ಮಂಜು ಸ್ವರಾಜ್ ನಿರ್ದೇಶನದ ಹೊಸ ಸಿನಿಮಾಗೆ ಟೈಟಲ್ ನಿಗದಿ
ನಿರ್ದೇಶಕ ಮಂಜು ಸ್ವರಾಜ್ ಹೊಸ ಸಿನಿಮಾ ಮಾಡುತ್ತಿರುವ ಸುದ್ದಿ ಈ ಹಿಂದೆಯೇ ಕೇಳಿ ಬಂದಿತ್ತು. ಈಗ ಈ ಸಿನಿಮಾಗೆ ಟೈಟಲ್ ನಿಗದಿಯಾಗಿದೆ. ಚಿತ್ರಕ್ಕೆ ವಿಶೇಷ ಟೈಟಲ್ ಇಡುವ ಮೂಲಕ ಪ್ರೇಕ್ಷಕರ ಗಮನ ಸೆಳೆಯಲಾಗಿದೆ.
'ಮನೆ ಮಾರಾಟಕ್ಕಿದೆ' ಎನ್ನುವ ಟೈಟಲ್ ಅನ್ನು ಸಿನಿಮಾಗೆ ನಿಗದಿ ಮಾಡಲಾಗಿದೆ. ದೆವ್ವಗಳಿದೆ ಎಚ್ಚರಿಕೆ ಎನ್ನುವ ಸಬ್ ಟೈಟಲ್ ಚಿತ್ರಕ್ಕೆ ಇದೆ. ಸಿನಿಮಾದ ಹೆಸರು ಕೇಳುತ್ತಿದ್ದರೇನೆ ಇದು ಕಾಮಿಡಿ ಸಿನಿಮಾ ಆಗಿದೆ ಎನ್ನುವುದು ತಿಳಿಯುತ್ತದೆ.
ನಟ ಸಾಧುಕೋಕಿಲ, ಚಿಕ್ಕಣ್ಣ, ಕುರಿ ಪ್ರತಾಪ್ ಹಾಗೂ ರವಿಶಂಕರ್ ಸಿನಿಮಾದಲ್ಲಿ ನಟಿಸಿದ್ದಾರೆ. ನಾಲ್ಕು ಹಾಸ್ಯ ನಟರು ಸಿನಿಮಾದಲ್ಲಿ ನಟಿಸಿದ್ದು, ಚಿತ್ರದಲ್ಲಿ ಕಾಮಿಡಿ ಡಬಲ್ ಆಗಿರಲಿದೆ.

ಟೈಟಲ್ ಜೊತೆಗೆ ಸಿನಿಮಾದ ಫಸ್ಟ್ ಲುಕ್ ಪೋಸ್ಟರ್ ಅನ್ನು ಬಿಡುಗಡೆ ಮಾಡಲಾಗಿದೆ. ಎಸ್ ವಿ ಬಾಬು ಈ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಅಭಿಮಾನ್ ರಾಯ್ ಸಿನಿಮಾಗೆ ಸಂಗೀತ ನೀಡುತ್ತಿದ್ದಾರೆ
ಮಂಜು ಸ್ವರಾಜ್ ಈ ಹಿಂದೆ 'ಶಶಿರ', 'ಶ್ರಾವಣಿ ಸುಬ್ರಮಣ್ಯ', 'ಶ್ರೀ ಕಂಠ' ಹಾಗೂ 'ಪಟಾಕಿ' ಸಿನಿಮಾಗಳಿಗೆ ಆಕ್ಷನ್ ಕಟ್ ಹೇಳಿದ್ದರು.


Click it and Unblock the Notifications











