ದರ್ಶನ್ - ಯಶ್ ಇಬ್ಬರು ಹಾವು - ಮುಂಗುಸಿ ತರ ಅಂತ ಹೇಳ್ತಿದ್ರು, ಆದ್ರೆ!

Recommended Video

Lok Sabha Elections 2019 : ದರ್ಶನ್ - ಯಶ್ ಇಬ್ಬರು ಹಾವು - ಮುಂಗುಸಿ ತರ ಅಂತ ಹೇಳ್ತಿದ್ರು, ಆದ್ರೆ!

ನಟ ದರ್ಶನ್ ಹಾಗೂ ಯಶ್ ಇಬ್ಬರ ನಡುವೆ ಮನಸ್ತಾಪ ಇದೆ ಎನ್ನುವ ಮಾತುಗಳು ಅಂತ್ಯ ಆಗಿವೆ. ಈ ಇಬ್ಬರು ನಟರು ಕೈ ಹಿಡಿದುಕೊಂಡು ಕುಚುಕು ಕುಚುಕು ಎಂದು ಹಾಡು ಹಾಡುವ ಸಮಯ ಬಂದಿದೆ.

ಅಂಬರೀಶ್ ಪತ್ನಿ, ನಟಿ ಸುಮಲತಾ ಇಂದು ಮಂಡ್ಯ ಲೋಕಸಭಾ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ್ದಾರೆ. ಸುಮಲತಾರ ಬಲಗಡೆ 'ಗಜಕೇಸರಿ' ಇದ್ದರೆ, ಎಡಗಡೆ 'ಗಜ' ಇದ್ದರು. ಇಬ್ಬರು ಮಕ್ಕಳಂತೆ ಈ ನಟರು ಮುಂದೆ ನಿಂತು ಸುಮ ದಾರಿಯನ್ನು ಸುಲಲಿತ ಮಾಡುತ್ತಿದ್ದಾರೆ.

ಚುನಾವಣೆ, ರಾಜಕೀಯ, ಮತಗಳು, ಪ್ರಚಾರ ಇವೆಲ್ಲವನ್ನೂ ಬದಿಗಿಟ್ಟು, ಇಬ್ಬರು ಸ್ಯಾಂಡಲ್ ವುಡ್ ಸ್ಟಾರ್ ಗಳ ಗೆಳೆತನ ನೋಡಿವುದು ಸಿನಿಮಾಭಿಮಾನಿಗಳಿಗೆ ಸಂತಸಕ್ಕೆ ನೀಡುತ್ತಿದೆ. ಮುಂದೆ ಓದಿ...

ದರ್ಶನ್ - ಯಶ್ ನಡುವೆ ಮುನಿಸು ಇತ್ತಾ?

ದರ್ಶನ್ - ಯಶ್ ನಡುವೆ ಮುನಿಸು ಇತ್ತಾ?

ನಟ ದರ್ಶನ್ ಹಾಗೂ ಯಶ್ ನಡುವೆ ಯಾವುದೇ ಮುನಿಸು ಇರಲಿಲ್ಲ. ಒಬ್ಬರ ವಿರುದ್ಧ ಮತ್ತೊಬ್ಬರು ಯಾವುದೇ ಹೇಳಿಕೆಗಳನ್ನು ನೀಡಿರಲಿಲ್ಲ. ಯಾವುದೇ ರೀತಿಯ ಜಗಳ ಮಾಡಿರಲಿಲ್ಲ. ಆದರೂ ದರ್ಶನ್ ಹಾಗೂ ಯಶ್ ನಡುವೆ ಅಷ್ಟಕ್ಕಷ್ಟೇ ಎನ್ನುವ ಮಾತಿತ್ತು. ಆದರೆ, ಈಗ ಅಂತಹ ಗುಸುಗುಸು ಮಾತುಗಳಿಗೆ ಮಾಸ್ ಹೀರೋಗಳು ಉತ್ತರ ನೀಡಿದ್ದಾರೆ.

ಫ್ಯಾನ್ಸ್ ವಾರ್ ನಡೆದಿವೆ

ಫ್ಯಾನ್ಸ್ ವಾರ್ ನಡೆದಿವೆ

ನಟ ದರ್ಶನ್ ಹಾಗೂ ಯಶ್ ಅಭಿಮಾನಿಗಳ ನಡುವೆ ವಾರ್ ಬೇಕಾದಷ್ಟು ಸಲ ನಡೆದಿವೆ.ಸೋಷಿಯಲ್ ಮೀಡಿಯಾದಲ್ಲಿ ಇಬ್ಬರ ಅಭಿಮಾನಿಗಳು ಕೆಸರೆರಚಾಟ ಮಾಡುತ್ತಲೇ ಇರುತ್ತಾರೆ. ಇನ್ನು ಸಿನಿಮಾಗಳ ಡೈಲಾಗ್ ವಾರ್ ಕೂಡ ಈ ಜಗಳಗಳಿಗೆ ಪುಷ್ಟಿ ನೀಡುತ್ತಿತ್ತು. ಪದೇ ಪದೇ ದರ್ಶನ್ - ಯಶ್ ಅಭಿಮಾನಿಗಳು ಪರಸ್ಪರ ಸಾಮಾಜಿಕ ಜಾಲತಾಣಗಳಲ್ಲಿ ಸಮರ ಸಾರಿದ್ದರು.

