»   » ರಾಜಕೀಯಕ್ಕೆ ಮಂಡ್ಯದ ಹೆಣ್ಣು ರಮ್ಯಾ ಗುಡ್ ಬೈ

ರಾಜಕೀಯಕ್ಕೆ ಮಂಡ್ಯದ ಹೆಣ್ಣು ರಮ್ಯಾ ಗುಡ್ ಬೈ

By: ಜೀವನರಸಿಕ
Subscribe to Filmibeat Kannada

ಬೇಕಿತ್ತಾ ಇದೆಲ್ಲ ಅಂತ ನೀವು ಅಂದ್ರೂ ಅಂದ್ಕೊಳ್ಳಿ. ಈ ಹಿಂದೆಯೇ ಈ ಬಗ್ಗೆ ಸಾಕಷ್ಟು ಸಲ ಈ ರೀತಿಯ ಸುದ್ದಿಗಳು ಬಂದಿದ್ದವು. ಸಿನಿಮಾದ ಅದೆಷ್ಟು ಜನರು ರಾಜಕೀಯಕ್ಕೆ ಹೋಗಿ ಬಂದ ದಾರಿಗೆ ಸುಂಕವಿಲ್ಲ ಅಂತ ವಾಪಾಸು ಹೋಗಿದ್ದಾರೆ. ಮತ್ತೆ ಕೆಲವರು ಪ್ರಯತ್ನಿಸಿ ಪ್ರಯತ್ನಿಸಿ ಸುಸ್ತಾಗಿದ್ದಾರೆ.

ಆದರೆ ಅದೃಷ್ಟ ಅನ್ನೋ ಸಿನಿಮಾದಲ್ಲಿ ಮಾತ್ರ ಕಾಡುತ್ತೆ ಅನ್ಕೊಂಡ್ರೆ ರಮ್ಯಾಗೆ ರಾಜಕೀಯದಲ್ಲೂ ಕೈ ಕೊಡುತ್ತೆ ಅಂತ ಸ್ಯಾಂಡಲ್ ವುಡ್ ಕ್ವೀನ್ ಗೆ ಅರ್ಥವಾಗಿದೆ. ರಮ್ಯಾ ಮಾಧ್ಯಮದವರ ಮುಂದೆ ಕುಳಿತು ಮನಸು ಬಿಚ್ಚಿ ಮಾತಾಡೋಕೆ ಶುರುಮಾಡಿದ್ದಾರೆ. ಮಂಡ್ಯದ ಹೆಣ್ಣು ರಮ್ಯಾ ಬೆಂಗಳೂರಿಗೆ ಬಂದಿದ್ದಾರೆ. [ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಕಥೆ ಮುಂದೇನು?]


ಹಳೇ ಗಂಡನ ಪಾದವೇ ಗತಿ ಅನ್ನೋ ಪರಿಸ್ಥಿತಿ ಅಂದ್ರೆ ಏನು ಅಂತ ಅಕ್ಷರಶಃ ಅರ್ಥವಾಗಿದೆ. ಸಿನಿಮಾ ಹಿಟ್ ಆದರೂ ಆಗದಿದ್ರೂ ಜನರು ಲೈಕ್ ಮಾಡ್ತಾರೆ. ಆದರೆ ರಾಜಕೀಯದಲ್ಲಿ ಹಿಟ್ ಆದರೆ ಮಾತ್ರ ಲೈಕ್ ಮಾಡ್ತಾರೆ. 'ದೊಡ್ಮನೆ ಹುಡ್ಗ'ನಿಗೆ ನಾಯಕಿಯಾಗೋಕೆ ರಮ್ಯಾ ಉತ್ಸುಕರಾಗಿದ್ದಾರೆ. ಅವರ ಮಾತಿನಲ್ಲಿ ಅದು ಕಾಣ್ತಿದೆ. [ಸಕ್ಕರೆ ಬೆಲೆ ಏರಿಕೆಗೆ ರಮ್ಯಾ ಟ್ವೀಟ್ ಬಾಣ]

ಈಗ ಬರ್ತಿರೋ ಡಾ.ಶಿವರಾಜ್ ಕುಮಾರ್ ಅವರ ಜೊತೆಗಿನ 'ಆರ್ಯನ್' ಸಿನಿಮಾ ಹಿಟ್ಟಾದ್ರೆ ರಮ್ಯಾ ಮತ್ತೆ ಫಾರ್ಮ್ಗೆ ಬರ್ತಾರೆ. ರಮ್ಯಾಗೆ ರಾಜಕೀಯದ ಸೋಲು ಬೇಸರ ಮೂಡಿಸಿದೆ. ಇನ್ನು ರಮ್ಯಾರನ್ನ ಸಿನಿಮಾದಲ್ಲಿ ನೋಡ್ಬಹುದು. ಇದು ರಮ್ಯಾ ಅವ್ರೇ ತೀರ್ಮಾನ ಮಾಡಿರೋ ವಿಷಯ. ಹಾಗಾದ್ರೆ ರಮ್ಯಾ ರಾಜಕೀಯಕ್ಕೆ ಸದ್ಯಕ್ಕಂತೂ ಗುಡ್ ಬೈ ಹೇಳಿದ್ದಾರೆ.

English summary
Good news for actress Ramya fans, the actress back to pavilion. Ramya is now busy in Sandalwood movies. She is busy in Dr.Shivrajkumar's movie 'Aaryan' and to act in Puneeth Rajkumar upcoming movie Dodmane Huduga. Will Ramya bid goodbye to politics?
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada