For Quick Alerts
  ALLOW NOTIFICATIONS  
  For Daily Alerts

  ಮಂಡ್ಯ ಜಿಲ್ಲೆ ಕೊಮ್ಮೇರಹಳ್ಳಿ ಹುಡುಗರ ಸನ್ನಿ ಲಿಯೋನ್‌ ಪ್ರೀತಿ

  |

  ಪಡ್ಡೆ ಹುಡುಗರ ಅಚ್ಚು-ಮೆಚ್ಚಿನ ನಟಿ ಸನ್ನಿ ಲಿಯೋನ್. ನೀಲಿ ಚಿತ್ರಗಳ ಮಾಜಿ ನಟಿ ಸನ್ನಿ ಲಿಯೋನ್ ಪ್ರಸ್ತುತ ಬಾಲಿವುಡ್‌ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ತಮ್ಮ ನಟನೆ ಜೊತೆಗೆ ಮಾನವೀಯ ಕಾರ್ಯಕ್ಕೂ ಸನ್ನಿ ಖ್ಯಾತರು.

  ಕರ್ನಾಟಕದಲ್ಲಿ ತನ್ನ ಕಟೌಟ್ ನೋಡಿ ಖುಷಿ ಪಟ್ಟ ಸನ್ನಿ ಲಿಯೋನ್ | Filmibeat Kannada

  ಕೆಲವು ದಿನಗಳ ಹಿಂದಷ್ಟೆ ಮೇ 13ರಂದು ಸನ್ನಿ ಲಿಯೋನ್ ಹುಟ್ಟುಹಬ್ಬವಿತ್ತು. ಅಂದು ಸನ್ನಿ ಲಿಯೋನ್ ಅಭಿಮಾನಿಗಳು ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ಶುಭಾಶಯ ಕೋರಿದ್ದಾರೆ. ಆದರೆ ಮಂಡ್ಯ ಜಿಲ್ಲೆ ಹುಡುಗರು ಸನ್ನಿಗೆ ಶುಭಾಶಯ ಕೋರಿರುವುದು ಭಿನ್ನವಾಗಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

  ಸಾಮಾನ್ಯವಾಗಿ ದರ್ಶನ್, ಸುದೀಪ್, ಅಪ್ಪು, ಶಿವಣ್ಣ ರಂಥಹಾ ಮಾಸ್ ಹೀರೋಗಳಿಗೆ ಅಥವಾ ಪವರ್‌ಫುಲ್ ರಾಜಕಾರಣಿಗಳ ಹುಟ್ಟುಹಬ್ಬದ ಸಂದರ್ಭದಲ್ಲಿ ದೊಡ್ಡ ಫ್ಲೆಕ್ಸ್‌ಗಳನ್ನು ಊರ ಮಧ್ಯದಲ್ಲಿ ಕಟ್ಟಿ ಹುಟ್ಟುಹಬ್ಬ ಶುಭಾಶಯ ಕೋರಲಾಗುತ್ತದೆ, ಆದರೆ ಸನ್ನಿ ಲಿಯೋನ್‌ರ ದೊಡ್ಡ ಫೆಕ್ಸ್‌ ಮಾಡಿಸಿ ಊರಿನಲ್ಲಿ ಕಟ್ಟಿ ಹುಟ್ಟುಹಬ್ಬಕ್ಕೆ ಶುಭ ಕೋರಿದ್ದಾರೆ ಮಂಡ್ಯ ಜಿಲ್ಲೆ ಕೊಮ್ಮೆರಹಳ್ಳಿಯ ಸನ್ನಿ ಲಿಯೋನ್ ಅಭಿಮಾನಿಗಳು.

  ಸನ್ನಿ ಲಿಯೋನ್ ಸೀರೆಯುಟ್ಟು ನಗುತ್ತಾ ನಿಂತಿರುವ ದೊಡ್ಡ ಫ್ಲೆಕ್ಸ್‌ ಮಾಡಿಸಿರುವ ಕೊಮ್ಮೆರಹಳ್ಳಿ ಸನ್ನಿ ಅಭಿಮಾನಿಗಳು ಫ್ಲೆಕ್ಸ್‌ ಮೇಲೆ 'ಅನಾಥ ಮಕ್ಕಳ ತಾಯಿ, ಅಭಿಮಾನಿಗಳ ದೇವತೆ' ಎಂದು ಬರೆಸಿದ್ದಾರೆ. ಸನ್ನಿ ಲಿಯೋನ್‌ ಫ್ಲೆಕ್ಸ್ ಕಟ್ಟಿರುವ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

  ಮಂಡ್ಯ ಹುಡುಗರು ಪ್ರೀತಿಯಿಂದ ತಮಗೆ ಫ್ಲೆಕ್ಸ್‌ ಕಟ್ಟಿರುವ ಚಿತ್ರವನ್ನು ಸನ್ನಿ ಲಿಯೋನ್ ಸಹ ತಮ್ಮ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಒಂದು ದಿನದ ಮಟ್ಟಿಗೆ ಹಂಚಿಕೊಂಡಿದ್ದರು. ಮಂಡ್ಯ ಹುಡುಗರ ಪ್ರೀತಿಗೆ ಧನ್ಯವಾದವನ್ನು ಸಹ ಹೇಳಿದ್ದರು.

  ಸನ್ನಿ ಲಿಯೋನ್‌ ಮಾನವೀಯ ಕಾರ್ಯಗಳಿಂದಲೂ ಬಹಳವಾಗಿ ಖ್ಯಾತರು. ಹೆಣ್ಣು ಮಗುವೊಂದನ್ನು ದತ್ತು ಪಡೆದು ಸಾಕುತ್ತಿರುವ ಸನ್ನಿ, ಕೇರಳ ಪ್ರವಾಹಕ್ಕೆ ಧನ ಸಹಾಯ ಮಾಡಿದ್ದರು. ಅಷ್ಟೇ ಅಲ್ಲದೆ ಇತರೆ ಸಮಾಜ ಸೇವೆಗಳಲ್ಲಿಯೂ ಸನ್ನಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಸನ್ನಿ ಲಿಯೋನ್ ಕನ್ನಡದಲ್ಲಿ ಎರಡು ಹಾಡುಗಳಿಗೆ ಹೆಜ್ಜೆ ಹಾಕಿದ್ದಾರೆ.

  English summary
  Mandya district Kammerahalli boys wish Sunny Leone differently for her birthday. boys made big flex for Sunny Leone.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X