ಹಾವು - ಮುಂಗುಸಿ ಹೇಳಿಕೆ ಬಗ್ಗೆ ಯಶ್ ಪ್ರತಿಕ್ರಿಯೆ

ಹಾವು - ಮುಂಗುಸಿ ಹೇಳಿಕೆ ಬಗ್ಗೆ ಯಶ್ ಪ್ರತಿಕ್ರಿಯೆ

ಈ ಹಿಂದೆ ಮಾತ್ರವಲ್ಲ ಈ ಇಬ್ಬರು ನಟರು ಈಗ ಒಂದಾಗಿ ಕಾಣಿಸಿಕೊಂಡಿರುವುದಕ್ಕೂ ಕಮೆಂಟ್ ಗಳು ಬರುತ್ತಿದೆ. ಇಂತಹ ಮಾತುಗಳಿಗೆ ಯಶ್ ಪ್ರತಿಕ್ರಿಯೆ ನೀಡಿದ್ದಾರೆ. ''ಹಾವು - ಮುಂಗುಸಿ ತರ ಇದ್ದೊರು ಈಗ ಒಂದಾಗಿದ್ದಾರೆ ಅಂತ ಹೇಳ್ತಾರೆ. ನಾವು ನಮ್ಮ ನಮ್ಮ ಹೊಟ್ಟೆಪಾಡು ನೋಡುತ್ತಿದ್ದೆವು. ಅನುಕೂಲಕ್ಕಾಗಿ ನಾವು ಹಗಲು ರಾತ್ರಿ ಬದಲಾಗುವವರಲ್ಲ.'' ಎಂದು ಹೇಳಿದ್ದಾರೆ

ಯಶ್ ಮಾತು ಅರ್ಥ ಆಯ್ತಾ

ಯಶ್ ಮಾತು ಅರ್ಥ ಆಯ್ತಾ

ಯಶ್ ಮಾತಿನ ವಿವರಿಸುವುದಾದರೆ, ದರ್ಶನ್ ಹಾಗೂ ಯಶ್ ತಮ್ಮ ತಮ್ಮ ಕೆಲಸಗಳಲ್ಲಿ ತೊಡಗಿದ್ದರು. ಆದರೆ, ಯಶ್ ಕಂಡರೆ ದರ್ಶನ್ ಗೆ ಆಗಲ್ಲ... ದರ್ಶನ್ ಕಂಡರೆ ಯಶ್ ಗೆ ಆಗಲ್ಲ ಎನ್ನುವ ಸೀನ್ ಕ್ರಿಯೇಟ್ ಮಾಡಲಾಗಿತ್ತು. ಈ ರೀತಿ ಈ ಹಿಂದೆ ಏನೇ ಸುದ್ದಿ ಇದ್ದರೂ ಈ ನಟರು ಒಟ್ಟಿಗೆ ಕಾಣಿಸಿಕೊಳ್ಳುತ್ತಿರುವುದು ನಿಜಕ್ಕೂ ಖುಷಿಯ ವಿಷಯ. ಈ ಮೂಲಕ ಇಬ್ಬರ ಸ್ನೇಹ ಇನ್ನಷ್ಟು ಬಲವಾಗಿದೆ.

ಯಶ್ ಗೆ 'ನಮ್ ಹೀರೋ' ಅಂತಾರೆ ದರ್ಶನ್

ಯಶ್ ಗೆ 'ನಮ್ ಹೀರೋ' ಅಂತಾರೆ ದರ್ಶನ್

ಯಶ್ ರನ್ನು ದರ್ಶನ್ ಹೇಗೆ ಕರೆಯುತ್ತಾರೆ, ದರ್ಶನ್ ರನ್ನು ಯಶ್ ಯಾವ ರೀತಿ ಕರೆಯುತ್ತಾರೆ ಎನ್ನುವ ಕುತೂಹಲ ಕೆಲವರಿಗೆ ಇರಬಹುದು. ಅಂತಹ ಸಣ್ಣ ಕುತೂಹಲಕ್ಕೆ ಉತ್ತರ ಇಲ್ಲಿದೆ. ಯಶ್ ರನ್ನು ದರ್ಶನ್ ಪ್ರೀತಿಯಿಂದ 'ಹೀರೋ' ಎಂದು ಕರೆಯುತ್ತಾರೆ. ಕೆಲ ಕಾರ್ಯಕ್ರಮಗಳಲ್ಲಿ ಯಶ್ ಬಗ್ಗೆ ದರ್ಶನ್ ಮಾತುಗಳನ್ನು ಸರಿಯಾಗಿ ಗಮನಿಸಿ ನೋಡಿದರೆ ಇದು ತಿಳಿಯುತ್ತದೆ. ಇನ್ನು ದರ್ಶನ್ ರನ್ನು ಯಶ್ 'ದರ್ಶನ್ ಸರ್' ಎಂದು ಗೌರವ ನೀಡುತ್ತಾರೆ.

More from Filmibeat

English summary
Kannada actor Yash and Darshan participated in Sumalatha Ambarish election roadshow in Madya Today (March 20th). Yash supporting sumalatha in mandya lok sabha election.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X