ಹೀರೋಗಳಾದ ಸಾಧು, ಚಿಕ್ಕಣ್ಣ, ರವಿಶಂಕರ್ ಗೌಡ, ಕುರಿ ಪ್ರತಾಪ್
Recommended Video

ಈ ನಾಲ್ಕು ಜನರಲ್ಲಿ ಯಾರು ಹೀರೋ...? | FIlmibeat Kannada
ಕಾಮಿಡಿ ಕಲಾವಿದರು ತಾವೇ ಹೀರೋಗಳಾಗುವುದು ಹೊಸತೆನಲ್ಲ. ಆದರೆ, ಈಗ ಕನ್ನಡದ ಹಾಸ್ಯ ನಟರಾದ ಸಾಧು ಕೋಕಿಲ, ಚಿಕ್ಕಣ್ಣ, ಕುರಿ ಪ್ರತಾಪ್ ಹಾಗೂ ನಟ ರವಿಶಂಕರ್ ಗೌಡ ಒಂದೇ ಸಿನಿಮಾದಲ್ಲಿ ಹೀರೋಗಳಾಗಿ ನಟಿಸುತ್ತಿದ್ದಾರೆ.
ನಿರ್ದೇಶಕ ಮಂಜು ಸ್ವರಾಜ್ ಈಗ ಹೊಸ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ಈ ಮೂರು ಹಾಸ್ಯ ಕಲಾವಿದರು ಹಾಗೂ ನಟ ರವಿಶಂಕರ್ ಗೌಡ ನಾಯಕರಾಗಿ ನಟಿಸುತ್ತಿದ್ದಾರೆ. ಇದೊಂದು ಹಾರರ್ ಕಾಮಿಡಿ ಸಿನಿಮಾವಾಗಿದ್ದು, ಜನರಿಗೆ ಹೆದರಿಸುವ ಜೊತೆಗೆ ನಗಿಸುತ್ತದೆ ಎನ್ನುತ್ತಾರೆ ಮಂಜು ಸ್ವರಾಜ್.

ಅಂದಹಾಗೆ, ಈ ಚಿತ್ರವನ್ನು ಎಸ್ ಪಿ ಬಾಬು ಅವರು ನಿರ್ಮಾಣ ಮಾಡುತ್ತಿದ್ದಾರೆ. ಈ ಹಿಂದೆ ಗಣೇಶ್ ನಟನೆಯ 'ಪಟಾಕಿ' ಸಿನಿಮಾವನ್ನು ಒಟ್ಟಿಗೆ ಮಾಡಿದ್ದ ಮಂಜು ಸ್ವರಾಜ್ ಹಾಗೂ ಎಸ್ ಪಿ ಬಾಬು ಈಗ ಮತ್ತೆ ಒಂದಾಗಿದ್ದಾರೆ.

ಸಿನಿಮಾದಲ್ಲಿ ನಾಯಕಿಯಾಗಿ ನಟಿ ಶೃತಿ ಹರಿಹರನ್ ಕಾಣಿಸಿಕೊಳ್ಳಲಿದ್ದಾರಂತೆ. ಇನ್ನು ಇಂದಿನಿಂದ ಸಿನಿಮಾದ ಶೂಟಿಂಗ್ ಶುರು ಆಗಿದ್ದು, ಚಿತ್ರಕ್ಕೆ ಟೈಟಲ್ ಇನ್ನೂ ಫಿಕ್ಸ್ ಆಗಿಲ್ಲ.
More from Filmibeat
English summary
Kannada director Manju Swaraj's new movie goes on floor from Today (July 16th)
manju swaraj sadhu kokila kuri prathap ravishankar gowda sandalwood ಮಂಜು ಸ್ವರಾಜ್ ಸಾಧು ಕೋಕಿಲ ಚಿಕ್ಕಣ್ಣ ಸ್ಯಾಂಡಲ್ ವುಡ್


Click it and Unblock the Notifications











