For Quick Alerts
  ALLOW NOTIFICATIONS  
  For Daily Alerts

  ಡ್ರಗ್ಸ್ ಪ್ರಕರಣ: ಅನುಶ್ರೀ ಹುಡುಕಿಕೊಂಡು ಮಂಗಳೂರಿನಿಂದ ಪೊಲೀಸರ ಆಗಮನ

  |

  ನಟಿ, ನಿರೂಪಕಿ ಅನುಶ್ರೀ ಅವರಿಗೆ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗುವಂತೆ ಮಂಗಳೂರು ಸಿಸಿಬಿ ಪೊಲೀಸರಿಂದ ನೊಟೀಸ್ ಜಾರಿ ಮಾಡಲಾಗಿದೆ. ಕೆಲವೇ ಗಂಟೆಗಳಲ್ಲಿ ಅನುಶ್ರೀ ಅವರಿಗೆ ನೊಟೀಸ್ ಅನ್ನು ಹಸ್ತಾಂತರಿಸಲಾಗುತ್ತದೆ.

  ಕೆಲವೇ ಗಂಟೆಗಳ ಮುನ್ನಾ ಮಾಧ್ಯಮಗಳೊಂದಿಗೆ ಮಾತನಾಡಿದ್ದ ನಟಿ ಅನುಶ್ರೀ, 'ನನಗೆ ಸಿಸಿಬಿಯಿಂದ ಯಾವುದೇ ನೋಟೀಸ್ ಬಂದಿಲ್ಲ' ಎಂದಿದ್ದರು. ಹಾಗಾಗಿಯೇ ಅವರಿಗೆ ನೇರವಾಗಿ ನೊಟೀಸ್ ನೀಡಲೆಂದು ಪೊಲೀಸರು ಬೆಂಗಳೂರಿಗೆ ಬರುತ್ತಿದ್ದಾರೆ.

  ನೊಟೀಸ್ ಬಂದಿಲ್ಲ, ಕಿಶೋರ್ ಶೆಟ್ಟಿ ಹಳೆ ಪರಿಚಯ: ಅನುಶ್ರೀನೊಟೀಸ್ ಬಂದಿಲ್ಲ, ಕಿಶೋರ್ ಶೆಟ್ಟಿ ಹಳೆ ಪರಿಚಯ: ಅನುಶ್ರೀ

  ಈ ಮೊದಲು ಮಂಗಳೂರು ಸಿಸಿಬಿ ಪೊಲಿಸರು ವಾಟ್ಸ್‌ಆಪ್ ಮೂಲಕ ಅನುಶ್ರೀ ಅವರಿಗೆ ನೊಟೀಸ್ ನೀಡಿದ್ದರು ಎನ್ನಲಾಗಿದೆ. ಆದರೆ ನೇರವಾಗಿಯೇ ಅನುಶ್ರೀ ಅವರಿಗೆ ನೊಟೀಸ್ ನೀಡಲು ತಂಡವೊಂದು ಮಂಗೂರಿನಿಂದ ಬೆಂಗಳೂರಿನ ಕಡೆಗೆ ಹೊರಟಿದೆ. ಈ ಬಗ್ಗೆ ಮಂಗಳೂರು ಡಿಸಿಪಿ ವಿನಯ್ ಗಾಂವಕರ್‌ ಮಾಧ್ಯಮಗಳಿಗೆ ತಿಳಿಸಿದ್ದಾರೆ.

  ಕಿಶೋರ್ ಶೆಟ್ಟಿ ಹೇಳಿಕೆ ಮೇರೆಗೆ ಅನುಶ್ರೀಗೆ ನೊಟೀಸ್?

  ಕಿಶೋರ್ ಶೆಟ್ಟಿ ಹೇಳಿಕೆ ಮೇರೆಗೆ ಅನುಶ್ರೀಗೆ ನೊಟೀಸ್?

  ಮಂಗಳೂರು ಪೊಲೀಸರು ಸೆಪ್ಟೆಂಬರ್ 18 ರಂದು ನೃತ್ಯಗಾರ ಹಾಗೂ ನಟ ಕಿಶೋರ್ ಶೆಟ್ಟಿ ಅವರನ್ನು ಡ್ರಗ್ಸ್ ಜೊತೆಗೆ ಬಂಧಿಸಿದ್ದರು. ಅವರ ಹೇಳಿಕೆ ಆಧಾರದ ಮೇಲೆಯೇ ಅನುಶ್ರೀ ಅವರಿಗೆ ನೊಟೀಸ್ ನೀಡಲಾಗಿದೆ.

