ಮಂಗಳೂರಿಗೆ ಬಂದ ರಚಿತಾ ರಾಮ್‌ಗೆ ಪೊಲೀಸರಿಂದ ಸನ್ಮಾನ

By ಮಂಗಳೂರು ಪ್ರತಿನಿಧಿ

ನಟಿ ರಚಿತಾರಾಮ್ ಸದ್ಯ ಮಂಗಳೂರು ಪ್ರವಾಸದಲ್ಲಿದ್ದಾರೆ. ವೈಯುಕ್ತಿಕ ಕಾರ್ಯಕ್ರಮ ಹಿನ್ನಲೆಯಲ್ಲಿ ಮಂಗಳೂರಿಗೆ ಆಗಮಿಸಿದ್ದ ರಚಿತಾ ರಾಮ್, ಮಂಗಳೂರು ನಗರ ಪೊಲೀಸ್ ಕಮೀಷನರ್ ಎನ್ ಶಶಿಕುಮಾರ್ ಆಹ್ವಾನದ ಮೇರೆಗೆ ಕಮೀಷನರ್ ಕಛೇರಿಗೆ ಭೇಟಿ ನೀಡಿದ್ದರು. ಮಂಗಳೂರು ನಗರ ಪೊಲೀಸರ ಜೊತೆ ಒಂದಷ್ಟು ಹೊತ್ತು ರಚಿತಾ ರಾಮ್ ಮಾತುಕತೆ ನಡೆಸಿದರು.

ಮಂಗಳೂರು ನಗರ ವ್ಯಾಪ್ತಿಯ ಎಸಿಪಿ,ಇನ್ಸ್ ಪೆಕ್ಟರ್, ಪಿಎಸ್ಐ ಹಾಗೂ ಕಮೀಷನರ್ ಕಛೇರಿಯ ಸಿಬ್ಬಂದಿ ಜೊತೆ ಮಾತುಕತೆ ನಡೆಸಿದ ರಚಿತಾ, ಪೊಲೀಸರ ಕಾರ್ಯ ವೈಖರಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Recommended Video

'ಏಕ್ ಲವ್ ಯಾ' ಸಿನಿಮಾದಲ್ಲೂ ರಚಿತಾ ಮದುವೆ ವಿಚಾರ ಚರ್ಚೆಯಾಗುತ್ತಿದೆ.

ಈ ವೇಳೆ ಮಾತನಾಡಿದ ನಟಿ ರಚಿತಾ ರಾಮ್, ದೇವಸ್ಥಾನಗಳಿಗೆ ಭೇಟಿ ನೀಡುವ ಸಲುವಾಗಿ ಬಂದಿದ್ದೆ. ರಾತ್ರಿಯೇ ಬೆಂಗಳೂರಿಗೆ ವಾಪಸ್ ಹೋಗಬೇಕಿತ್ತು. ಆದರೆ ರಾತ್ರಿ ಡ್ರೈವಿಂಗ್ ಕಷ್ಟ ಅಂತಾ ಬೆಳಗ್ಗೆ ಹೋಗಲು ತೀರ್ಮಾನಿಸಿದ್ದೆವು. ಬೆಳಗ್ಗೆ ಪಬ್ಬಾಸ್ ಐಸ್ ಕ್ರೀಂ ತಿಂದು ಹೋಗೋದು ಅಂತಾ ಯೋಚನೆ ಮಾಡಿದೆವು. ಗಂಟಲು ನೋವು ಇದ್ರೂ ಐಸ್ ಕ್ರೀಂ ತಿನ್ನಬೇಕೆಂಬ ಆಸೆಯಿಂದ ಐಸ್ ಕ್ರೀಂ ತಿಂದೆ. ಈ ಸಂದರ್ಭದಲ್ಲಿ ಕಮೀಷನರ್ ಶಶಿಕುಮಾರ್ ಕುಮಾರ್ ಕರೆ ಮಾಡಿ, ಕಚೇರಿಗೆ ಬರಲು ಅಹ್ವಾನ ನೀಡಿದರು. ಕಮೀಷನರ್ ಕಛೇರಿ ಬಂದಮೇಲೆ ಹೊಸ ಫ್ಯಾಮಿಲಿಯನ್ನು ನೋಡಿದ ಅನುಭವಾಯಿತು ಅಂತಾ ರಚಿತಾ ರಾಮ್ ಖುಷಿ ಹಂಚಿಕೊಂಡಿದ್ದಾರೆ.

Mangalore Police Felicitated Actress Rachita Ram

ಕೆಲಸದ ನಿಮಿತ್ತ ಹೊರಗೆ ಇದ್ದಿದ್ದರಿಂದ ನೇರ ಕಮೀಷನರ್ ಕಛೇರಿಗೆ ಬಂದೆ. ಮನೆಯಲ್ಲಿ ಹಾಕಿದ ಡ್ರೆಸ್ ನಲ್ಲೇ ಬಂದೆ ಅಂತಾ ರಚಿತಾ ಹೇಳಿದಾಗ ಕಮೀಷನರ್, ನೀವು ಹೇಗೆ ಬಂದರೂ ನೀವು ಅತೀ ಸುಂದರ ಅಂತಾ ಡೈಲಾಗ್ ಹೊಡೆದಿದ್ದಾರೆ. ಕಮೀಷನರ್ ಮಾತಿಗೆ ರಚಿತಾ ನಾಚಿ ನೀರಾಗಿದ್ದಾರೆ.

