For Quick Alerts
  ALLOW NOTIFICATIONS  
  For Daily Alerts

  ಸಂಸದರ ದೇಣಿಗೆಯಿಂದ ಅಂಗವಿಕಲರಿಗೆ ತ್ರಿಚಕ್ರ ವಾಹನ ವಿತರಿಸಲಿರುವ ಸಂಸದೆ ಸುಮಲತಾ

  |

  ಮಂಡ್ಯ ಸಂಸದೆ ಸುಮಲತಾ ಅವರು ತಮ್ಮ ಸಂಸದರ ನಿಧಿ ಬಳಸಿ ಖರೀದಿಸಲಾದ ತ್ರಿಚಕ್ರ ವಾಹನಗಳನ್ನು ವಿತರಿಸಲಿದ್ದಾರೆ.

  ತ್ರಿಚಕ್ರ ವಾಹನ ವಿತರಣೆ ಕಾರ್ಯಕ್ರಮವನ್ನು ಅಂಬರೀಶ್ ಎರಡನೇ ವರ್ಷ ಪುಣ್ಯ ತಿಥಿ, ನವೆಂಬರ್ 24 ರಂದು ಹಮ್ಮಿಕೊಳ್ಳಲಾಗಿದೆ. ಮಂಡ್ಯದ ಜಿಲ್ಲಾಧಿಕಾರಿ ಕಚೇರಿ ಮುಂಭಾಗ 10 ಮಂದಿ ಅಂಗವಿಕರಿಗೆ ಈ ತ್ವಿಚಕ್ರ ವಾಹನಗಳನ್ನು ವಿತರಿಸಲಾಗುತ್ತದೆ.

  ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಸುಮಲತಾ ಅಂಬರೀಶ್, 'ಕೊಡುಗೆ, ಸನ್ಮಾನ್ಯ ಮಂಡ್ಯ ಸಂಸದರಾದ ಶ್ರೀಮತಿ ಸುಮಲತಾ ಅಂಬರೀಶ್ ಅವರ ಸಂಸದರ ಅನುದಾನದಡಿಯಲ್ಲಿ ನೀಡಲಾದ ವಾಹನ' ಎಂದು ಬರೆಯಲಾದ ವಾಹನಗಳ ಚಿತ್ರಗಳನ್ನು ಹಂಚಿಕೊಂಡಿದ್ದಾರೆ.

  'ರೆಬಲ್ ಸ್ಟಾರ್ ಡಾ. ಅಂಬರೀಶ್ ನಮ್ಮನ್ನು ಅಗಲಿ ಎರಡು ವರ್ಷ. ದೈಹಿಕವಾಗಿ ಅವರು ನಮ್ಮಿಂದ ದೂರವಾಗಿದ್ದರೂ ನಾನಾ ಕೆಲಸಗಳಿಂದಾಗಿ ಅವರ ಹೆಸರು ನಮ್ಮೆಲ್ಲರ ಹೃದಯದಲ್ಲಿ ಯಾವಾಗಲೂ ಶಾಶ್ವತ.
  ಅವರಿಂದ ಸಹಾಯ ಪಡೆದ ಕೈಗಳು ಸಾವಿರಾರು. ಸಿನಿಮಾ ರಂಗ, ರಾಜಕೀಯ ಕ್ಷೇತ್ರದ ಆಚೆಯೂ ಅವರನ್ನು ಜನರು ಅಷ್ಟೊಂದು ಪ್ರೀತಿಸುತ್ತಿದ್ದರು ಅನ್ನುವುದಕ್ಕೆ ಕಾರಣ, ಜನರ ಕಷ್ಟಕ್ಕೆ ಅವರು ಸ್ಪಂದಿಸುತ್ತಿದ್ದ ರೀತಿ. ಹಾಗಾಗಿ ಅದೇ ದಿನ ವಾಹನ ಹಂಚಿಕೆ ಮಾಡುತ್ತಿದ್ದೇನೆ' ಎಂದು ಸುಮಲತಾ ಬರೆದುಕೊಂಡಿದ್ದಾರೆ.

  ರಸ್ತೆ ಬದಿ ಟೀ ಕುಡಿದ Shivanna, ಅಭಿಮಾನಿಗಳು ಫುಲ್ ಫಿದಾ | Filmibeat Kannada

  ಇತ್ತೀಚೆಗಷ್ಟೆ ಸುಮಲತಾ ಅವರ ಕಾರ್ಯಕ್ಷಮತೆ ಬಗ್ಗೆ ಕೆಲವರು ಪ್ರಶ್ನೆಗಳನ್ನೆತ್ತಿದ್ದರು, ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಅವರು, 'ಸುಮಲತಾ ಅವರು ಸರಿಯಾಗಿ ಕೆಲಸ ಮಾಡುತ್ತಿಲ್ಲ, ಏನೇ ಸಮಸ್ಯೆ ಇದ್ದರೆ ನನ್ನ ಬಳಿ ಹೇಳಿ' ಎಂದು ಫೋನ್‌ನಲ್ಲಿ ಹೇಳುತ್ತಿದ್ದ ವಿಡಿಯೋ ವೈರಲ್ ಆಗಿತ್ತು.

  English summary
  Mandya MP and Actress Sumalatha Ambareesh distributing three wheeler vehicles to disabled people on November 24.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X