For Quick Alerts
  ALLOW NOTIFICATIONS  
  For Daily Alerts

  ಚುನಾವಣಾ ಪ್ರಚಾರಕ್ಕೆ ಬಂದ ಮಂಗ್ಲಿ: ಕನ್ನಡ ಕಲಿಯುತ್ತೇನೆಂದು ಭರವಸೆ

  |

  'ರಾಬರ್ಟ್' ಸಿನಿಮಾದ ತೆಲುಗು ವರ್ಷನ್‌ನಲ್ಲಿ 'ಕಣ್ಣೇ ಅಧಿರಿಂದಿ' ಹಾಡು ಹಾಡಿ ಕರ್ನಾಟಕದಲ್ಲಿ ಸಖತ್ ಜನಪ್ರಿಯರಾಗಿರುವ ಗಾಯಕಿ ಮಂಗ್ಲಿ ಇಂದು ರಾಯಚೂರಿನ ಮಸ್ಕಿ ಉಪ-ಚುನಾವಣೆಗೆ ಬಿಜೆಪಿ ಅಭ್ಯರ್ಥಿ ಪ್ರತಾಪ್ ಗೌಡ ಪಾಟೀಲ್ ಪರವಾಗಿ ಪ್ರಚಾರಕ್ಕೆ ಆಗಮಿಸಿದ್ದರು.

  ರಾಯಚೂರು ಜನರ ಮನಗೆದ್ದ ರಾಬರ್ಟ್ ಗಾಯಕಿ ಮಂಗ್ಲಿ | Filmibeat Kannada

  ಭಂಜಾರ ಸಮುದಾಯದ ಮತಗಳನ್ನು ಸೆಳೆಯಲು ಅದೇ ಸಮುದಾಯದವರಾದ ಮಂಗ್ಲಿ ಅವರನ್ನು ಚುನಾವಣಾ ಪ್ರಚಾರಕ್ಕೆ ಕರೆಸಿದ್ದರು ಪ್ರತಾಪ್ ಗೌಡ ಪಾಟೀಲ್. ಮಂಗ್ಲಿ ಅವರು ಅಡವಿಭಾವಿ ತಾಂಡಾದಲ್ಲಿ ಭರ್ಜರಿ ಪ್ರಚಾರ ನಡೆಸಿದರು.

  ಮಂಗ್ಲಿ ಅವರು ಗ್ರಾಮ ಪ್ರವೇಶಿಸುತ್ತಿದ್ದಂತೆ ಅವರ ಕಾರಿನ ಮೇಲೆ ಹೂಗಳನ್ನು ಚೆಲ್ಲಿ, ಪಟಾಕಿ ಹೊಡೆದು
  ಸ್ವಾಗತಿಸಲಾಯಿತು. ಮಂಗ್ಲಿ ಅವರನ್ನು ನೋಡಲು ದೊಡ್ಡ ಸಂಖ್ಯೆಯಲ್ಲಿ ಜನ ಸೇರಿದ್ದರು.

  ಪ್ರಚಾರ ರ್ಯಾಲಿಯಲ್ಲಿ ಭಂಜಾರ ಸಮುದಾಯದ ಮಾತೃಭಾಷೆಯಲ್ಲಿಯೇ ಮಾತನಾಡಿದ ಗಾಯಕಿ ಮಂಗ್ಲಿ ಪ್ರತಾಪ್ ಗೌಡ ಪಾಟೀಲ್‌ಗೆ ಮತ ಹಾಕುವಂತೆ ಮನವಿ ಮಾಡಿದರು. ಕನಿಷ್ಟ 25,000 ಮತಗಳ ಅಂತರದಿಂದ ಜಯಶೀಲರನ್ನಾಗಿಸುವಂತೆ ಕೇಳಿಕೊಂಡರು. ಕನ್ನಡದಲ್ಲಿಯೂ ಒಂದೆರಡು ಮಾತುಗಳನ್ನಾಡಿದ ಮಂಗ್ಲಿ, 'ಕನ್ನಡ ಕಲಿಯುವುದು ಬಹು ಸುಲಭ ಆದಷ್ಟು ಬೇಗ ಕಲಿಯುತ್ತೇನೆ' ಎಂದರು. ಎಲ್ಲರಿಗೂ ಯುಗಾದಿ ಹಬ್ಬದ ಶುಭಾಶಯಗಳನ್ನು ಸಹ ಸಲ್ಲಿಸಿದರು.

  'ಕನ್ನಡ ಬಹಳ ಸುಲಭವಾದ ಭಾಷೆ ಆದಷ್ಟು ಬೇಗ ಕನ್ನಡ ಕಲಿಯುತ್ತೇನೆ ಎಂದ ಮಂಗ್ಲಿ, 'ರಾಬರ್ಟ್' ಸಿನಿಮಾದ 'ಕಣ್ಣು ಹೊಡಿಯಾಕ, ಮೊನ್ನೆ ಕಲತಾನಿ' ಕನ್ನಡ ಹಾಡು ಹಾಡಿ ರಂಜಿಸಿದರು.

  English summary
  Singer Mangli did election campaign for BJP candidate Prathap Gowda Patil in Maski by election.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X