ಭಾಷಣ ವೇಳೆ ಪೊಲೀಸರ ಕಾರ್ಯವೈಖರಿ ಬಗ್ಗೆ ರಚಿತಾ ರಾಮ್ ಹಾಡಿಹೊಗಳಿದ್ದಾರೆ. ಎರಡು ಅತೀ ಕ್ಲಿಷ್ಠ ಸಂದರ್ಭದಲ್ಲಿ ಪೊಲೀಸರು ಅದ್ಭುತ ಕೆಲಸ ಮಾಡಿದ್ದಾರೆ. ಪೊಲೀಸರ ಬಗ್ಗೆ ಮಾತನಾಡೋವಾಗ ಮೈ ರೋಮಾಂಚನವಾಗುತ್ತದೆ. ಚಿಕ್ಕವಳಿರುವ ಶಾಲೆಯಲ್ಲಿ ಭವಿಷ್ಯದಲ್ಲಿ ಏನಾಗಬೇಕು ಅಂತಾ ಶಿಕ್ಷಕರು ಕೇಳಿದಾಗ ಐಪಿಎಸ್ ಆಫೀಸರ್ ಆಗಬೇಕು ಅಂತಾ ಹೇಳುತ್ತಿದ್ದೆ. ಆ ಬಳಿಕ ಸರ್ಕಾರಿ ಅಧಿಕಾರಿ ಆಗಬೇಕು ಅಂತಾ ಆಸೆ ಇತ್ತು ಅಂತಾ ರಚಿತಾ ರಾಮ್ ತನ್ನ ಕನಸನ್ನು ಬಿಚ್ಚಿಟ್ಟಿದ್ದಾರೆ.

‌ನನಗೆ ಚಿತ್ರದಲ್ಲಿ ಪೊಲೀಸ್ ಅಧಿಕಾರಿ ಪಾತ್ರ ಮಾಡಬೇಕೆಂದು ತುಂಬಾ ಆಸೆ ಇದೆ. ಈವರೆಗೆ ಡಾಕ್ಟರ್, ಲಾಯರ್ ಪಾತ್ರ ಮಾಡಿದ್ದೇನೆ. ಪೊಲೀಸ್ ಪಾತ್ರಕ್ಕಾಗಿ ಕಾಯುತ್ತಿದ್ದೇನೆ. 'ಕನ್ನಡ ಗೊತ್ತಿಲ್ಲ' ಎಂಬ ಚಿತ್ರ ಕ್ಕಾಗಿ ಪೊಲೀಸ್ ಪಾತ್ರ ಮಾಡಲು ಹೇಳಿದ್ದರು. ಆದರೆ ಕಾರಣಾಂತರದಿಂದ ಆ ಚಿತ್ರವನ್ನು ಒಪ್ಪಿಕೊಂಡಿಲ್ಲ'' ಅಂತಾ ರಚಿತಾ ರಾಮ್ ಹೇಳಿದ್ದಾರೆ. ಈ ವೇಳೆ ಶಶಿಕುಮಾರ್, ಮುಂದೆ 'ರಚಿತಾ ರಾಮ್ ಐಪಿಎಸ್' ಅಂತಾ ಚಿತ್ರ ಮಾಡಿ ಸಲಹೆ ನೀಡಿದ್ದಾರೆ.

Mangalore Police Felicitated Actress Rachita Ram

ಮಂಗಳೂರು ಪೊಲೀಸರ ಬಗ್ಗೆ ಮೆಚ್ಚುಗೆ ಮಾತನಾಡಿದ ರಚಿತಾ ರಾಮ್, ಮಂಗಳೂರು ನಗರ ಪೊಲೀಸ್ ಕಮೀಷನರ್ ಎನ್ ಶಶಿಕುಮಾರ್ ತುಂಬಾ ಮುಕ್ತ ಮನಸ್ಸಿನಿಂದ ಮಾತನಾಡಿದ್ದಾರೆ.. ಬ್ಯುಸಿ ನಡುವೆ ಸಮಯ ನೀಡಿದ್ದಾರೆ. ಈ ಹಿಂದೆ ಮಂಗಳೂರಿಗೆ ಬಂದಾಗ, ಯಾರೂ ಪರಿಚಯದವರು ಇಲ್ಲಲ್ವಾ ಎಂಬ ಭಾವನೆಯಿತ್ತು. ಆದರೆ ಪೊಲೀಸರ ಪ್ರೀತಿ ನೋಡೋವಾಗ ನನಗೆ ಮಂಗಳೂರಿನಲ್ಲಿ ದೊಡ್ಡ ಫ್ಯಾಮಿಲಿ ಇದೆ ಅಂತಾ ಹೇಳೋಕೆ ಖುಷಿ ಆಗುತ್ತಿದೆ ಅಂತಾ ರಚಿತಾ ರಾಮ್ ಹೇಳಿದ್ದಾರೆ.

ಹೊಸವರ್ಷ, ಕ್ರಿಸ್ಮಸ್ ಹಬ್ಬ ಹತ್ತಿರ ಬರುತ್ತಿದೆ. ಎಲ್ಲರೂ ಆರೋಗ್ಯ ಕಾಪಾಡಿಕೊಳ್ಳಿ. ಒಳ್ಳೆಯದನ್ನೇ ಯೋಚನೆ ಮಾಡೋಣ ಅಂತಾ ರಚಿತಾ ರಾಮ್ ಹೇಳಿದ್ದಾರೆ.

More from Filmibeat

English summary
Mangalore police felicitated actress Rachita Ram. Took selfies with her. Rachita Ram praised Mangalore police and express her desire to act as police officer in movie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X