ಮಾತು ತಪ್ಪಿದರೂ, ತಡವಾಗಿ ಕರ್ತವ್ಯ ನಿರ್ವಹಿಸಿದ ಅಂಬರೀಶ್.!
ಮಂಡ್ಯ ಕ್ಷೇತ್ರದ ಶಾಸಕನಾಗಿ, ಜನ ಪ್ರತಿನಿಧಿಯಾಗಿ ಅಂಬರೀಶ್ ಗೆ ಕಡೆಗೂ ತಮ್ಮ ಕರ್ತವ್ಯದ ನೆನಪಾಗಿದೆ.
ಕಾವೇರಿ ನದಿ ನೀರು ಹಂಚಿಕೆ ವಿವಾದದ ಕುರಿತು ಇಂದು ನಡೆಯುತ್ತಿರುವ ವಿಶೇಷ ವಿಧಾನ ಮಂಡಲ ಅಧಿವೇಶನದ ಅರ್ಧ ದಿನ ಮುಗಿದ ಮೇಲೆ ಸದನದ ಒಳಗೆ ಅಂಬರೀಶ್ ಕಾಲಿಟ್ಟಿದ್ದಾರೆ.
ಭೋಜನ ವಿರಾಮದ ಬಳಿಕ ವಿಧಾನಸಭೆ ಕಲಾಪ ಇಂದು (ಅಕ್ಟೋಬರ್ 3) ಸಂಜೆ 4.30ರ ಸುಮಾರಿಗೆ ಆರಂಭವಾಯ್ತು. ಈ ವೇಳೆ ಸದನದ ಒಳಗೆ ಅಂಬರೀಶ್ ಪ್ರತ್ಯಕ್ಷವಾದರು. ವಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಮಾತುಗಳನ್ನ ಅಂಬರೀಶ್ ಆಲಿಸಿದರು.

ಸೆಪ್ಟೆಂಬರ್ 28 ರಂದು ಅಮೇರಿಕಾದಿಂದ ಬೆಂಗಳೂರಿಗೆ ವಾಪಸ್ ಆಗಿ ಪ್ರೆಸ್ ಮೀಟ್ ನಡೆಸಿದ ಬಳಿಕ ಮಾಧ್ಯಮಗಳ ಮುಂದೆ ಅಂಬರೀಶ್ ಕಾಣಿಸಿಕೊಂಡಿರುವುದು ಈಗಲೇ.! ಸೆಪ್ಟೆಂಬರ್ 30 ರಂದು ಮಂಡ್ಯಗೆ ಭೇಟಿ ನೀಡುತ್ತೇನೆ ಅಂತ ಹೇಳಿದ್ದರೂ, ಅಂಬರೀಶ್ ಮಾತು ತಪ್ಪಿದ್ದಾರೆ. ಇದುವರೆಗೂ ಮಂಡ್ಯದತ್ತ ಅಂಬರೀಶ್ ಮುಖ ಮಾಡಿಲ್ಲ. [ಮಂಡ್ಯ ಶಾಸಕ ಅಂಬರೀಶ್ ಗೆ ಇಷ್ಟೊಂದು ಅಸಡ್ಡೆ ಯಾಕೆ.?]
ಕಾವೇರಿ ನೀರು ಕುರಿತು ಕಳೆದ ಬಾರಿ ವಿಶೇಷ ವಿಧಾನ ಮಂಡಲ ಅಧಿವೇಶನ ನಡೆದಾಗ ಅಂಬರೀಶ್ ಗೈರಾಗಿದ್ದರು. ಇಂದು ಬೆಳಗ್ಗೆ ಕೂಡ ವಿಧಾನ ಮಂಡಲ ಅಧಿವೇಶನದಲ್ಲಿ ಅಂಬರೀಶ್ ಪಾಲ್ಗೊಳ್ಳಲಿಲ್ಲ. ಈ ಬಗ್ಗೆ ವ್ಯಾಪಕ ಖಂಡನೆ ವ್ಯಕ್ತವಾಗುತ್ತಿದ್ದಂತೆ, ಭೋಜನ ವಿರಾಮದ ನಂತರ ಆರಂಭವಾದ ವಿಧಾನ ಸಭೆ ಕಲಾಪಕ್ಕೆ ಅಂಬರೀಶ್ ಹಾಜರ್ ಆದರು. [ಇಷ್ಟುದಿನ ಅಮೇರಿಕಾದಲ್ಲಿ ಅಂಬಿ ಮೋಜು ಮಾಡ್ಲಿಲ್ಲ, ಮತ್ತೇನ್ ಮಾಡ್ತಿದ್ರು?]

ತುಂಬಾ ತಡವಾಗಿ ತಮ್ಮ ಕರ್ತವ್ಯವನ್ನ ನಿರ್ವಹಿಸುತ್ತಿರುವ ಅಂಬರೀಶ್, ಮಂಡ್ಯಗೆ ಭೇಟಿ ಕೊಟ್ಟು ರೈತರನ್ನ ಸಂತೈಸುವುದು ಇನ್ಯಾವಾಗ್ಲೋ.?


Click it and Unblock the Notifications











