twitter
    For Quick Alerts
    ALLOW NOTIFICATIONS  
    For Daily Alerts

    ಮಂಗಳೂರು: 79 ವರ್ಷ ಹಳೆಯ ಚಿತ್ರಮಂದಿರ ನೆಲಸಮ

    |

    ಸಿಂಗಲ್ ಥಿಯೇಟರ್‌ಗಳ ಕಾಲ ನಿಧಾನಕ್ಕೆ ಮುಗಿಯುತ್ತಾ ಬಂದಿದೆ. ಮೊದಲಿಗೆ ಮಲ್ಟಿಫ್ಲೆಕ್ಸ್‌ಗಳಿಂದಾಗಿ ಭಾರಿ ಹೊಡೆತ ತಿಂದ ಚಿತ್ರಮಂದಿರಗಳು ಇದೀಗ ನೆಟ್‌ಫ್ಲಿಕ್ಸ್, ಅಮೆಜಾನ್‌ಗಳಿಂದಾಗಿ ಹಿನ್ನಡೆ ಅನುಭವಿಸುತ್ತಿವೆ.

    Recommended Video

    Brahma ಚಿತ್ರದ ಅದ್ದೂರಿ ತೆರೆ ಹಿಂದಿನ ದೃಶ್ಯಗಳು | Behind the scenes | Filmibeat Kannada

    ಪಿವಿಆರ್, ಐನಾಕ್ಸ್ ಇನ್ನಿತರೆ ಮಲ್ಪಿಫ್ಲೆಕ್ಸ್‌ಗಳ ಹೊಡೆತವನ್ನು ಹಾಗೋ-ಹೀಗೋ ಥಾಳಿಕೊಂಡಿದ್ದ ಕೆಲವು ಚಿತ್ರಮಂದಿರಗಳು ಕೊರೊನಾ ಹೊಡೆತಕ್ಕೆ ಇನ್ನಷ್ಟು ಬಡಕಲಾಗಿವೆ. ಆಗಲೋ-ಈಗಲೋ ಧರೆಗುರುಳಲು ಸಜ್ಜಾಗಿ ನಿಂತಿವೆ.

     ಮುಚ್ಚಲಿದೆ ಐವತ್ತು ವರ್ಷ ಹಳೆಯ ಖ್ಯಾತ ಚಿತ್ರಮಂದಿರ ಮುಚ್ಚಲಿದೆ ಐವತ್ತು ವರ್ಷ ಹಳೆಯ ಖ್ಯಾತ ಚಿತ್ರಮಂದಿರ

    ದಶಕಗಳ ಕಾಲ ಮನೊರಂಜನೆ ವಿಭಾಗದ ಕೇಂದ್ರವಾಗಿದ್ದ, ತಾವಿದ್ದ ಸ್ಥಳದ ಗುರುತು ಹೆಚ್ಚಿಸಿದ್ದ ಚಿತ್ರಮಂದಿರಗಳು ಈಗ ಗುರುತೇ ಇಲ್ಲದಂತಾಗುತ್ತಿವೆ. ಕರ್ನಾಟಕದಲ್ಲೂ ಹಲವು ಚಿತ್ರಮಂದಿರಗಳು ಧರೆಗುರುಳಿವೆ. ಇದೀಗ ಮಂಗಳೂರಿನ ಐತಿಹಾಸಿಕ ಚಿತ್ರಮಂದಿರ ಧರೆಗುರುಳುತ್ತಿದೆ.

    79 ವರ್ಷ ಇತಿಹಾಸವಿದ್ದ ಚಿತ್ರಮಂದಿರ

    79 ವರ್ಷ ಇತಿಹಾಸವಿದ್ದ ಚಿತ್ರಮಂದಿರ

    79 ವರ್ಷ ಇತಿಹಾಸವಿದ್ದ ಮಂಗಳೂರಿನ ಸೆಂಟ್ರಲ್ ಟಾಕೀಸ್ ಇದೀಗ ಧರೆಗುರುಳುತ್ತಿದೆ. ಚಿತ್ರಮಂದಿರವಿದ್ದ ಜಾಗದಲ್ಲಿ ಬೃಹತ್ ಮಾಲ್ ಒಂದು ತಲೆ ಎತ್ತಲಿದೆ. ಹಾಗಾಗಿ ಚಿತ್ರಮಂದಿರವನ್ನು ಕೆಡವಲಾಗುತ್ತಿದೆ. ರಾಜ್ಯದ ಹಳೆಯ ಚಿತ್ರಮಂದಿರಗಳಲ್ಲಿ ಇದೂ ಸಹ ಒಂದು

    1941 ರಲ್ಲಿ ನಿರ್ಮಿಸಲಾದ ಚಿತ್ರಮಂದಿರ

    1941 ರಲ್ಲಿ ನಿರ್ಮಿಸಲಾದ ಚಿತ್ರಮಂದಿರ

    ಚಿತ್ರಮಂದಿರದ ಪ್ರಸ್ತುತ ಮಾಲೀಕ ಸುಧೀರ್ ಕಾಮತ್ ಹೇಳುವಂತೆ, ಅವರ ತಂದೆ ಕೆ.ಜನಾರ್ಧನ ಕಾಮತ್ ಅವರು ಸೆಂಟ್ರಲ್ ಟಾಕೀಸ್ ಅನ್ನು 1941 ರಲ್ಲಿ ಸ್ಥಾಪಿಸಿದರಂತೆ. ಆಗ ಆ ಜಾಗಕ್ಕೆ 70 ಪೈಸೆ ಬೆಲೆಇತ್ತಂತೆ.

    'ರಾಬರ್ಟ್' ಚಿತ್ರತಂಡಕ್ಕೆ ಕೈಮುಗಿದ ಚಿತ್ರಮಂದಿರ ಮಾಲೀಕ'ರಾಬರ್ಟ್' ಚಿತ್ರತಂಡಕ್ಕೆ ಕೈಮುಗಿದ ಚಿತ್ರಮಂದಿರ ಮಾಲೀಕ

    1975 ರಲ್ಲಿ ನವೀಕರಣಗೊಂಡಿತ್ತು

    1975 ರಲ್ಲಿ ನವೀಕರಣಗೊಂಡಿತ್ತು

    1975 ರಲ್ಲಿ ನವೀಕರಣಗೊಂಡಿದ್ದ ಈ ಚಿತ್ರಮಂದಿರ ದಶಕಗಳ ಕಾಲ ಮಂಗಳೂರಿಗರಿಗೆ ಸಿನಿಮಾ ನೋಡಲು ಮೊದಲ ಆಯ್ಕೆ ಆಗಿತ್ತು. ಆದರೆ ಮಲ್ಟಿಫ್ಲೆಕ್ಸ್, ಟಿವಿ ಹಾಗೂ ಒಟಿಟಿಗಳ ಹೊಡೆತಕ್ಕೆ ಸಿಕ್ಕು ಕಳೆದ ಒಂದು ವರ್ಷದಿಂದ ಸಿನಿಮಾ ಪ್ರದರ್ಶನ ಸ್ಥಗಿತಗೊಳಿಸಿತ್ತು. ಇದೀಗ ನೆಲಸಮವಾಗುತ್ತಿದೆ.

    ತುಳು ಸಿನಿಮಾಗಳು ಸಹ ಪ್ರದರ್ಶನವಾಗುತ್ತಿದ್ದವು

    ತುಳು ಸಿನಿಮಾಗಳು ಸಹ ಪ್ರದರ್ಶನವಾಗುತ್ತಿದ್ದವು

    ಮೊದಲಿಗೆ ಹಾಲಿವುಡ್‌, ಬಾಲಿವುಡ್‌ ಸಿನಿಮಾಗಳ ಪ್ರದರ್ಶನಕ್ಕೆ ಹೆಸರುವಾಸಿಯಾಗಿದ್ದ ಸೆಂಟ್ರಲ್ ಟಾಕೀಸ್ ನಂತರ ರಾಜ್‌ಕುಮಾರ್, ವಿಷ್ಣುವರ್ಧನ್ ಅವರ ಸಿನಿಮಾಗಳನ್ನೂ ಪ್ರದರ್ಶಿಸಿದೆ. ಶಿವರಾಜ್ ಕುಮಾರ್,ಸ ಅಪ್ಪು, ದರ್ಶನ್, ಸುದೀಪ್ ಇನ್ನೂ ಹಲವು ಸ್ಟಾರ್ ನಟರ ಸಿನಿಮಾಗಳು ಪ್ರದರ್ಶನಗೊಂಡಿರುವ ಈ ಚಿತ್ರಮಂದಿರದಲ್ಲಿ ತುಳು ಸಿನಿಮಾಗಳೂ ಸಹ ಹಿಟ್ ಆಗಿವೆ.

    ವಾಣಿಜ್ಯ ಸಂಕೀರ್ಣ ತೆಲೆ ಎತ್ತಲಿದೆ

    ವಾಣಿಜ್ಯ ಸಂಕೀರ್ಣ ತೆಲೆ ಎತ್ತಲಿದೆ

    ಸೆಂಟ್ರಲ್ ಟಾಕೀಸ್ ನೆಲಸಮಯದ ಬಳಿಕ ಅಲ್ಲಿಯೇ ಒಂದು ದೊಡ್ಡ ವಾಣಿಜ್ಯ ಸಂಕೀರ್ಣ ತಲೆ ಎತ್ತಲಿದೆ ಎನ್ನಲಾಗುತ್ತಿದೆ. ವಾಣಿಜ್ಯ ಸಂಕೀರ್ಣದಲ್ಲಿ ಮಲ್ಟಿಫ್ಲೆಕ್ಸ್ ಇರಲಿದೆಯೇ ಇಲ್ಲವೆ ಎಂಬ ಬಗ್ಗೆ ಮಾಲೀಕರು ಮಾಹಿತಿ ನೀಡಿಲ್ಲ.

    ಓಟಿಟಿ ನಲ್ಲಿ ಸಿನಿಮಾ ರಿಲೀಸ್ ಮಾಡಿದರೆ ತಪ್ಪೆನ್ನಲಾಗದು: ಓಟಿಟಿ ಪರ ಸತೀಶ್ ನಿಲವುಓಟಿಟಿ ನಲ್ಲಿ ಸಿನಿಮಾ ರಿಲೀಸ್ ಮಾಡಿದರೆ ತಪ್ಪೆನ್ನಲಾಗದು: ಓಟಿಟಿ ಪರ ಸತೀಶ್ ನಿಲವು

    English summary
    One of the Karnataka's old movie theater Mangaluru's Central theater demolished.
    Tuesday, August 25, 2020, 9:34
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X