ಅನುಶ್ರೀ ವಿರುದ್ಧ ಹೇಳಿಕೆ ಕೊಟ್ಟಿಲ್ಲ: ಉಲ್ಟಾ ಹೊಡೆದ ಆರೋಪಿ ಕಿಶೋರ್

By ಫಿಲ್ಮಿಬೀಟ್ ಡೆಸ್ಕ್

ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ಪೊಲೀಸರು ಸಲ್ಲಿಸಿರುವ ಚಾರ್ಜ್‌ ಶೀಟ್‌ನಲ್ಲಿ ಆರೋಪಿ ಕಿಶೋರ್, ಅನುಶ್ರೀ ವಿರುದ್ಧ ಹೇಳಿಕೆ ನೀಡಿದ್ದಾರೆ ಎನ್ನಲಾಗಿತ್ತು. ಈ ಸುದ್ದಿಗೆ ಸಂಬಂಧಿಸಿದಂತೆ ಚಾರ್ಜ್‌ ಶೀಟ್ ಪ್ರತಿಯ ಚಿತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು, ಆದರೆ ಈಗ ಮಾಧ್ಯಮದೊಟ್ಟಿಗೆ ಮಾತನಾಡಿರುವ ಕಿಶೋರ್, ನಾನು ಅನುಶ್ರೀ ವಿರುದ್ಧ ಹೇಳಿಕೆ, ನೀಡಿಲ್ಲ, ಚಾರ್ಜ್‌ ಶೀಟ್‌ನಲ್ಲಿರುವ ಹೇಳಿಕೆಗೂ ನನಗೆ ಸಂಬಂಧವಿಲ್ಲ ಎಂದಿದ್ದಾರೆ.

Recommended Video

ಅನುಶ್ರೀ ಗೆ ಬಂತು ಆಪತ್ತು, ಯಾರನ್ನು ಸುಮ್ಮನ್ನೆ ಬಿಡಲ್ಲ ಎಂದ ಹೋಂ ಮಿನಿಸ್ಟರ್

''ಅನುಶ್ರೀ ಬಗ್ಗೆ ನಾನು ಏನೂ ಹೇಳಿಲ್ಲ. ''ಅನುಶ್ರೀ ಹೇಗೆ ಪರಿಚಯ ಎಂದು ಮಾತ್ರ ಕೇಳಿದ್ದರು. ಅದನ್ನು ಸಿಸಿಬಿ ಪೊಲೀಸರಿಗೆ ತಿಳಿಸಿದ್ದೇನೆ. ಡ್ರಿಂಕ್ಸ್ ಬಗ್ಗೆ ಮಾತ್ರ ಗೊತ್ತಿದೆ ಡ್ರಗ್ಸ್ ಬಗ್ಗೆ ನನಗೆ ಗೊತ್ತಿಲ್ಲ'' ಎಂದಿದ್ದಾರೆ.

''ನಾನು ಅನುಶ್ರೀಗೆ ಕೊರಿಯೊಗ್ರಫಿ ಮಾಡುತ್ತಿದ್ದೆ ಆದರೆ ಪಾರ್ಟಿ ಮಾಡಿದ್ದು ಎಲ್ಲ ಸುಳ್ಳು. ನಾನು ಪೊಲೀಸರ ಬಳಿ ಡ್ರಗ್ಸ್ ಬಗ್ಗೆ ಏನು ಹೇಳಿಲ್ಲ. ನನಗೆ ಅದರ ವಿಷಯವೂ ಗೊತ್ತಿಲ್ಲ'' ಎಂದಿದ್ದಾರೆ.

ನ್ಯಾಯಾಲಯಕ್ಕೆ ಸಲ್ಲಿಕೆಯಾಗಿರುವ ಚಾರ್ಜ್‌ ಶೀಟ್‌ನಲ್ಲಿ ನಿಮ್ಮ ಸಹಿ ಇದೆಯಲ್ಲ ಎಂಬ ಪ್ರಶ್ನೆಗೆ, ''ಅದು ಏನೋ ನನಗೆ ಗೊತ್ತಿಲ್ಲ. ನಾನಂತೂ ಈ ವಿಷಯಗಳನ್ನೆಲ್ಲ ಪೊಲೀಸರಿಗೆ ಹೇಳಿಲ್ಲ. ಬೇರೆ ಯಾರಾದರೂ ಹೇಳಿರಬಹುದೇನೋ ಆದರೆ ನಾನು ಹೀಗೆಲ್ಲ ಪೊಲೀಸರ ಬಳಿ ಹೇಳಿಲ್ಲ'' ಎಂದಿದ್ದಾರೆ ಕಿಶೋರ್ ಅವಾನ್ ಶೆಟ್ಟಿ.

ಹಾಗಿದ್ದರೆ ತನಿಖಾಧಿಕಾರಿಗಳು ನೀವು ಹೇಳಿಕೆ ನೀಡದೆಯೇ ತಪ್ಪಾಗಿ ಹೇಳಿಕೆ ನಮೂದು ಮಾಡಿಕೊಂಡರಾ? ಎಂಬ ಪ್ರಶ್ನೆಗೆ, ''ಅದೆಲ್ಲ ನನಗೆ ಗೊತ್ತಿಲ್ಲ. ಚಾರ್ಜ್ ಶೀಟ್ ಎಂದರೆ ಏನು? ಅದರಿಂದ ಏನಾಗುತ್ತೆ? ಅವೆಲ್ಲ ಏನೂ ಗೊತ್ತಿಲ್ಲ ನನಗೆ. ಅವರು ಏನು ಹೇಳಿದರೊ ನಾನು ಅದನ್ನು ಮಾಡಿದೆ ಅಷ್ಟೆ'' ಎಂದಿದ್ದಾರೆ ಕಿಶೋರ್.

ಅನುಶ್ರೀಗೂ ನನಗು ಸ್ನೇಹವೇ ಇಲ್ಲ: ಕಿಶೋರ್

ಅನುಶ್ರೀಗೂ ನನಗು ಸ್ನೇಹವೇ ಇಲ್ಲ: ಕಿಶೋರ್

''ಅನುಶ್ರೀ ನನಗೂ ಹೆಚ್ಚಿನ ಸ್ನೇಹವೇ ಇಲ್ಲ. ಒಮ್ಮೆ ಅವರಿಗೆ ಡ್ಯಾನ್ಸ್ ಕೋರಿಯೊಗ್ರಫಿ ಮಾಡಿದ್ದೇನೆ. ಅದಾದ ಬಳಿಕ ಕಾರ್ಯಕ್ರಮವೊಂದರಲ್ಲಿ ಭೇಟಿ ಆಗಿದ್ದೇನೆ. ಅದನ್ನು ಬಿಟ್ಟರೆ ನಾವು ಸಂಪರ್ಕದಲ್ಲಿಲ್ಲ. ಗೆಳೆಯರ ತರುಣ್ ಸಹ ಎಲ್ಲಿದ್ದಾನೆ ಗೊತ್ತಿಲ್ಲ ಅವನನ್ನೂ ನಾನು ಸಂಪರ್ಕ ಮಾಡಿಲ್ಲ'' ಎಂದಿದ್ದಾರೆ ಕಿಶೋರ್ ಅವಾನ್ ಶೆಟ್ಟಿ.

