Mango Pachcha; ಸಂಚಿತ್ 'ಮ್ಯಾಂಗೋ ಪಚ್ಚ' ರನ್ ಟೈಮ್ ಕೇಳಿದವರು ಶಾಕ್; ಇಂಟರ್‌ವಲ್ ಇರಲ್ವಾ?

ಕೆಆರ್‌ಜಿ ಸ್ಟುಡಿಯೋಸ್ ಹಾಗೂ ಸುಪ್ರಿಯಾನ್ವಿ ಪಿಕ್ಚರ್ ಸ್ಟುಡಿಯೋ ಸಂಸ್ಥೆಗಳು ಜಂಟಿಯಾಗಿ ನಿರ್ಮಾಣ ಮಾಡಿರುವ 'ಮ್ಯಾಂಗೋ ಪಚ್ಚ' ಚಿತ್ರ ಈ ವಾರ ತೆರೆಗೆ ಬರ್ತಿದೆ. ಸುದೀಪ್ ಅಕ್ಕನ ಮಗ ಸಂಚಿತ್ ನಟನೆಯ ಚೊಚ್ಚಲ ಸಿನಿಮಾ ಇದು. ವಿವೇಕ ಎಂಬುವವರು ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಸೆನ್ಸಾರ್ ಮುಗಿಸಿ ಸಿನಿಮಾ ಇದೀಗ ಬಿಡುಗಡೆಗೆ ಸಜ್ಜಾಗಿದೆ.

20 ವರ್ಷಗಳ ಹಿಂದೆ ಮೈಸೂರು ಭಾಗದಲ್ಲಿ ನಡೆದ ಕಥೆಯನ್ನು ಚಿತ್ರದಲ್ಲಿ ಕಟ್ಟಿಕೊಡಲಾಗಿದೆ. ಈಗಾಗಲೇ ಚಿತ್ರದ ಟೀಸರ್, ಸಾಂಗ್ಸ್, ಟ್ರೈಲರ್ ರಿಲೀಸ್ ಆಗಿ ಗಮನ ಸೆಳೆದಿದೆ. ಹೊಸ ಪ್ರತಿಭೆ ಸಂಚಿತ್ ಜೊತೆ ಅನುಭವಿ ಕಲಾವಿದರು ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚರಣ್ ರಾಜ್ ಸಂಗೀತದಲ್ಲಿ 'ಮ್ಯಾಂಗೋ ಪಚ್ಚ' ಚಿತ್ರದ ಹಾಡುಗಳು ಗಮನ ಸೆಳೆದಿದೆ. ಚಿತ್ರಕ್ಕೆ ಸೆನ್ಸಾರ್ ಮಂಡಳಿಯಿಂದ 'ಎ' ಸರ್ಟಿಫಿಕೇಟ್ ಸಿಕ್ಕಿದೆ. ವಿಶೇಷ ಅಂದ್ರೆ ಚಿತ್ರದ ರನ್‌ಟೈಮ್ 95 ನಿಮಿಷ 37 ಸೆಕೆಂಡ್ ಮಾತ್ರ.

Mango Pachcha Gets A Certificate Impresses With a Crisp 95-Minute Runtime

ಇತ್ತೀಚೆಗೆ 3 ಗಂಟೆಗಿಂತ ಹೆಚ್ಚು ಕಾಲಾವಧಿಯ ಸಿನಿಮಾಗಳು ಪ್ರೇಕ್ಷಕರ ಮುಂದೆ ಬರ್ತಿದೆ. ಹಾಗಿರುವಾಗಿ ಕೇವಲ 95 ನಿಮಿಷ ಅರ್ಥಾತ್ ಒಂದು ಗಂಟೆ 35 ನಿಮಿಷದ ಸಿನಿಮಾ ಇದು. 'ಮ್ಯಾಂಗೋ ಪಚ್ಚ' ಚಿತ್ರದ ಕಾಲಾವಧಿ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆ ನಡೀತಿದೆ. ಒಂದೂವರೆ ಗಂಟೆಗಿಂತ ಹೆಚ್ಚು ಕಾಲ ಕಥೆ ಹೇಳಲು ನಿರ್ದೇಶಕರಿಗೆ ಸಾಧ್ಯವಾಗಲಿಲ್ಲವೇ? ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ. ರನ್‌ಟೈಮ್ ಮುಖ್ಯ ಅಲ್ಲ, ಸಿನಿಮಾ ಪ್ರೇಕ್ಷಕರನ್ನು ರಂಜಿಸುವುದು ಮುಖ್ಯ. ಸುಖಾಸುಮ್ಮನೆ ಎಳೆದಾಡಿ ಪ್ರೇಕ್ಷಕರ ತಾಳ್ಮೆ ಪರೀಕ್ಷೆ ಮಾಡುವುದಕ್ಕಿಂತ ಇದು ಒಳ್ಳೆ ನಿರ್ಧಾರ ಎಂದು ಕೆಲವರು ಹೇಳುತ್ತಿದ್ದಾರೆ.

ಹಾಲಿವುಡ್ ಸಿನಿಮಾಗಳ ರೀತಿ ಬಹಳ ಬೇಗ ಕಥೆ ಹೇಳಿವುದು ಮುಗಿಸುವುದು ಉತ್ತಮ ಎಂದು ಕಾಮೆಂಟ್ ಮಾಡುತ್ತಿದ್ದಾರೆ. 'ಮ್ಯಾಂಗೋ ಪಚ್ಚ' ಚಿತ್ರದಲ್ಲಿ 3 ಹಾಡುಗಳಿವೆ. ಅದನ್ನು ಹೊರತುಪಡಿಸಿದ್ರೆ, ಟಾಕಿ ಭಾಗ ಒಂದೂವರೆ ಗಂಟೆಗಿಂತ ಕಮ್ಮಿ ಆಯ್ತಲ್ಲ ಎನ್ನುವವರು ಇದ್ದಾರೆ. 'ಧುರಂಧರ್'-2 ಚಿತ್ರದ ಫಸ್ಟ್‌ ಹಾಫ್ ಕೂಡ 1 ಗಂಟೆ 47 ನಿಮಿಷ ಇತ್ತಲ್ಲ ಗುರುವೇ ಎಂದು ಕೆಲವರು ಉದ್ಘಾರ ತೆಗೆಯುತ್ತಿದ್ದಾರೆ. ಸಾಕಷ್ಟು ಜನ ಚಿತ್ರತಂಡದ ನಿರ್ಣಯವನ್ನು ಸ್ವಾಗತಿಸಿದ್ದಾರೆ.

ಇಂಟರ್‌ವಲ್ ಇಲ್ಲದೇ ಒಮ್ಮೆಲೆ ಸಿನಿಮಾ ಕಥೆ ಹೇಳಿಮುಗಿಸಿದ್ದರೆ ಇನ್ನು ಚೆನ್ನಾಗಿತ್ತು ಎಂದು ಕಾಮೆಂಟ್ ಮಾಡುವವರು ಇದ್ದಾರೆ. ಜೂನ್ 5ರಂದು ಬೆಳಗ್ಗೆ 8.15ಕ್ಕೆ ಅಭಿಮಾನಿಗಳ ಜೊತೆ ಕಿಚ್ಚ ಸುದೀಪ್ 'ಮ್ಯಾಂಗೋ ಪಚ್ಚ' ಸಿನಿಮಾ ವೀಕ್ಷಿಸಲಿದ್ದಾರೆ. ಕೆಜಿ ರಸ್ತೆಯ ಸಂತೋಷ್ ಚಿತ್ರಮಂದಿರಕ್ಕೆ ಕಿಚ್ಚ ಭೇಟಿ ನೀಡುತ್ತಿದ್ದಾರೆ. 'ಮ್ಯಾಂಗೋ ಪಚ್ಚ' ಚಿತ್ರದಲ್ಲಿ ಕಾಜಲ್ ಕುಂದರ್ ನಾಯಕಿಯಾಗಿ ನಟಿಸಿದ್ದಾರೆ. ಇನ್ನುಳಿದಂತೆ ಪ್ರಶಾಂತ್ ಹಿರೇಮಠ್, ಜೈ ಗೋಪಿನಾಥ್, ಹರಿಣಿ ಶ್ರೀಕಾಂತ್, ಉಗ್ರಂ ಮಂಜು, ಮಯೂರ್ ಪಟೇಲ್ ತಾರಾಗಣದಲ್ಲಿದ್ದಾರೆ.

ಮಧ್ಯಮವರ್ಗದ ಯುವಕ ಪ್ರಶಾಂತ್ ಜೀವನದ ಏಳುಬೀಳುನ ಕಥೆ ಚಿತ್ರದಲ್ಲಿದೆ. ಪ್ರಶಾಂತ್ ಅಲಿಯಾಸ್ ಪಚ್ಚ ಯಾವುದೋ ಪ್ರಕರಣದಲ್ಲಿ ಜೈಲು ಸೇರುವಂತಾಗುತ್ತದೆ. ಅಲ್ಲಿಂದ ಮುಂದೆ ಏನೆಲ್ಲಾ ಆಗುತ್ತದೆ ಎನ್ನುವುದನ್ನು ತೆರೆಮೇಲೆ ನೋಡಬೇಕು. 'ಹುಚ್ಚ' ಚಿತ್ರದ ಮೂಲಕ ಸುದೀಪ್ ಸ್ಟಾರ್ ಪಟ್ಟಕ್ಕೇರಿದ್ದರು. ಆ ಚಿತ್ರದ ಇಂಟ್ರಡಕ್ಷನ್ ಸೀನ್ ನೆನಪಿಸುವಂತೆ ಈ ಚಿತ್ರದ ಸಂಚಿತ್ ಪಾತ್ರ ಪರಿಚಯಿಸೋ ಪ್ರಯತ್ನ ಮಾಡಲಾಗಿದೆ. ಅದನ್ನು ಚಿತ್ರಮಂದಿರದಲ್ಲೇ ನೋಡಬೇಕು.

ಒಂದಷ್ಟು ನೈಜ ಘಟನೆಗಳಿಂದ ಪ್ರೇರಣೆಗೊಂಡು 'ಮ್ಯಾಂಗೋ ಪಚ್ಚ' ಸಿನಿಮಾ ಕಟ್ಟಿಕೊಡಲಾಗಿದೆ. ಚಿತ್ರದಲ್ಲಿ ಡಾಲಿ ಧನಂಜಯ್ ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ ಎನ್ನಲಾಗ್ತಿದೆ. ಶೀಘ್ರದಲ್ಲೇ ಈ ಬಗ್ಗೆ ಗೊತ್ತಾಗಲಿದೆ. ಅಪ್ಪಿತಪ್ಪಿ ಕಿಚ್ಚ ಕೂಡ ದರ್ಶನ್ ಕೊಡ್ತಾರಾ ಕಾದು ನೋಡಬೇಕಿದೆ.

Read more about: sudeep
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X