವತಃ ತೆಲುಗು ನಟ ಮಂಚು ಮನೋಜ್ ಬಹಿರಂಗ ಪಡಿಸಿದ್ದಾರೆ.

  ''ನನ್ನ ವೈವಾಹಿಕ ಜೀವನ ಅಂತ್ಯಗೊಂಡಿದೆ. ನಮ್ಮಿಬ್ಬರ ನಡುವೆ ಭಿನ್ನಾಭಿಪ್ರಾಯಗಳಿದ್ದವು. ಹೀಗಾಗಿ ಪರಸ್ಪರ ಪರಾಮರ್ಶೆ ಮಾಡಿಕೊಂಡು ದೂರವಾಗಲು ನಿರ್ಧರಿಸಿದ್ದೇವೆ'' ಎಂದು ಸಾಮಾಜಿಕ ಜಾಲತಾಣಗಳಲ್ಲಿ ನಟ ಮಂಚು ಮನೋಜ್ ಬರೆದುಕೊಂಡಿದ್ದಾರೆ. ಹೆಚ್ಚಿನ ಮಾಹಿತಿ ಫೋಟೋ ಸ್ಲೈಡ್ ಗಳಲ್ಲಿ ಓದಿರಿ....

  ಟ್ವೀಟ್ ಮಾಡಿರುವ ಮಂಚು ಮನೋಜ್

  ಟ್ವೀಟ್ ಮಾಡಿರುವ ಮಂಚು ಮನೋಜ್

  ''ನನ್ನ ವೈಯುಕ್ತಿಕ ಜೀವನದ ಬಹುಮುಖ್ಯ ಸಂಗತಿಯೊಂದನ್ನು ಬಹಿರಂಗ ಪಡಿಸುತ್ತಿದ್ದೇನೆ. ನನ್ನ ವೈವಾಹಿಕ ಜೀವನ ಅಂತ್ಯಗೊಂಡಿದೆ. ವಿಚ್ಛೇದನ ಸಿಕ್ಕಿದೆ. ನಮ್ಮಿಬ್ಬರ ನಡುವೆ ಭಿನ್ನಾಭಿಪ್ರಾಯಗಳಿದ್ದವು. ಹೀಗಾಗಿ ಪರಸ್ಪರ ಪರಾಮರ್ಶೆ ಮಾಡಿಕೊಂಡು ದೂರವಾಗಲು ನಿರ್ಧರಿಸಿದ್ದೇವೆ'' ಎಂದು ಮಂಚು ಮನೋಜ್ ಟ್ವೀಟ್ ಮಾಡಿದ್ದಾರೆ.

  ಡಬ್ಬಲ್ ಖುಷಿ: ಮಂಚು ಮನೋಜ್ ಮ್ಯಾರೇಜ್ಡಬ್ಬಲ್ ಖುಷಿ: ಮಂಚು ಮನೋಜ್ ಮ್ಯಾರೇಜ್

  ನಿಮ್ಮನ್ನೆಲ್ಲ ರಂಜಿಸುವೆ

  ನಿಮ್ಮನ್ನೆಲ್ಲ ರಂಜಿಸುವೆ

  ''ಮನಸ್ಸು ತಳಮಳಗೊಂಡಿದ್ದ ಪರಿಣಾಮ ನಟನೆ ಹಾಗೂ ಕೆಲಸದ ಬಗ್ಗೆ ಹೆಚ್ಚು ಗಮನ ಕೊಡಲು ಸಾಧ್ಯವಾಗಲಿಲ್ಲ. ಕುಟುಂಬದ ಸಹಾಯದಿಂದಾಗಿ ನಾನು ಈ ಕಷ್ಟದ ಸಮಯವನ್ನು ಎದುರಿಸಿದ್ದೇನೆ. ಇದೀಗ ಮತ್ತೆ ಬಣ್ಣ ಹಚ್ಚಿ, ಉತ್ತಮ ಸಿನಿಮಾಗಳಲ್ಲಿ ಅಭಿನಯಿಸಿ ನಿಮ್ಮನ್ನೆಲ್ಲ ರಂಜಿಸುತ್ತೇನೆ'' ಎಂದಿದ್ದಾರೆ ಮಂಚು ಮನೋಜ್.

  ಪ್ರೀತಿಸಿ ಮದುವೆ ಆಗಿದ್ದ ಮಂಜು-ಪ್ರಣತಿ

  ಪ್ರೀತಿಸಿ ಮದುವೆ ಆಗಿದ್ದ ಮಂಜು-ಪ್ರಣತಿ

  ಹಾಗ್ನೋಡಿದ್ರೆ, ನಟ ಮಂಚು ಮನೋಜ್ ಮತ್ತು ಪ್ರಣತಿ ರೆಡ್ಡಿ ಪ್ರೀತಿಸಿ ಮದುವೆ ಆಗಿದ್ದರು. 2015 ರಲ್ಲಿ ತಮ್ಮ ಹುಟ್ಟುಹಬ್ಬದಂದೇ ಮಂಜು ಮನೋಜ್, ಪ್ರಣತಿ ರೆಡ್ಡಿ ರವರೊಂದಿಗೆ ಹಸೆಮಣೆ ಏರಿದ್ದರು. ಸೂಪರ್ ಸ್ಟಾರ್ ರಜನಿಕಾಂತ್ ಸೇರಿದಂತೆ ಟಾಲಿವುಡ್, ಕಾಲಿವುಡ್ ನ ಹಲವು ಗಣ್ಯರು ಮಂಚು-ಪ್ರಣತಿ ಮದುವೆಗೆ ಸಾಕ್ಷಿ ಆಗಿದ್ದರು.

  ಮಂಚು ಮನೋಜ್ ಕುರಿತು...

  ಮಂಚು ಮನೋಜ್ ಕುರಿತು...

  ತೆಲುಗಿನ ಖ್ಯಾತ ನಟ ಮೋಹನ್ ಬಾಬು ಮತ್ತು ನಿರ್ಮಲಾ ದೇವಿ ಪುತ್ರ ಮಂಚು ಮನೋಜ್. 2004 ರಲ್ಲಿ 'ದೊಂಗ ದೊಂಗಾಡಿ' ಚಿತ್ರದ ಮೂಲಕ ಸಿನಿ ಪಯಣ ಆರಂಭಿಸಿದ ಮಂಚು ಮನೋಜ್ 'ಬಿಂದಾಸ್', 'ವೇದಂ', 'ಪೋಟುಗಾಡು' ಸೇರಿದಂತೆ ಹಲವು ಹಿಟ್ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.

  English summary
  Tollywood Actor Manchu Manoj Confirms Divorce With An Emotional Post.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X