For Quick Alerts
  ALLOW NOTIFICATIONS  
  For Daily Alerts

  ಸುಮಲತಾ ಹುಟ್ಟುಹಬ್ಬದಲ್ಲಿ ಸ್ಟಾರ್ ಮೇಳ: ಇದೆಲ್ಲಾ ಬೇಕಿತ್ತಾ ಎಂದ ನೆಟ್ಟಿಗರು

  |

  ನಟಿ, ಸಂಸದೆ ಸುಮಲತಾ ಆಗಸ್ಟ್ 27ರಂದು ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಇದು ಅವರ 58ನೇ ವರ್ಷದ ಹುಟ್ಟುಹಬ್ಬವಾಗಿದ್ದು ಅದ್ಧೂರಿಯಾಗಿಯೇ ಹುಟ್ಟುಹಬ್ಬದ ಪಾರ್ಟಿ ನೀಡಿದ್ದಾರೆ ಸುಮಲತಾ. ಆದರೆ ಸಾಮಾಜಿಕ ಜಾಲತಾಣದಲ್ಲಿ ಕೆಲವರು ಸುಮಲತಾ ಹುಟ್ಟುಹಬ್ಬ ಆಚರಿಸಿದ ಬಗ್ಗೆ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.

  ಮೊದಲಿಗೆ ಅಂಬರೀಶ್ ಸಮಾಧಿ ತೆರಳಿ ಹುಟ್ಟುಹಬ್ಬ ಆಚರಿಸಿಕೊಂಡರು ಸುಮಲತಾ. ಅಲ್ಲಿ ಅಭಿಷೇಕ್ ತಮ್ಮ ತಾಯಿಯವರಿಗೆ ಕೇಕ್ ತಿನ್ನಿಸಿ ಶುಭಾಶಯಗಳನ್ನು ಕೋರಿದರು.

  ಈ ಸಮಯ ಮಾತನಾಡಿದ ಸುಮಲತಾ, ''ಅಂಬರೀಶ್ ಇದ್ದಿದ್ದರೆ ಹುಟ್ಟುಹಬ್ಬದ ಸಂಭ್ರಮ ಬೇರೆಯದ್ದೇ ರೀತಿಯಾಗಿರುತ್ತಿತ್ತು. ನಮ್ಮ ದುರಾದೃಷ್ಟಕ್ಕೆ ಅಂಬರೀಶ್ ಇಲ್ಲ'' ಎಂದು ಸಂತಸದ ಕ್ಷಣಗಳಲ್ಲಿ ಅಂಬರೀಶ್ ಅವರನ್ನು ನೆನಪು ಮಾಡಿಕೊಂಡರು.

  ಸುಮಲತಾ ಅವರು ಸಂಸದೆಯಾಗಿರುವ ಮಂಡ್ಯದಲ್ಲಿಯೂ ಸುಮತಲಾ ಹುಟ್ಟುಹಬ್ಬವನ್ನು ಆಚರಿಸಲಾಯಿತು. ಕರ್ನಾಟಕ ಅಂಬರೀಶ್ ಅಭಿಮಾನಿಗಳ ಸಂಘದ ವತಿಯಿಂದ ಮಂಡ್ಯದಲ್ಲಿ ರಕ್ತದಾನ ಶಿಬಿರ, ಆರೋಗ್ಯ ಸಪಾಸಣಾ ಶಿಬಿರಗಳನ್ನು ಆಯೋಜಿಸಲಾಗಿತ್ತು. ಅನ್ನಸಂತರ್ಪಣೆಯೂ ನಡೆಯಿತು. ಅಲ್ಲಲ್ಲಿ ಸುಮಲತಾ ಹುಟ್ಟುಹಬ್ಬವನ್ನು ಸರಳವಾಗಿ ಆಚರಿಸಲಾಯಿತು.

  ಆ ನಂತರ ಬೆಂಗಳೂರಿನ ಮನೆಯಲ್ಲಿ ಸ್ಟಾರ್‌ ನಟರು, ರಾಜಕೀಯ ಗೆಳೆಯ, ಆಪ್ತೇಷ್ಟರ ಜೊತೆಗೆ ಹುಟ್ಟುಹಬ್ಬವನ್ನು ಅದ್ಧೂರಿಯಾಗಿಯೇ ಸುಮಲತಾ ಅಂಬರೀಶ್ ಆಚರಣೆ ಮಾಡಿದರು. ಹುಟ್ಟುಹಬ್ಬ ಆಚರಣೆಯ ಚಿತ್ರಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

  ಸಂಭ್ರಮಾಚರಣೆ ಮಾಡಿರುವ ಬಗ್ಗೆ ಅಸಮಾಧಾನ

  ಸಂಭ್ರಮಾಚರಣೆ ಮಾಡಿರುವ ಬಗ್ಗೆ ಅಸಮಾಧಾನ

  ಕೊರೊನಾ ಸಮಯದಲ್ಲಿ ಸಂಸದೆ ಸುಮಲತಾ ಅವರು ಸಂಭ್ರಮಾಚಾರಣೆ ಮಾಡಿರುವ ಬಗ್ಗೆ ನೆಟ್ಟಿಗರು ಕೆಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹಲವು ಸ್ಟಾರ್ ನಟರುಗಳು ಕೊರೊನಾ ಕಾರಣಕ್ಕೆ ಹುಟ್ಟುಹಬ್ಬ ಆಚರಿಸದಂತೆ ಮನವಿ ಮಾಡಿರುವ ಸಮಯದಲ್ಲಿ ಸಂಸದೆಯಾಗಿ ಜವಬ್ದಾರಿಯುತ ಸ್ಥಾನದಲ್ಲಿರುವ ಸುಮಲತಾ ಅವರು ಹೀಗೆ ಸಂತೋಷಕೂಟ ಮಾಡಿದ್ದು ಸರಿಯಲ್ಲವೆಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

  ಸಾಮಾಜಿಕ ಅಂತರ ಕಾಪಾಡಿಕೊಳ್ಳದೇ ಇರುವ ಬಗ್ಗೆ ಆಕ್ಷೇಪ

  ಸಾಮಾಜಿಕ ಅಂತರ ಕಾಪಾಡಿಕೊಳ್ಳದೇ ಇರುವ ಬಗ್ಗೆ ಆಕ್ಷೇಪ

  ಇನ್ನು ಕೆಲವರು ಪಾರ್ಟಿ ಸಂದರ್ಭದಲ್ಲಿ ನಟ-ನಟಿಯರ್ಯಾರೂ ಸಾಮಾಜಿಕ ಅಂತರ ಕಾಪಾಡಿಕೊಳ್ಳದೇ ಇರುವ ಬಗ್ಗೆ ಹಾಗೂ ಮಾಸ್ಕ್ ಧರಿಸದೇ ಇರುವ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ಪಾರ್ಟಿಯ ಚಿತ್ರಗಳನ್ನು ಸುಮಲತಾ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು ಯಾವ ಚಿತ್ರಗಳಲ್ಲಿ ಯಾರೂ ಸಹ ಮಾಸ್ಕ್ ಧರಿಸಿಲ್ಲ ಮತ್ತು ಸಾಮಾಜಿಕ ಅಂತರವೂ ಇಲ್ಲ. ಪಾರ್ಟಿಯ ಹಲವು ಚಿತ್ರಗಳು ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿವೆ.

  ಹಲವು ಖ್ಯಾತ ನಟರು ಕಾರ್ಯಕ್ರಮದಲ್ಲಿ ಭಾಗಿ

  ಹಲವು ಖ್ಯಾತ ನಟರು ಕಾರ್ಯಕ್ರಮದಲ್ಲಿ ಭಾಗಿ

  ಸುಮಲತಾ ಹುಟ್ಟುಹಬ್ಬದ ಪಾರ್ಟಿಯಲ್ಲಿ ಸಚಿವ ಸುಧಾಕರ್, ನಟ ದರ್ಶನ್, ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್, ನಟ ಯಶ್, ರಾಧಿಕಾ ಪಂಡಿತ್, ಉಪೇಂದ್ರ, ಪ್ರಿಯಾಂಕಾ ಉಪೇಂದ್ರ, ಸಂಗೀತ ನಿರ್ದೇಶಕ ಗರುಕಿರಣ್, ಇನ್ನೂ ಹಲವಾರು ಮಂದಿ ಸೆಲೆಬ್ರಿಟಿಗಳು ಪಾರ್ಟಿಯಲ್ಲಿ ಭಾಗವಹಿಸಿದ್ದಾರೆ. ನೆರೆ-ಹೊರೆಯ ಸಿನಿಮಾ ರಂಗದ ಗೆಳೆಯರು ಸಹ ಹುಟ್ಟುಹಬ್ಬ ಸಂಭ್ರಮದಲ್ಲಿ ಭಾಗವಹಿಸಿದ್ದರು ಎನ್ನಲಾಗುತ್ತಿದೆ.

