Don't Miss!
- Sports DC vs GT IPL 2024: ಅಕ್ಷರ್, ರಿಷಭ್ ಶೈನಿಂಗ್; ಗುಜರಾತ್ ವಿರುದ್ಧ ಡೆಲ್ಲಿ ಜಯಭೇರಿ
- News ದ್ವೇಷ ಉತ್ತೇಜಿಸುವ ಪೋಸ್ಟ್: ಕರ್ನಾಟಕ ಬಿಜೆಪಿ ವಿರುದ್ಧ ದೂರು ದಾಖಲಿಸಿದ ಚುನಾವಣಾ ಆಯೋಗ
- Technology ಒಪ್ಪೋ ಫೈಂಡ್ X7 ಅಲ್ಟ್ರಾ ಕ್ಯಾಮೆರಾ: ಮೊಬೈಲ್ ಫೋಟೋಗ್ರಫಿಗೆ ಅತ್ಯುತ್ತಮ ಫೋನ್!
- Lifestyle 613 ದಿನ ಕೊರೊನಾ ವಿರುದ್ಧ ಹೋರಾಡಿ ವೃತಪಟ್ಟ ವ್ಯಕ್ತಿ..!
- Automobiles ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ನಾಯಗನ್' ಕಮಲ್ ಜೊತೆ ಮಣಿರತ್ನಂ ಹೊಸ ಚಿತ್ರ!
ಸಿನಿರಸಿಕರ ಹುಬ್ಬೇರುವಂಥ ಸಮಾಚಾರ ಬಂದಿದೆ. ಖ್ಯಾತ ನಿರ್ದೇಶಕ ಮಣಿರತ್ನಂ ಹಾಗೂ ಯೂನಿವರ್ಸಲ್ ಸ್ಟಾರ್ ಕಮಲ್ ಹಾಸನ್ ಅವರು ಮತ್ತೊಮ್ಮೆ ಒಂದಾಗಿದ್ದಾರೆ. ಸುಮಾರು 28 ವರ್ಷಗಳ ಹಿಂದೆ ಭೂಗತ ಜಗತ್ತಿನ ಕಥಾನಕವನ್ನು 'ನಾಯಗನ್' ಚಿತ್ರದ ಮೂಲಕ ಪರಿಚಯಿಸಿದ್ದ ಮಣಿ ಹಾಗೂ ಕಮಲ್ ಜೋಡಿ ಈಗ ಮತ್ತೊಮ್ಮೆ ಒಟ್ಟಿಗೆ ಕಾರ್ಯ ನಿರ್ವಹಿಸುವ ಸಂತಸದ ಸುದ್ದಿ ಬಂದಿದೆ.
ಸರಿ
ಸುಮಾರು
28ವರ್ಷಗಳ
ಹಿಂದೆ
ನಾಯಗನ್
ಚಿತ್ರ
ನೀಡಿದ
ಈ
ಜೋಡಿಯನ್ನು
ಇಡೀ
ವಿಶ್ವವೇ
ತಿರುಗಿ
ನೋಡಿತ್ತು.
ವಿಶ್ವದ
ಟಾಪ್
ಚಿತ್ರಗಳ
ಸಾಲಿಗೆ
'ನಾಯಗನ್'
ಸೇರಿಕೊಂಡಿತ್ತು.
ಆದರೆ,
ಮತ್ತೆ
ಈ
ಜೋಡಿ
ಯಾಕೋ
ಒಟ್ಟಿಗೆ
ಕಾಣಿಸಿಕೊಳ್ಳಲಿಲ್ಲ.
ಅದರೆ,
ಈಗ
ಇಬ್ಬರು
ಹೊಸ
ಚಿತ್ರದ
ಬಗ್ಗೆ
ಮಾತುಕತೆ
ನಡೆಸಿರುವ
ಸುದ್ದಿ
ಬಂದಿದೆ.
ಇತ್ತೀಚೆಗೆ ದೈನಿಕವೊಂದಕ್ಕೆ ಸಂದರ್ಶನ ನೀಡಿದ್ದ ಕಮಲ್ ಹಾಸನ್ ಅವರು 28 ವರ್ಷಗಳ ನಂತರ ಮಣಿರತ್ನಂ ಜೊತೆ ಕಾರ್ಯ ನಿರ್ವಹಿಸುವ ಸಾಧ್ಯತೆಯ ಬಗ್ಗೆ ಸುಳಿವು ನೀಡಿದ್ದರು. ಉತ್ತಮ ವಿಲನ್ ಚಿತ್ರಕ್ಕೆ ವಿಮರ್ಶಕರ ಮೆಚ್ಚುಗೆ ಸಿಕ್ಕರೂ ಪ್ರೇಕ್ಷಕ ಎಲ್ಲೆಡೆ ಕೈ ಹಿಡಿದು ನಡೆಸಲಿಲ್ಲ. ಮಣಿರತ್ನಂ ಅವರು ಓಕೆ ಕಾದಲ್ ಕಣ್ಮಣಿ ಮೂಲಕ ಮತ್ತೊಮ್ಮೆ ರೋಮ್ಯಾಂಟಿಕ್ ಟ್ರ್ಯಾಕ್ ಗೆ ಮರಳಿದ್ದಾರೆ.
ಕಮಲ್ ಅವರು ದೃಶ್ಯಂ ರಿಮೇಕ್ ಚಿತ್ರ ಪಾಪನಾಶನಂ ಜುಲೈ 17ಕ್ಕೆ ತೆರೆಗೆ ಬರಲಿದೆ ಹಾಗೂ ತೂಂಗ ವನಂ ಚಿತ್ರವಲ್ಲದೆ, ವಿಶ್ವರೂಪಂ2 ಚಿತ್ರದ ಆರ್ಥಿಕ ಸಮಸ್ಯೆ ಬಗ್ಗೆ ತಲೆಕೆಡಿಸಿಕೊಂಡಿದ್ದಾರೆ. ಈ ನಡುವೆ ಮಣಿಗೆ ಯಾವಾಗ ಕಾಲ್ ಶೀಟ್ ನೀಡುತ್ತಾರೋ ಗೊತ್ತಿಲ್ಲ. ನಾಯಗನ್ ಚಿತ್ರದಂತೆ ಈ ಹೊಸ ಚಿತ್ರಕ್ಕೂ ಇಳಯರಾಜ ಅವರೇ ಸಂಗೀತ ನೀಡಿದರೆ ಚಿತ್ರ ಇನ್ನಷ್ಟು ಕಲೆ ಕಟ್ಟಲಿದೆ ಎಂದು ಅಭಿಮಾನಿಗಳು ಶುಭ ಹಾರೈಸಿದ್ದಾರೆ.