twitter
    For Quick Alerts
    ALLOW NOTIFICATIONS  
    For Daily Alerts

    ಜೀವಮಾನ ಸಾಧನೆ ಪ್ರಶಸ್ತಿ ಹಣವನ್ನು ವಾಪಸ್ ನೀಡಿದ ಮಣಿರತ್ನಂ

    By Naveen
    |

    '10ನೇ ಬೆಂಗಳೂರು ಅಂತರಾಷ್ಟ್ರೀಯ ಸಿನಿಮೋತ್ಸವ'ದ ಸಮಾರೋಪ ಸಮಾರಂಭ ನಿನ್ನೆ ನಡೆದಿದೆ. ಈ ಬಾರಿ ನಿರ್ದೇಶಕ ಮಣಿರತ್ನಂ ಅವರಿಗೆ ಜೀವಮಾನ ಸಾಧನೆ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

    ಜೀವಮಾನ ಸಾಧನೆ ಪ್ರಶಸ್ತಿ ಮತ್ತು 10 ಲಕ್ಷ ರೂಪಾಯಿ ಹಣವನ್ನು ಮಣಿರತ್ನಂ ಅವರಿಗೆ ನೀಡಲಾಗಿತ್ತು. ಕರ್ನಾಟಕ ಚಲನಚಿತ್ರ ಅಕಾಡಮಿ ಅಧ್ಯಕ್ಷ ರಾಜೇಂದ್ರ ಸಿಂಗ್ ಬಾಬು ಸೇರಿದಂತೆ 13 ಜನರ ಆಯ್ಕೆ ಸಮಿತಿ ನಿರ್ದೇಶಕ ಮಣಿರತ್ನಂ ಅವರ ಹೆಸರನ್ನು ಜೀವಮಾನ ಸಾಧನೆ ಪ್ರಶಸ್ತಿಗೆ ಆಯ್ಕೆ ಮಾಡಿತ್ತು. ವಿಧಾನಸೌಧದಲ್ಲಿ ನಿನ್ನೆ ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಮಣಿರತ್ನಂ ಅವರಿಗೆ ಪ್ರಶಸ್ತಿ ನೀಡಿದರು.

    ಜೀವಮಾನ ಸಾಧನೆ ಪ್ರಶಸ್ತಿ ಸ್ವೀಕರಿಸಿದ ಮಣಿರತ್ನಂ ಪ್ರಶಸ್ತಿ ಜೊತೆಗೆ ಬಂದ ಗೌರವ ಧನವನ್ನು ವಾಪಸ್ ನೀಡಿದ್ದಾರೆ. ತಮಗೆ ಬಂದ ಹಣವನ್ನು ವಾಪಸ್ ಸರ್ಕಾರಕ್ಕೆ ನೀಡುವ ಮೂಲಕ ಯುವ ನಿರ್ದೇಶಕರಿಗೆ ಪ್ರೋತ್ಸಾಹ ನೀಡಿದ್ದಾರೆ. ಅಂದಹಾಗೆ, ಮಣಿರತ್ನಂ ಭಾರತ ಚಿತ್ರರಂಗದ ಪ್ರತಿಭಾವಂತ ನಿರ್ದೇಶಕ. ಕನ್ನಡದ 'ಪಲ್ಲವಿ ಅನು ಪಲ್ಲವಿ' ಸಿನಿಮಾದ ಮೂಲಕ ಸಿನಿಮಾ ಪಯಣ ಶುರು ಮಾಡಿದ ಮಣಿರತ್ನಂ ನಂತರ ರೋಜಾ, ಬಾಂಬೆ, ಅಂಜಲಿ, ನಾಯಗನ್ ಸೇರಿದಂತೆ ಸಾಕಷ್ಟು ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ್ದಾರೆ.

    Mani Ratnam honoured with lifetime award at BIFFES

    '10ನೇ ಬೆಂಗಳೂರು ಅಂತರಾಷ್ಟ್ರೀಯ ಸಿನಿಮೋತ್ಸವ'ದಲ್ಲಿ ಪ್ರಶಸ್ತಿ ಪಡೆದ ಕನ್ನಡ ಸಿನಿಮಾಗಳ ಪಟ್ಟಿ ಇಲ್ಲಿದೆ.

    ಕನ್ನಡ ಮನರಂಜನೆ ವಿಭಾಗ :
    ಅತ್ಯುತ್ತಮ ಸಿನಿಮಾ : ರಾಜಕುಮಾರ
    ಎರಡನೇ ಅತ್ಯುತ್ತಮ ಸಿನಿಮಾ : ಭರ್ಜರಿ
    ಮೂರನೇ ಅತ್ಯುತ್ತಮ ಸಿನಿಮಾ : ಒಂದು ಮೊಟ್ಟೆಯ ಕಥೆ

    Mani Ratnam honoured with lifetime award at BIFFES

    ಕನ್ನಡ ವಿಭಾಗ (ಕರ್ನಾಟಕ ಚಲನಚಿತ್ರ ಅಕಾಡಮಿ ಪ್ರಶಸ್ತಿ)
    ಅತ್ಯುತ್ತಮ ಸಿನಿಮಾ : ರಿಸರ್ವೇಷನ್
    ಎರಡನೇ ಅತ್ಯುತ್ತಮ ಸಿನಿಮಾ : ಮೂಡಲಸೀಮೆಯಲ್ಲಿ
    ಮೂರನೇ ಅತ್ಯುತ್ತಮ ಸಿನಿಮಾ : ಅಲ್ಲಮ್ಮ

     '10ನೇ ಬೆಂಗಳೂರು ಅಂತರಾಷ್ಟ್ರೀಯ ಸಿನಿಮೋತ್ಸವ'ದ ಪ್ರಶಸ್ತಿ ಪಟ್ಟಿ '10ನೇ ಬೆಂಗಳೂರು ಅಂತರಾಷ್ಟ್ರೀಯ ಸಿನಿಮೋತ್ಸವ'ದ ಪ್ರಶಸ್ತಿ ಪಟ್ಟಿ

    English summary
    Director Mani Ratnam honoured with lifetime award at 10th Bengaluru International Film Festival and he gifts 10 lakh to groom young filmmakers.
    Friday, March 2, 2018, 12:19
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X