  ಮೈಸೂರು ಸಾಮೂಹಿಕ ಅತ್ಯಾಚಾರದ ಬಗ್ಗೆ ಆಕ್ರೋಶ

  ಮೈಸೂರು ಸಾಮೂಹಿಕ ಅತ್ಯಾಚಾರದ ಬಗ್ಗೆ ಆಕ್ರೋಶ

  ಮಂಡ್ಯ ಸಂಸದೆಯೂ ಆಗಿರುವ ಸುಮಲತಾ ಅಂಬರೀಶ್ ಮೈಸೂರಿನ ಸಾಮೂಹಿಕ ಅತ್ಯಾಚಾರವನ್ನು ತೀವ್ರವಾಗಿ ಖಂಡಿಸಿದ್ದಾರೆ. ''ಹೆಣ್ಣು ಮಕ್ಕಳ ಮೇಲೆ ನಿರಂತರವಾಗಿ ನಡಿಯುತ್ತಿರುವ ದೈಹಿಕ ಹಾಗೂ ಮಾನಸಿಕ ಅತ್ಯಾಚಾರಕ್ಕೆ ಕೊನೆ ಯಾವಾಗ. ಇಂತ ಪುರುಷರ ಮನಸ್ಥಿತಿ ಬದಲಾಗುವುದೆಂದು? ಇಂತಹ ಅನಿಷ್ಟ ಕಾಮುಕರನ್ನು ಬಂಧಿಸುವ, ಅವರನ್ನು ಶಿಕ್ಷಿಸುವ ಕಾನೂನು ಮತ್ತಷ್ಟು ಗಟ್ಟಿ ಆಗಬೇಕು ಎನ್ನುವುದು ಎಷ್ಟು ಸತ್ಯವೋ, ಇಂಥಹ ಪುರುಷರು ಬೆಳೆಯುವ ಮನೆಯ ವಾತಾವರಣ, ಸಂಸ್ಕಾರ, ಪೋಷಕರ ಜವಾಬ್ದಾರಿ ಅಲ್ಲಿಯೂ ಕೂಡ ಮತ್ತಷ್ಟು ಗಟ್ಟಿಯಾಗಬೇಕು ಎನ್ನುವುದು ನನ್ನ ಅಭಿಪ್ರಾಯ ಹೌದಲ್ಲವೇ? ಹುಟ್ಟಿನಿಂದ ಸಾವಿನವರೆಗೆ ಹೆಣ್ಣು ಮಕ್ಕಳು ಅನುಭವಿಸುವ ಕಷ್ಟ ನೂರಾರು ಆದರೂ ಹಲವಾರು ಮಹಿಳೆಯರು ಅದನ್ನು ಹಿಮ್ಮೆಟ್ಟಿ ಇಡೀ ಭಾರತವೇ ಮೆಚ್ಚುವಂತ ಸಾಧನೆಯನ್ನು ಮಾಡುತ್ತಿದ್ದಾರೆ. ಇಂಥ ಸಂದರ್ಭದಲ್ಲಿ ಸಾಮೂಹಿಕ ಅತ್ಯಾಚಾರದ ಘಟನೆಗಳು ಮಹಿಳೆಯ ಮಾನಸಿಕ ಸ್ಥೈರ್ಯವನ್ನು ಕುಗ್ಗಿಸುತ್ತದೆ. ಹಾಗಾಗದಿರಲಿ'' ಎಂದು ಆಕ್ರೋಶ ಹೊರಹಾಕಿದ್ದಾರೆ.

  English summary
  Actress, Mandya MP Sumalatha birthday photos went viral on social media. Some people criticize Sumalatha having party in this crucial time of Corona.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X