twitter
    For Quick Alerts
    ALLOW NOTIFICATIONS  
    For Daily Alerts

    ಕೊಡಗನೂರು ಜಯಕುಮಾರ್ ನಿಧನಕ್ಕೆ ಮಂಡ್ಯ ರಮೇಶ್ ಸಂತಾಪ

    |

    ಕನ್ನಡದ ಹಿರಿಯ ರಂಗಕರ್ಮಿ ಹಾಗೂ ಜ್ಯೂನಿಯರ್ ರಾಜ್‌ ಕುಮಾರ್ ಎಂದೇ ಖ್ಯಾತಿ ಗಳಿಸಿಕೊಂಡಿದ್ದ ಕೊಡಗನೂರು ಜಯಕುಮಾರ್ ನಿಧನಕ್ಕೆ ಮಂಡ್ಯ ರಮೇಶ್ ಸಂತಾಪ ಸೂಚಿಸಿದ್ದಾರೆ. ಕಳೆದ ಕೆಲ ದಿನಗಳಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಜಯಕುಮಾರ್ (70 ವರ್ಷ) ದಾವಣಗೆರೆಯ ಬಾಪೂಜಿ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ.

    Recommended Video

    ದಾವಣಗೆರೆಯಲ್ಲಿ ಕೊನೆಯುಸಿರೆಳೆದ Junior Rajkumar | Filmibeat Kannada

    ''ಅವರ ನಿಧನ ವೈಯಕ್ತಿಕವಾಗಿ ನನಗೆ ತುಂಬಾ ನೋವನ್ನು ಉಂಟು ಮಾಡಿದೆ. ಜಯಕುಮಾರ್ ಓರ್ವ ಸಜ್ಜನ ವ್ಯಕ್ತಿ. ಅವರದ್ದು ತುಂಬಾ ಸಾತ್ವಿಕವಾದ ನಡವಳಿಕೆ. ಅನೇಕ ಜನರಿಗೆ ರಂಗಭೂಮಿ, ಸಿನಿಮಾ, ಟಿವಿ ಕಾರ್ಯಕ್ರಮಗಳಲ್ಲಿ ಇಷ್ಟವಾದ ವ್ಯಕ್ತಿ'' ಎಂದು ಫೇಸ್‌ಬುಕ್ ಖಾತೆಯಲ್ಲಿ ವಿವರವಾಗಿ ಬರೆದುಕೊಂಡಿದ್ದಾರೆ. ಮುಂದೆ ಓದಿ.....

    ಹಿರಿಯ ರಂಗಕರ್ಮಿ ಕೊಡಗನೂರು ಜಯಕುಮಾರ್ ನಿಧನಹಿರಿಯ ರಂಗಕರ್ಮಿ ಕೊಡಗನೂರು ಜಯಕುಮಾರ್ ನಿಧನ

    ರಂಗಭೂಮಿ ಒಳ್ಳೆಯ ನಟ

    ರಂಗಭೂಮಿ ಒಳ್ಳೆಯ ನಟ

    ''ಕೊಡಗನೂರು ಜಯಕುಮಾರ, ಕನ್ನಡ ವೃತ್ತಿರಂಗಭೂಮಿಯಲ್ಲಿ ಬಹಳ ಒಳ್ಳೆಯ ನಟ ಎಂದು ಪ್ರಸಿದ್ಧರಾಗಿದ್ದವರು. ಅನೇಕ ಕಂಪನಿಗಳಲ್ಲಿ ಇವರು ಅಭಿನಯಿಸಿದ್ದರು. ರಂಗದ ಮೇಲೆ ಬಂದರೆಂದರೆ ಪ್ರೇಕ್ಷಕರಲ್ಲಿ ಸದಾ ರೋಮಾಂಚನವನ್ನು ಉಂಟು ಮಾಡುವ ಶಕ್ತಿಯನ್ನು ಕಾಯ್ದುಕೊಂಡಿದ್ದರು. ಇವರ ಕಣ್ಣುಗಳ ಚಲನೆ, ಧ್ವನಿಯ ಹಾವಭಾವ, ಇವರು ನಿಂತುಕೊಳ್ಳುತ್ತಿದ್ದ ಶೈಲಿ ರೀತಿಯನ್ನು ನೋಡಿ ಅನೇಕ ಜನ ಇವರು ವೃತ್ತಿರಂಗಭೂಮಿಯ ರಾಜಕುಮಾರ್ ಎಂದು ಭಾವಿಸಿದ್ದರು.'' - ಮಂಡ್ಯ ರಮೇಶ್

    ಜೂನಿಯರ್ ರಾಜ್ ಕುಮಾರ್

    ಜೂನಿಯರ್ ರಾಜ್ ಕುಮಾರ್

    ''ರಾಜಕುಮಾರ್ ಅವರನ್ನು ಅನುಕರಿಸುವಂತೆ ಇವರು ಅಭಿನಯಿಸುತ್ತಿದ್ದದ್ದು ಬಹಳ ವಿಶೇಷವಾಗಿತ್ತು. ಹಾಗಾಗಿ ಬಹಳ ಜನ ಇವರನ್ನು ಜೂನಿಯರ್ ರಾಜ್ ಕುಮಾರ್ ಎಂದು ಭಾವಿಸುತ್ತಿದ್ದರು, ಹಾಗೆಯೇ ಕರೆಯುತ್ತಿದ್ದರು ಕೂಡ. ಇವರು ಜನುಮದ ಜೋಡಿ ಸಿನಿಮಾದಲ್ಲಿ ನನ್ನೊಂದಿಗೆ ಅಭಿನಯಿಸಿದ್ದರು. ಚಿತ್ರದಲ್ಲೇ ನನ್ನೊಡನೆ ಬಹಳ ಆತ್ಮೀಯನಾಗಿ ಕೆಲಸ ಮಾಡಿದ್ದರು. ಮುಂದೆ ಅನೇಕ ಸಿನಿಮಾಗಳಲ್ಲಿ ಕೆಲಸ ಮಾಡಿದ್ದರು. ಬಳಿಕ ಅವರಿಗೆ ಆರೋಗ್ಯ ಸಮಸ್ಯೆ ಕಾಡತೊಡಗಿತು.'' - ಮಂಡ್ಯ ರಮೇಶ್

    ನನಗೆ ತುಂಬಾ ನೋವು ಉಂಟು ಮಾಡಿದೆ

    ನನಗೆ ತುಂಬಾ ನೋವು ಉಂಟು ಮಾಡಿದೆ

    ''ಅವರ ನಿಧನ ವೈಯಕ್ತಿಕವಾಗಿ ನನಗೆ ತುಂಬಾ ನೋವನ್ನು ಉಂಟು ಮಾಡಿದೆ. ಜಯಕುಮಾರ್ ಓರ್ವ ಸಜ್ಜನ ವ್ಯಕ್ತಿ. ಅವರದ್ದು ತುಂಬಾ ಸಾತ್ವಿಕವಾದ ನಡವಳಿಕೆ. ಅನೇಕ ಜನರಿಗೆ ರಂಗಭೂಮಿ, ಸಿನಿಮಾ, ಟಿವಿ ಕಾರ್ಯಕ್ರಮಗಳಲ್ಲಿ ಇಷ್ಟವಾದ ವ್ಯಕ್ತಿ. ಅವರು ಹಲವು ಧೀರೋದಾತ್ತ ಪಾತ್ರಗಳಿಗೆ ಹೆಸರಾಗಿದ್ದವರು. ಅವರ ಕುಟುಂಬದವರಿಗೆ ಅವರ ನಿಧನದಿಂದ ಉಂಟಾದ ನೋವನ್ನು ತಡೆದುಕೊಳ್ಳುವ ಶಕ್ತಿ, ಸಾಂತ್ವನ ಸಿಗಲಿ ಎಂಬುದಾಗಿ ಆಶಿಸುತ್ತೇನೆ.'' - ಮಂಡ್ಯ ರಮೇಶ್

    100ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟನೆ

    100ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟನೆ

    ಕನ್ನಡ ಹಾಗೂ ತೆಲುಗು ಸೇರಿದಂತೆ 100ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ಕೊಡಗನೂರು ಜಯಕುಮಾರ್ ನಟಿಸಿದ್ದರು. ದಾವಣಗೆರೆ ಜಿಲ್ಲೆಯ ಕೊಡಗನೂರು ನಿವಾಸಿಯಾಗಿದ್ದ ಜಯಕುಮಾರ್ ಪತ್ನಿ ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ. ರಂಗಭೂಮಿ ಹಾಗೂ ಚಲನಚಿತ್ರ ರಂಗಕ್ಕೆ ಸಲ್ಲಿಸಿರುವ ಸೇವೆಯ ಪ್ರತಿರೂಪವಾಗಿ 2019ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸಹ ಲಭಿಸಿದೆ.

    English summary
    Senior Comedy artist Mandya ramesh express condolence to kodaganur vijayakumar death.
    Tuesday, October 6, 2020, 16:25
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X