»   » ಪ್ರಿಯಾ ಕೆಣಕುವ ಕಣ್ಣೋಟಕ್ಕೆ ಮಂಗಳೂರಿನ ಕಾರ್ಪರೇಟರ್ ಕೂಡ ಫಿದಾ!

ಪ್ರಿಯಾ ಕೆಣಕುವ ಕಣ್ಣೋಟಕ್ಕೆ ಮಂಗಳೂರಿನ ಕಾರ್ಪರೇಟರ್ ಕೂಡ ಫಿದಾ!

Posted By: ಕಿರಣ್, ಮಂಗಳೂರು ಪ್ರತಿನಿಧಿ
Subscribe to Filmibeat Kannada
ಪ್ರಿಯಾ ಪ್ರಕಾಶ್ ಕಣ್ಣೋಟಕ್ಕೆ ಮಂಗಳೂರಿನ ಕಾರ್ಪರೇಟರ್ ಫಿದಾ! | Filmibeat Kannada

ಕಳೆದ ಒಂದು ವಾರದಿಂದ ಯಾರ ವಾಟ್ಸ್ ಆಪ್ ಸ್ಟೇಟಸ್, ಫೇಸ್ ಬುಕ್ ಪೋಸ್ಟ್ ನೋಡಿದ್ರೂ, ಅದರಲ್ಲಿ ಪ್ರಿಯಾ ಪ್ರಕಾಶ್ ವಾರಿಯರ್ ಕಣ್ ಹೊಡೆಯುವ ವಿಡಿಯೋನೇ ರಾರಾಜಿಸುತ್ತಿದೆ.

ಒಂದೇ ದಿನದಲ್ಲಿ ಇಂಟರ್ನೆಟ್ ನಲ್ಲಿ ಸುನಾಮಿ ಎಬ್ಬಿಸಿ, ರಾತ್ರೋ ರಾತ್ರಿ ಜನಪ್ರಿಯತೆ ಪಡೆದುಕೊಂಡ ಈ ಮಲಯಾಳಿ ಚೆಲುವೆಗೆ ಕ್ಲೀನ್ ಬೌಲ್ಡ್ ಆಗದ ಹುಡುಗರೇ ಇಲ್ಲ. ನ್ಯಾಷನಲ್ ಕ್ರಶ್ ಅಂತಲೇ ಫೇಮಸ್ ಆಗಿರುವ ಈ ಕಣ್ಣಲ್ಲೇ ಕೊಲ್ಲುವ ಸುಂದರಿಗೆ ಮಂಗಳೂರಿನ ಕಾರ್ಪರೇಟರ್ ಕೂಡ ಫಿದಾ ಆಗಿದ್ದಾರೆ ಅಂದ್ರೆ ನೀವು ನಂಬಲೇಬೇಕು.

ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಗಂಭೀರ ಚರ್ಚೆ ನಡೆಯುತ್ತಿದ್ದರೂ, ಅದರ ಬಗ್ಗೆ ಗಮನ ಕೊಡದೆ ಪ್ರಿಯಾ ಪ್ರಕಾಶ್ ವಾರಿಯರ್ ಕಣ್ಣೋಟವನ್ನ ಕಾರ್ಪೋರೇಟರ್ ಒಬ್ಬರು ಬೆರಗಾಗಿ ನೋಡುತ್ತಿದ್ದರು. ಏನಿದು ಸುದ್ದಿ ಅಂತೀರಾ.? ಸಂಪೂರ್ಣ ವರದಿ ಇಲ್ಲಿದೆ, ನೋಡಿ...

ಕ್ಯಾಮರಾ ಕಣ್ಣಲ್ಲಿ ಸೆರೆಯಾಗಿದೆ

ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಆಯೋಜಿಸಲಾಗಿದ್ದ ಸಭೆಯಲ್ಲಿ ಗಂಭೀರ ಚರ್ಚೆ ನಡೆಯುತ್ತಿದ್ದಾಗ ಕಾರ್ಪೊರೇಟರ್ ಒಬ್ಬರು ಪ್ರಿಯಾ ಪ್ರಕಾಶ್ ವಾರಿಯರ್ ಕುಡಿನೋಟಕ್ಕೆ ಮರುಳಾಗಿದ್ದು ಕ್ಯಾಮರಾ ಕಣ್ಣಲ್ಲಿ ಸೆರೆಯಾಗಿದೆ.