ನನ್ನ ಬದಕೇ ಬದಲಾಗಿಬಿಟ್ಟಿದೆ: ಕಿಶೋರ್ ಅವಾನ್ ಶೆಟ್ಟಿ

ನನ್ನ ಬದಕೇ ಬದಲಾಗಿಬಿಟ್ಟಿದೆ: ಕಿಶೋರ್ ಅವಾನ್ ಶೆಟ್ಟಿ

''ಕಳೆದ ವರ್ಷ ಡ್ರಗ್ಸ್ ಪ್ರಕರಣದಲ್ಲಿ ಬಂಧನಕ್ಕೆ ಒಳಗಾದ ಬಳಿಕ ನನ್ನ ಜೀವನ ಬದಲಾಗಿಬಿಟ್ಟಿದೆ. ಮುಂಚೆ ಎಲ್ಲಾ ಸದಾ ಶೋಗಳಿರುತ್ತಿತ್ತು. ಸಾಕಷ್ಟು ಕೆಲಸ ಸಿಗುತ್ತಿತ್ತು. ಆದರೆ ಈಗ ಎಲ್ಲೂ ಕೆಲಸ ಸಿಗುತ್ತಿಲ್ಲ. ಈಗ ಕೆಲವು ಗೆಳೆಯರು ಸೇರಿಕೊಂಡು ಡ್ಯಾನ್ಸ್ ತರಗತಿ ಆರಂಭ ಮಾಡಿಕೊಂಡಿದ್ದೇವೆ. ದೊಡ್ಡ ಕೊರಿಯೊಗ್ರಾಫರ್ ಆಗಬೇಕು ಎಂಬುದು ನನ್ನ ಆಸೆಯಾಗಿತ್ತು. ಅದನ್ನೇ ಮನಸಿನಲ್ಲಿಟ್ಟುಕೊಂಡು ಮುನ್ನಡೆಯುತ್ತಿದ್ದೇನೆ'' ಎಂದಿದ್ದಾರೆ ಕಿಶೋರ್.

ಕಳೆದ ವರ್ಷ ಕಿಶೋರ್ ಹಾಗೂ ತರುಣ್ ಅನ್ನು ಬಂಧಿಸಲಾಗಿತ್ತು

ಕಳೆದ ವರ್ಷ ಕಿಶೋರ್ ಹಾಗೂ ತರುಣ್ ಅನ್ನು ಬಂಧಿಸಲಾಗಿತ್ತು

ಡ್ಯಾನ್ಸರ್‌ಗಳು, ಕೊರಿಯೊಗ್ರಫರ್‌ಗಳು ಆದ ಕಿಶೋರ್ ಮತ್ತು ತರುಣ್ ಇಬ್ಬರನ್ನು ಕಳೆದ ಮಂಗಳೂರು ಪೊಲೀಸರು ಡ್ರಗ್ಸ್ ಪ್ರಕರಣದಲ್ಲಿ ಬಂಧಿಸಿದ್ದರು. ಅವರಿಬ್ಬರ ವಿಚಾರಣೆ ನಡೆದಾಗ ನಟಿ, ನಿರೂಪಕಿ ಅನುಶ್ರೀ ಹೆಸರು ಹೊರಗೆ ಬಂದಿತ್ತು. ಮಂಗಳೂರು ಪೊಲೀಸರು ಅನುಶ್ರೀಯ ವಿಚಾರಣೆಯನ್ನು ನಡೆಸಿದ್ದರು.

ದೋಷಾರೋಪ ಪಟ್ಟಿಯಲ್ಲಿ ದಾಖಲಿಸಿರುವ ಹೇಳಿಕೆ ಏನು?

ದೋಷಾರೋಪ ಪಟ್ಟಿಯಲ್ಲಿ ದಾಖಲಿಸಿರುವ ಹೇಳಿಕೆ ಏನು?

ಇದೀಗ ಪ್ರಕರಣದ ದೋಷಾರೋಪ ಪಟ್ಟಿಯನ್ನು ಮಂಗಳೂರು ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಿದ್ದು, ''ಅನುಶ್ರೀ ಸಹ ತಮ್ಮೊಂದಿಗೆ ಡ್ರಗ್ಸ್ ಸೇವನೆ ಮಾಡಿದ್ದರು, ಅನುಶ್ರೀಗೆ ಸಾಕಷ್ಟು ಡ್ರಗ್ ಪೆಡ್ಲರ್‌ಗಳು ಪರಿಚಯ ಇದ್ದಾರೆ, ಅವರೇ ನಮಗೆ ಡ್ರಗ್ಸ್ ತೆಗೆದುಕೊಂಡು ಬರುತ್ತಿದ್ದರು'' ಎಂದು ಕಿಶೋರ್ ಪೊಲೀಸರ ಮುಂದೆ ಹೇಳಿಕೆ ನೀಡಿರುವುದಾಗಿ ದೋಷಾರೋಪ ಪಟ್ಟಿಯಲ್ಲಿ ನಮೂದಿಸಿದ್ದಾರೆ. ದೋಷಾರೋಪ ಪಟ್ಟಿಯಲ್ಲಿ ಕಿಶೋರ್ ಸಹಿ ಸಹ ಇದೆ.

More from Filmibeat

English summary
Mangaluru Drug Case: Kishore Aman Shetty Reaction to Serious Allegations against Kannada TV Host and Anchor Anushree. Know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X