»   » ಮಂಗಳೂರಲ್ಲಿ ಸುಂದರ್‌ರಾಜ್‌ ದಂಪತಿಗಳೊಂದಿಗೆ ತಾರಾ ತ್ರಿವಳಿ

ಮಂಗಳೂರಲ್ಲಿ ಸುಂದರ್‌ರಾಜ್‌ ದಂಪತಿಗಳೊಂದಿಗೆ ತಾರಾ ತ್ರಿವಳಿ

Posted By: Staff
Subscribe to Filmibeat Kannada

ಮಂಗಳೂರು : ಅಭಿಮಾನಿಗಳು ಮುತ್ತಿಗೆ ಹಾಕುವ ಭಯವಿರಲಿಲ್ಲ . ಸ್ಟಾರ್ಟ್‌, ಕಟ್‌ಗಳ ಕಿರಿಕಿರಿಯೂ ಇರಲಿಲ್ಲ . ಸುಂದರ್‌ರಾಜ್‌, ಪ್ರಮೀಳಾ ಜೋಷಾಯ್‌, ಅಭಿನಯ, ರೇಖಾದಾಸ್‌, ಕರಿಬಸವಯ್ಯ ಗುರುವಾರ ಸಂಜೆ ಕಡಲ ನಗರಿ ಮಂಗಳೂರಿನ ಬೀದಿಗಳಲ್ಲಿ ಆರಾಮಾಗಿ ಸುತ್ತುತ್ತಿದ್ದರು.

ಅಂದಹಾಗೆ, ಈ ಸಿನಿಮಾ ಕಲಾವಿದರು ಮಂಗಳೂರಿಗೆ ಬಂದಿದ್ದುದು ಸಿನಿಮಾ ಅಥವಾ ಟೀವಿ ಶೂಟಿಂಗ್‌ಗಲ್ಲ . ಅವರದು ಒಂದು ರೀತಿಯ ಪಿಕ್ನಿಕ್‌ ಮಾದರಿಯ ವಾಣಿಜ್ಯ ಪ್ರವಾಸ; ಪ್ರಚಾರ ಅಂದರೂ ಸರಿ. ಇವರೆಲ್ಲ ಭೇಟಿ ಕೊಟ್ಟಿದ್ದುದು- ನಗರದ ಲ್ಯಾಂಡ್‌ಲಿಂಕ್ಸ್‌ ಸಂಸ್ಥೆಯು ಕೊಂಚಾಡಿ- ದೇರೇಬೈಲ್‌ನಲ್ಲಿ ನಿರ್ಮಿಸಿರುವ ಲ್ಯಾಂಡ್‌ಲಿಂಕ್ಸ್‌ ಟೌನ್‌ಶಿಪ್‌ಗೆ. ಪ್ರಚಾರ ಎಂದರೇನು ಅನ್ನುವುದು ಅರ್ಥವಾಯಿತಲ್ಲ ?

ಲ್ಯಾಂಡ್‌ಲಿಂಕ್ಸ್‌ ಟೌನ್‌ಶಿಪ್‌ನಲ್ಲಿ ಸುತ್ತು ಹೊಡೆದ ಸುಂದರ್‌ರಾಜ್‌ ನಾಯಕತ್ವದ ತಾರಾ ಸಮೂಹ, ಮಂಗಳೂರಿನ ವಾತಾವರಣದ ಸವಿಯುಂಡರು; ಕಣ್ಣು, ಮನಸ್ಸಿನೊಂದಿಗೆ ಹೊಟ್ಟೆಯನ್ನೂ ತುಂಬಿಸಿಕೊಂಡರು. ಟೌನ್‌ಶಿಪ್‌ನ ಅಚ್ಚುಕಟ್ಟಿನ ವ್ಯವಸ್ಥೆ ಯ ಬಗ್ಗೆ ಶಹಬ್ಭಾಸ್‌ ಅಂದರು.
ಲ್ಯಾಂಡ್‌ಲಿಂಕ್ಸ್‌ ಸಂಸ್ಥೆಯ ಮಾಲೀಕ ಶ್ರೀ ಜೆ. ಕೃಷ್ಣ ಪಾಲೆಮಾರ್‌, ಶ್ರೀಮತಿ ಶಶಿಕಲಾ ಪಾಲೆಮಾರ್‌, ಶ್ರೀ ಕೃಷ್ಣಾನಂದ ರಾವ್‌ ಮುಂತಾದವರು ತಾರಾಸಮೂಹ ಲ್ಯಾಂಡ್‌ಲಿಂಕ್ಸ್‌ಗೆ ಭೇಟಿ ಕೊಟ್ಟಿದ್ದಾಗ ಹಾಜರಿದ್ದರು.

English summary
Sundar Raj, Prameela, Abhinaya, Rekhadas and Karibasavayya in Mangalore
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada