ರಾಜನಂತೆ ಮೆರೆದ ಅಂಬರೀಶ್ ಪತ್ನಿ ಸುಮಲತಾ ಎಷ್ಟು ಸಾಲ ಹೊಂದಿದ್ದಾರೆ ಗೊತ್ತಾ?
Recommended Video

ಮಂಡ್ಯ ಲೋಕಸಭೆ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುತ್ತಿರುವ ಸುಮಲತಾ ಅಂಬರೀಶ್ ನಿನ್ನೆ (ಮಾರ್ಚ್ 20) ಮಂಡ್ಯದ ಡಿಸಿ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದರು. ಈ ವೇಳೆ ಸಲ್ಲಿಸಿರುವ ಅಫಿಡವಿಟ್ ನಲ್ಲಿ ಸುಮಲತಾ ತಮ್ಮ ಆಸ್ತಿ ಘೋಷಣೆ ಮಾಡಿಕೊಂಡಿದ್ದು, ಅಂಬಿ ಪತ್ನಿ ಬಳಿ ಎಷ್ಟು ಆಸ್ತಿ ಇದೆ ಎಂಬುದು ಬಹಿರಂಗವಾಗಿದೆ.
ಅಂಬರೀಶ್ ಅವರ ಪತ್ನಿ ಸುಮಲತಾ ಆಗಿ ಮತ್ತು ಸಿನಿಮಾ ನಟಿಯಾಗಿ ಸುಮಲತಾ ಅವರನ್ನ ಬಲ್ಲವರಿಗೆ ಅವರ ಆದಾಯ ಎಷ್ಟು ಮತ್ತು ಅವರ ವ್ಯವಹಾರಗಳೇನು ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿ ಗೊತ್ತಿರಲಿಲ್ಲ. ಇದೀಗ, ಸುಮಲತಾ ಅವರ ರಾಜಕೀಯ ಪ್ರವೇಶದಿಂದ ಈ ಎಲ್ಲ ಮಾಹಿತಿಗಳು ಅಧಿಕೃತವಾಗಿ ಘೋಷಣೆಯಾಗಿದೆ.
ಸ್ವತಃ ಸುಮಲತಾ ಅವರೇ ಪ್ರಕಟಿಸಿರುವ ಪ್ರಕಾರ, ಒಟ್ಟು 23.4 ಕೋಟಿಗೂ ಅಧಿಕ ಆಸ್ತಿ ಹೊಂದಿದ್ದಾರೆ. ಇನ್ನು ಗಮನಿಸಬೇಕಾದ ವಿಚಾರ ಅಂದ್ರೆ, ಸುಮಲತಾ ಅವರು ದೊಡ್ಡ ಮೊತ್ತದ ಸಾಲವನ್ನ ಕೂಡ ಹೊಂದಿದ್ದಾರೆ. ಹಾಗಿದ್ರೆ, ಸುಮಲತಾ ಹೊಂದಿರುವ ಸಾಲವೆಷ್ಟು? ಅವರು ಸಲ್ಲಿಸಿರುವ ಅಫಿಡವಿಟ್ ನಲ್ಲಿ ಏನೆಲ್ಲಾ ಮಾಹಿತಿ ಇದೆ ಎಂದು ಮುಂದೆ ಓದಿ....

17.7 ಕೋಟಿ ಸ್ಥಿರಾಸ್ತಿ
ನಾಮಪತ್ರ ಸಲ್ಲಿಸಿರುವ ವೇಳೆ ಸುಮಲತಾ ಅವರು ನೀಡಿರುವ ಮಾಹಿತಿ ಪ್ರಕಾರ, ಸುಮಾರು 17.72 ಕೋಟಿ ಸ್ಥಿರಾಸ್ತಿ ಹೊಂದಿದ್ದಾರೆ.
ಸ್ಥಿರಾಸ್ತಿ ಮೌಲ್ಯ : 17,72,91,150
41,00,000 ರೂ ಮೌಲ್ಯದ ಕೃಷಿ ಭೂಮಿ ಇದೆ. ಬೆಂಗಳೂರಿನ ಜೆಪಿ ನಗರದಲ್ಲಿ ಮನೆ, ಕಟ್ಟಡಗಳ ಮೌಲ್ಯ 17,72,91,150 ರೂ.
2017-18ರ ಅರ್ಥಿಕ ವರ್ಷದ ಐಟಿ ರಿಟರ್ನ್ಸ್ ನಲ್ಲಿ 1,33,15,757 ರೂ ಆದಾಯ ತೋರಿಸಿದ್ದಾರೆ.

5.6 ಕೋಟಿ ಚರಾಸ್ತಿ
*ಎಚ್ ಡಿಎಫ್ ಸಿ, ಸಿಟಿ ಬ್ಯಾಂಕ್, ಎಸ್ ಬಿಐ ಬ್ಯಾಂಕ್ ಗಳಲ್ಲಿ ಖಾತೆಗಳಿಂದ 12,70,363 ರೂ ನಗದು ಹೊಂದಿದ್ದಾರೆ.
* ವಿಜಯ ಬ್ಯಾಂಕ್ ಷೇರು ,ಎಚ್ ಡಿ ಎಫ್ ಸಿ ಈಕ್ವಿಟಿ, ಎಚ್ ಡಿ ಎಫ್ ಸಿ ಯುಲಿಪ್, ವಿಮೆ, ಕೋಟಕ್ ಮಹೀಂದ್ರಾ ವಿಮೆ ಹೊಂದಿದ್ದಾರೆ
* ಚರಾಸ್ತಿ: 5,68,62,989 ರೂ * 1,66,81,189 ಮೌಲ್ಯದ ಚಿನ್ನ, 12,57,545 ರೂ ಮೌಲ್ಯ ಬೆಳ್ಳಿ ಹೊಂದಿದ್ದಾರೆ.

14 ಕೋಟಿ ಸಾಲ ಹೊಂದಿದ್ದಾರೆ
* ಸುಮಲತಾ ಅವರು ಒಟ್ಟು 1,42,32,295 ರೂ ಸಾಲ ಹೊಂದಿದ್ದಾರೆ.
* ಪ್ರಮೀಳಾ ಕೆ.ಜಿ (ಯಾವುದೇ ಭದ್ರತೆ ಇಲ್ಲದ ಸಾಲ) 45,00,000 ರೂ
* ಸಂತೋಷ್ ಡಿ.ಟಿ (ಯಾವುದೇ ಭದ್ರತೆ ಇಲ್ಲದ ಸಾಲ) 95,00,000 ರೂ
* ಸ್ಯಾಂಡಲ್ ವುಡ್ ಮೀಡಿಯಾ (ಯಾವುದೇ ಭದ್ರತೆ ಇಲ್ಲದ ಸಾಲ) 2,32,295 ರೂ
* ಬ್ಯಾಂಕ್ ಇನ್ನಿತರ ಆರ್ಥಿಕ ಸಂಸ್ಥೆಗಳಿಂದ ಯಾವುದೇ ಬಗೆಯ ಸಾಲವನ್ನು ಹೊಂದಿಲ್ಲ, ಬಾಕಿ ಉಳಿಸಿಕೊಂಡಿಲ್ಲ ಎಂಬ ಮಾಹಿತಿಯನ್ನ ನೀಡಿದ್ದಾರೆ.

ನಿಖಿಲ್ ಕುಮಾರ್ ಆಸ್ತಿ ಎಷ್ಟಿರಬಹುದು?
ಮಂಡ್ಯದಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಸುಮಲತಾ ಅವರು ತಮ್ಮ ಆಸ್ತಿ ಘೋಷಿಸಿಕೊಂಡಿದ್ದಾರೆ. ಸುಮಲತಾ ಎದುರು ಕಾಂಗ್ರೆಸ್ ಬೆಂಬಲಿತ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ನಿಖಿಲ್ ಕುಮಾರ್ ಒಟ್ಟು ಆಸ್ತಿ ಎಷ್ಟು ಎಂಬುದು ಕುತೂಹಲ ಹೆಚ್ಚಿಸಿದೆ.


Click it and Unblock the Notifications