ಕಣ್ಣಲ್ಲೇ ಕೊಲ್ಲುತ್ತಿರುವ ಈ ಹುಡುಗಿ ಬಗ್ಗೆ ಎಲ್ಲಿಯೂ ರಿವೀಲ್ ಆಗದ ಸಂಗತಿಗಳು!

ಸಭೆಯಲ್ಲಿ ಕೋಲಾಹಲ

ಎಡಿಬಿ ನೆರವಿನೊಂದಿಗೆ ಪಾಲಿಕೆ ವ್ಯಾಪ್ತಿಯಲ್ಲಿ ಒಳಚರಂಡಿ ಯೋಜನೆಯ ಸಾಧಕ ಭಾದಕಗಳ ಕುರಿತ ಸಭೆ ಮಂಗಳೂರು ಪಾಲಿಕೆ ಸಭಾಂಗಣದಲ್ಲಿ ನಡೆದಿತ್ತು. ಸಭೆಯಲ್ಲಿ ಉಪಸ್ಥಿತರಿದ್ದ ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಎಬಿಡಿ ಯೋಜನೆಯ ಅವ್ಯವಹಾರದಲ್ಲಿ ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಮೊಯಿದ್ದಿನ್ ಬಾವಾ ಶಾಮೀಲಾಗಿದ್ದಾರೆ ಎಂದು ಬಹಿರಂಗವಾಗಿ ಆರೋಪಿಸಿದರು. ಈ ಹಿನ್ನಲೆಯಲ್ಲಿ ಸಭೆಯಲ್ಲಿ ಕೋಲಾಹಲವೇ ನಡೆಯಿತು.

ಕಾರ್ಪರೇಟರ್ ಮಾತ್ರ ವಿಡಿಯೋ ನೋಡೋದ್ರಲ್ಲೇ ಬಿಜಿ

ವಾದ-ವಾಗ್ವಾದ, ಆರೋಪ ಪ್ರತ್ಯಾರೋಪ ನಡೆಯುತ್ತಿದ್ದರೂ ಮಂಗಳೂರು ಮಹಾನಗರ ಪಾಲಿಕೆಯ ಕಾರ್ಪೋರೇಟರ್ ಕಾಂಗ್ರೆಸ್ ನ ನವೀನ್ ಡಿಸೋಜಾ ಮಾತ್ರ ಪ್ರಿಯಾ ಪ್ರಕಾಶ್ ವಾರಿಯರ್ ಅವರ ಕಣ್ಣೋಟಕ್ಕೆ ಫಿದಾ ಆಗಿ ವಿಡಿಯೋ ನೋಡುವುದರಲ್ಲೇ ತಲ್ಲೀನರಾಗಿದ್ದರು.

ತಮ್ಮ ಕೆಲಸವನ್ನೇ ಮರೆತರಾ ಕಾರ್ಪರೇಟರ್.?

ಪಾಲಿಕೆಯ ಸಭೆಯಲ್ಲಿ ಅಷ್ಟೆಲ್ಲಾ ರಾದ್ಧಾಂತ ನಡೆದರೂ ನವೀನ್ ಡಿಸೋಜಾ ಮಾತ್ರ ಪ್ರಿಯಾ ಪ್ರಕಾಶ್ ಕಣ್ಣಿನ ಆಟಕ್ಕೆ ಮರಳಾಗಿದ್ದರು. ಪ್ರಿಯಾ ಪ್ರಕಾಶ್ ವಾರಿಯರ್ ಕಣ್ಣೋಟಕ್ಕೆ ಇಡೀ ದೇಶವೇ ಫಿದಾ ಆಗಿದೆ. ಇನ್ನು ನವೀನ್ ಯಾವ ಲೆಕ್ಕ ಅಂತ ನೀವು ಹೇಳ್ಬಹುದು. ಆದ್ರೆ, ಜನಪ್ರತಿನಿಧಿ ಆಗಿ ಜವಾಬ್ದಾರಿಯುತ ಸ್ಥಾನದಲ್ಲಿ ಕೂತ ಮೇಲೆ ಮೊದಲು ಕೆಲಸ ಮುಖ್ಯ ಅಲ್ವೇ.! ಪ್ರಿಯಾ ಕಣ್ಣೋಟದಿಂದ ಕಾರ್ಪರೇಟರ್ ತಮ್ಮ ಕೆಲಸವನ್ನೇ ಮರೆತಂತಿದೆ.

English summary
Amidst severe argument between the members of congress and DYFI leaders at the Mangalore city corporation, Congress Corporator Naveen Dsouza was busy watching National Crush Priya Prakash Varrier's viral video.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada