»   » ಕೇಬಲ್‌ ಟೀವಿ ಆಪರೇಟರ್‌ಗಳ ಮೇಲೆ ಚಿತ್ರೋದ್ಯಮದವರ ಕೆಂಗಣ್ಣು

ಕೇಬಲ್‌ ಟೀವಿ ಆಪರೇಟರ್‌ಗಳ ಮೇಲೆ ಚಿತ್ರೋದ್ಯಮದವರ ಕೆಂಗಣ್ಣು

Posted By: Staff
Subscribe to Filmibeat Kannada

ಮಂಗಳೂರು : ಹೊಸದಾಗಿ ಬಿಡುಗಡೆಯಾದ ಚಿತ್ರವನ್ನು ಕೇಬಲ್‌ ಟೀವಿಯಲ್ಲಿ ಪ್ರಸಾರ ಮಾಡುವುದರ ವಿರುದ್ಧ ಚಿತ್ರೋದ್ಯಮ ಮಂಡಳಿಯ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು ಇದು ಕಾಪಿ ರೈಟ್‌ಆ್ಯಕ್ಟ್‌ನ ಸ್ಪಷ್ಟ ಉಲ್ಲಂಘನೆಯಾಗುತ್ತದೆ ಎಂದು ಎಚ್ಚರಿಸಿದ್ದಾರೆ.

ಕೇಬಲ್‌ ಜಾಲದಲ್ಲಿ ಹೊಸ ಚಲನ ಚಿತ್ರಗಳನ್ನು ಪ್ರಸಾರ ಮಾಡುವುದರ ವಿರುದ್ಧ ಜಿಲ್ಲಾ ಪೊಲೀಸರು ಸೂಕ್ತ ಕ್ರಮ ಕೈಗೊಳ್ಳುವಂತೆಯೂ ಆಗ್ರಹಿಸಲಾಗಿದೆ. ಕೆನರಾ ಚೇಂಬರ್‌ ಆಫ್‌ ಕಾಮರ್ಸ್‌ ಆ್ಯಂಡ್‌ ಇಂಡಸ್ಟ್ರಿ(ಕೆಸಿಸಿಐ) ಈ ಕುರಿತ ಸಭೆಯಾಂದನ್ನು ಶುಕ್ರವಾರ ನಡೆಸಿದ ಸಭೆಯಲ್ಲಿ ಕೇಬಲ್‌ ನಿರ್ವಹಣಾಕಾರರನ್ನು ತರಾಟೆಗೆ ತೆಗೆದುಕೊಂಡ ಕರ್ನಾಟಕ ಚಲನಚಿತ್ರ ಮಂಡಳಿಯ ಕೆಸಿಎನ್‌ ಚಂದ್ರಶೇಖರ್‌ ಹೊಸ ಚಲನ ಚಿತ್ರ ಪ್ರದರ್ಶಿಸುವುದರಿಂದ ಚಿತ್ರೋದ್ಯಮಕ್ಕೆ ಹಾನಿಯಾಗುತ್ತದೆ. ಅಲ್ಲದೆ ಇದು ಕಾಪಿರೈಟ್‌ ಆ್ಯಕ್ಟ್‌ನ ಸ್ಪಷ್ಟ ಉಲ್ಲಂಘನೆಯೂ ಹೌದು ಎಂದರು.


ಚಂದ್ರು ಅವರ ಮಾತನ್ನು ಸಮರ್ಥಿಸಿದ ಮೋಷನ್‌ ಪಿಕ್ಚರ್ಸ್‌ ಅಸೋಸಿಯೇಷನ್‌ ಅಧ್ಯಕ್ಷ ವಿಕ್ರಂ ಸಿಂಗ್‌, ಹಾಗೂ ಡಾ.ರಾಜ್‌ ಕುಮಾರ್‌ ಅಭಿಮಾನಿಗಳ ಸಂಘದ ಅಧ್ಯಕ್ಷ ಸಾ.ರಾ. ಗೋವಿಂದು, ಕೋಟಿಗಟ್ಟಲೆ ಹಣ ಖರ್ಚು ಮಾಡಿ, ಶ್ರಮ ವ್ಯಯಿಸಿ ತೆಗೆದ ಚಿತ್ರವನ್ನು ಪ್ರದರ್ಶಿಸಿ, ಚಿಕ್ಕಾಸಿನ ಖರ್ಚಿಲ್ಲದೆ ಕೇಬಲ್‌ ಟೀವಿ ಆಪರೇಟರ್‌ಗಳು ಲಾಭ ಪಡೆಯುತ್ತಿರುವುದು ನ್ಯಾಯವೇ ಎಂದು ಪ್ರಶ್ನಿಸಿದರು.

ಈ ಎಲ್ಲ ಮಾತುಗಳಿಗೆ ಸ್ಪಂದಿಸಿದ ಕೇಬಲ್‌ ನಿರ್ವಹಣಾಕಾರರ ಸಂಘದ ಕಾರ್ಯದರ್ಶಿ ಗಾಡ್ವಿನ್‌ ಅವರು ಹೊಸ ಚಿತ್ರಗಳನ್ನು ಪ್ರದರ್ಶಿಸುವಂತೆ ಪ್ರೇಕ್ಷಕರಿಂದ ತೀರಾ ಒತ್ತಡ ಬರುತ್ತಿದೆ. ಚಿತ್ರೋದ್ಯಮದವರ ಸಂಕಟವನ್ನು ಅರ್ಥ ಮಾಡಿಕೊಳ್ಳಬಲ್ಲೆವು. ಆದರೆ ಪ್ರೇಕ್ಷಕರಿಗೆ ಹಳೇ ಚಿತ್ರಗಳು ಖುಷಿಕೊಡುವುದಿಲ್ಲ . ಅಲ್ಲದೆ ಇತರ ಚಾನೆಲ್‌ಗಳೊಂದಿಗೆ ಸ್ಪರ್ಧೆಯನ್ನೂ ನಾವು ಎದುರಿಸಬೇಕಾಗುತ್ತದೆ ಎಂದು ಚಾನೆಲ್‌ ನಿರ್ವಹಣಾಕಾರರನ್ನು ಸಮರ್ಥಿಸಿಕೊಂಡರು.

English summary
Kannada Edition of Oneindia- Film industry against screening of new films on cable
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada