ತೆಲುಗು ಚಿತ್ರರಂಗದಿಂದ ಕೇಂದ್ರ ಪತ್ರ: ಪುನೀತ್ ನಮನದಲ್ಲಿ ಮಂಚು ಮನೋಜ್ ಭರವಸೆ

'ಪುನೀತ್ ನಮನ' ಕಾರ್ಯಕ್ರಮದಲ್ಲಿ ಹಲವು ಗಣ್ಯರು ನೆಚ್ಚಿನ ನಟ ಪುನೀತ್ ರಾಜ್‌ಕುಮಾರ್ ಅನ್ನು ನೆನಪಿಸಿಕೊಂಡಿದ್ದಾರೆ. ಹಲವರು ಪುನೀತ್‌ಗೆ ಮರಣೋತ್ತರವಾಗಿ ಉನ್ನತ ಗೌರವ ಸಂದಬೇಕು ಎಂದು ಒತ್ತಾಯಿಸಿದ್ದಾರೆ. ಅದರಲ್ಲಿ ತೆಲುಗು ನಟ ಮಂಚು ಮನೋಜ್ ಸಹ ಒಬ್ಬರು.

ನಿನ್ನೆ ಅರಮನೆ ಮೈದಾನದ ಗಾಯತ್ರಿ ವಿಹಾರದಲ್ಲಿ ನಡೆದ 'ಪುನೀತ್ ನಮನ' ಕಾರ್ಯಕ್ರಮದಲ್ಲಿ ಮಾತನಾಡಿದ ಮಂಚು ಮನೋಜ್, ''ಪುನೀತ್‌ ರಾಜ್‌ಕುಮಾರ್ ಅವರಿಗೆ ಪದ್ಮಶ್ರೀ ಪ್ರಶಸ್ತಿ ಲಭಿಸಬೇಕು'' ಎಂದು ಹೇಳಿದರು.

''ಪುನೀತ್‌ಗೆ ಪದ್ಮಶ್ರೀ ಕೊಡಿಸುವ ನಿಟ್ಟಿನಲ್ಲಿ ನಾವೆಲ್ಲರೂ ಪ್ರಯತ್ನ ಮಾಡೋಣ. ತೆಲುಗು ಚಿತ್ರರಂಗದ ಕಡೆಯಿಂದ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯುತ್ತೇವೆ. ಹಾಗೆಯೇ ಎಲ್ಲ ಚಿತ್ರರಂಗಗಳು, ಪ್ರತಿಯೊಬ್ಬ ಮುಖ್ಯ ಕಲಾವಿದನೂ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲಿ ಕೇಂದ್ರದ ಮೇಲೆ ಒತ್ತಡ ಹಾಕೋಣ'' ಎಂದರು.

ಪುನೀತ್ ಅಗಲಿಕೆ ಸಹಿಸಿಕೊಳ್ಳಲಾಗಲಿಲ್ಲ: ಮನೋಜ್

ಪುನೀತ್ ಅಗಲಿಕೆ ಸಹಿಸಿಕೊಳ್ಳಲಾಗಲಿಲ್ಲ: ಮನೋಜ್

''ಪುನೀತ್ ಅಗಲಿದ ಸುದ್ದಿ ನಮಗೆ ತಿಳಿದ ದಿನ ನಮಗೆ ನಂಬಲು ಸಾಧ್ಯವಾಗಲಿಲ್ಲ. ಮನಸ್ಸಿಗೆ ಬಹಳ ಕಷ್ಟವಾಯಿತು. ಅಂದೇ ನಾವು ಬೆಂಗಳೂರಿಗೆ ಹೊರಟು ಬಂದೆವು. ಸಿನಿಮಾಗಳಲ್ಲಿ ಮಾತ್ರವೇ ನಾವು ಫೈಟ್, ಸ್ಟಂಟ್‌ ಮಾಡುತ್ತೇವೆ. ನಿಜ ಜೀವನದಲ್ಲಿ ಇಷ್ಟು ಹತ್ತಿರದ ವ್ಯಕ್ತಿ ದೂರವಾದರೆ ಮನಸ್ಸು ತಡೆದುಕೊಳ್ಳುವುದಿಲ್ಲ'' ಎಂದರು ಮಂಚು ಮನೋಜ್.