  ಕಿಶೋರ್ ಶೆಟ್ಟಿ-ಅನುಶ್ರೀ ಹಳೆಯ ಗೆಳೆಯರು

  ಕಿಶೋರ್ ಶೆಟ್ಟಿ-ಅನುಶ್ರೀ ಹಳೆಯ ಗೆಳೆಯರು

  ಬಂಧನಕ್ಕೆ ಒಳಗಾಗಿರುವ ಕಿಶೋರ್ ಶೆಟ್ಟಿ ಹಾಗೂ ಅನುಶ್ರೀ ಅವರು ಹಳೆಯ ಗೆಳೆಯರು, ಅನುಶ್ರೀ ಅವರು ನೃತ್ಯ ಕಾರ್ಯಕ್ರಮಗಳನ್ನು ನೀಡುವ ಸಮಯದಲ್ಲಿ ನೃತ್ಯ ನಿರ್ದೇಶನ ಮಾಡುತ್ತಿದ್ದರು ಕಿಶೋರ್.

  ಡ್ರಗ್ಸ್‌ ಜೊತೆ ಪೊಲೀಸರಿಗೆ ಸಿಕ್ಕಿಬಿದ್ದ ಮಂಗಳೂರಿನ ನಟ: ನಿರೂಪಕಿ ಜೊತೆ ನಂಟು?ಡ್ರಗ್ಸ್‌ ಜೊತೆ ಪೊಲೀಸರಿಗೆ ಸಿಕ್ಕಿಬಿದ್ದ ಮಂಗಳೂರಿನ ನಟ: ನಿರೂಪಕಿ ಜೊತೆ ನಂಟು?

  ನೊಟೀಸ್ ಬಂದರೆ ವಿಚಾರಣೆಗೆ ಹೋಗ್ತೀನಿ: ಅನುಶ್ರೀ

  ನೊಟೀಸ್ ಬಂದರೆ ವಿಚಾರಣೆಗೆ ಹೋಗ್ತೀನಿ: ಅನುಶ್ರೀ

  ಈ ಮೊದಲು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದ ಅನುಶ್ರೀ, 'ನನಗೆ ನೊಟೀಸ್ ಬಂದಿಲ್ಲ, ನೊಟೀಸ್ ಬಂದರೆ ವಿಚಾರಣೆಗೆ ಹೋಗುತ್ತೇನೆ' ಎಂದಿದ್ದರು. ಕಿಶೋರ್ ಹತ್ತು ವರ್ಷಗಳಿಂದಲೂ ಪರಿಚಿತರು ಆದರೆ ಕಳೆದ ಒಂದು ವರ್ಷದಿಂದ ನನ್ನೊಂದಿಗೆ ಸಂಪರ್ಕವಿಲ್ಲ ಎಂದಿದ್ದಾರೆ ಅನುಶ್ರೀ.

  ಅಪ್ಪ, ಅಮ್ಮ ಉಪವಾಸ ಇದ್ದು ನಮ್ಮನ್ನ ಸಾಕಿದ್ದಾರೆ | Geetha Bharathi Bhat | Filmibeat Kannada
  ಈಗಾಗಲೇ ಹಲವರ ತನಿಖೆ ಆಗಿದೆ

  ಈಗಾಗಲೇ ಹಲವರ ತನಿಖೆ ಆಗಿದೆ

  ಡ್ರಗ್ಸ್ ಪ್ರಕರಣದಲ್ಲಿ ಈಗಾಗಲೇ ನಟಿ ರಾಗಿಣಿ, ಸಂಜನಾ ನ್ಯಾಯಾಂಗ ಬಂಧನದಲ್ಲಿದ್ದಾರೆ. ದಿಗಂತ್, ಐಂದ್ರಿತಾ ರೇ, ಯೋಗಿ, ಸಂತೋಶ್, ಅಕುಲ್ ಬಾಲಾಜಿ ಇನ್ನೂ ಕೆಲವು ಸೆಲೆಬ್ರಿಟಿಗಳ ವಿಚಾರಣೆ ಮಾಡಲಾಗಿದೆ. ಇವರನ್ನೆಲ್ಲಾ ಬೆಂಗಳೂರು ಸಿಸಿಬಿ ವಿಭಾಗ ವಿಚಾರಣೆ ಮಾಡಿದ್ದರೆ, ಅನುಶ್ರೀ ಅವರನ್ನು ಮಂಗಳೂರು ಸಿಸಿಬಿ ವಿಭಾಗ ತನಿಖೆಗೆ ಒಳಪಡಿಸಲಿದೆ.

  English summary
  Mangaluru CCB police coming to Bengaluru to serve notice to Anushree related to Drugs case.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X