''ಭಾರತೀಯ ಚಿತ್ರರಂಗ ಇರುವವರೆಗೆ ಬದುಕಿರುತ್ತೀರಿ''

''ಭಾರತೀಯ ಚಿತ್ರರಂಗ ಇರುವವರೆಗೆ ಬದುಕಿರುತ್ತೀರಿ''

''ಪುನೀತ್ ಅಣ್ಣ ಇಂದು ಇಲ್ಲಿ ಇಲ್ಲದೇ ಇರಬಹುದು. ಆದರೆ, ಅವರ ಪ್ರೀತಿ, ಅವರ ನಗು, ಅವರ ಯೋಚನೆಗಳು, ಅವರ ಮಂದಹಾಸ ಸದಾ ಹಸಿರಾಗಿರುತ್ತದೆ. ಭಾರತೀಯ ಚಿತ್ರರಂಗ ಇರುವವರೆಗೂ ನೀವು ಬದುಕಿರುತ್ತೀರ. ನಿಮ್ಮ ಪರಿಚಯ ಸಿಕ್ಕ ನಾವು ಪುಣ್ಯವಂತರು. ನೀವು ಮಾಡಿದ ಒಳ್ಳೆಯ ಕಾರ್ಯಗಳು ನಮಗೆ ಮಾದರಿ'' ಎಂದರು.

ನಿಮ್ಮ ಸೇವೆ ಮಾಡಲು ನಾವು ಸಿದ್ಧ: ಮಂಚು ಮನೋಜ್

ನಿಮ್ಮ ಸೇವೆ ಮಾಡಲು ನಾವು ಸಿದ್ಧ: ಮಂಚು ಮನೋಜ್

''ಶಿವಣ್ಣ, ನಾನು ನಿಮ್ಮ ಕಿರಿಯ ತಮ್ಮನಂತೆ ಇರುತ್ತೇನೆ. ನೀವು ಯಾವಾಗ ಕರೆದರೂ ಬರುತ್ತೇನೆ. ನನಗೆ ಒಂದು ಕರೆ ಮಾಡಿ ಸಾಕು. ನಿಮ್ಮ ಸೇವೆ ಮಾಡಲು ನಾವು ಸದಾ ಸಿದ್ಧರಿರುತ್ತೇವೆ. ನೀವು ನಿಮ್ಮ ಕುಟುಂಬ ಮಾಡುವ ಪ್ರತಿಯೊಂದು ಒಳ್ಳೆಯ ಕಾರ್ಯಗಳಲ್ಲಿ ನಾವು ಜೊತೆಯಾಗಿ ನಿಲ್ಲುತ್ತೇವೆ. ಇಡೀ ತೆಲುಗು ಚಿತ್ರರಂಗ ನಿಮ್ಮ ಜೊತೆ ಇರುತ್ತದೆ. ನಿಮ್ಮನ್ನು ನಾವು ಬಹಳ ಪ್ರೀತಿಸುತ್ತೇವೆ. ಪುನೀತ್ ಕುಟುಂಬಕ್ಕೆ ದೇವರು ಹೆಚ್ಚಿನ ಶಕ್ತಿ ನೀಡಲಿ'' ಎಂದಿದ್ದಾರೆ ಮಂಚು ಮನೋಜ್.

ಅಣ್ಣಾವ್ರ ಕುಟುಂಬಕ್ಕೆ ಆತ್ಮೀಯರು ಮೋಹನ್‌ಬಾಬು

ಅಣ್ಣಾವ್ರ ಕುಟುಂಬಕ್ಕೆ ಆತ್ಮೀಯರು ಮೋಹನ್‌ಬಾಬು

ಮಂಚು ಮೋಹನ್‌ಬಾಬು ಕುಟುಂಬಕ್ಕೂ ಡಾ.ರಾಜ್‌ಕುಮಾರ್ ಕುಟುಂಬಕ್ಕೂ ಆತ್ಮೀಯ ಸಂಬಂಧ. ಪುನೀತ್ ನಿಧನರಾದ ದಿನ ಮೋಹನ್‌ಬಾಬು ಹಾಗೂ ಅವರ ಹಿರಿಯ ಪುತ್ರ ಮಂಚು ವಿಷ್ಣು ಬೆಂಗಳೂರಿಗೆ ಬಂದು ಅಂತಿಮ ದರ್ಶನ ಪಡೆದಿದ್ದರು. ಮೋಹನ್‌ಬಾಬು, ಅಂಬರೀಶ್ ಅವರಿಗೂ ಆತ್ಮೀಯ ಗೆಳೆಯರು. ಅಂಬರೀಶ್ ನಿಧನರಾದಾಗ ಅಂಬರೀಶ್ ಮೃತದೇಹದ ಮುಂದೆ ನಿಂತು ಮೋಹನ್‌ಬಾಬು ಬಿಕ್ಕಿ-ಬಿಕ್ಕಿ ಅತ್ತಿದ್ದರು.

More from Filmibeat

English summary
Telugu actor Manchu Manoj demand Padmashree award to Puneeth Rajkumar. He said Telugu industry will write letter to central government. every movie industry should do the same.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X