ಅಜಿತ್ ಕುಮಾರ್, ಧನುಷ್ ನಂತರ ರಜನಿಕಾಂತ್ ಜೊತೆ ನಟಿಸಲಿದ್ದಾರೆ ಮಂಜು ವಾರಿಯರ್

ಅಸುರನ್, ತುನಿವು ತಮಿಳು ಸಿನಿಮಾಗಳಲ್ಲಿ ನಟಿಸಿರುವ ಮಲಯಾಳಂ ನಟಿ ಮಂಜು ವಾರಿಯರ್ ಇತ್ತೀಚೆಗೆ ಹಲವು ತಮಿಳು ಚಿತ್ರಗಳಿಗೆ ಸಹಿ ಹಾಕುತ್ತಿದ್ದಾರೆ. ಮತ್ತೊಂದು ಸಿನಿಮಾಗೆ ತಯಾರಾಗುತ್ತಿರುವ ನಟಿ ಈ ಬಾರಿ ನಟ ರಜನಿಕಾಂತ್ ವಾರಿಗೆ ನಾಯಕಿಯಾಗಲಿದ್ದಾರೆ ಎಂಬ ಮಾಹಿತಿ ಬಂದಿದೆ.

ನಟಿ ಈಗಾಗಲೇ ಅಜಿತ್ ಕುಮಾರ್ ಅವರ ಜೊತೆಗೆ ತುನಿವು ಮತ್ತು ಧನುಷ್ ಅವರ ಸೂಪರ್ ಹಿಡ್ ಸಿನಿಮಾ ಅಸುರನ್‌ನಲ್ಲಿ ಭಾಗವಾಗಿದ್ದಾರೆ. ನಟಿ ಮಂಜು ವಾರಿಯರ್ ಶೀಘ್ರದಲ್ಲೇ ಆರ್ಯ ಮತ್ತು ಗೌತಮ್ ಕಾರ್ತಿಕ್ ಅವರ ಜೊತೆಗೆ ಚಿತ್ರೀಕರಣವನ್ನು ಪ್ರಾರಂಭಿಸುತ್ತಾರೆ ಎಂದು ವರದಿಯಾಗಿದೆ.

Manju Warrier to team up with Rajinikanth 170s film

ಮನು ಆನಂದ್ ನಿರ್ದೇಶನದ ಚಿತ್ರಕ್ಕೆ ಮಿಸ್ಟರ್ ಎಕ್ಸ್ ಎಂದು ಹೆಸರಿಡಲಾಗಿದೆ. ವೆಟ್ರಿಮಾರನ್ ಅವರ ವಿದುತಲೈ ಚಿತ್ರದ ಸೀಕ್ವೆಲ್‌ನಲ್ಲಿ ವಿಜಯ್ ಸೇತುಪತಿ ಜೊತೆಗೆ ಮಲಯಾಳಂ ಚಿತ್ರರಂಗದ ನೆಚ್ಚಿನ ತಾರೆ ಮಂಜು ವಾರಿಯರ್ ಕೂಡ ಕಾಣಿಸಿಕೊಳ್ಳಲಿದ್ದಾರೆ ಎಂಬ ವರದಿಗಳು ಕೂಡ ಹರಿದಾಡುತ್ತಿವೆ. ಈ ಚಿತ್ರದಲ್ಲಿ ಮಂಜು ವಾರಿಯರ್ ವಿಜಯ್ ಸೇತುಪತಿ ಅವರ ಪತ್ನಿ ಪಾತ್ರವನ್ನು ನಿರ್ವಹಿಸಲಿದ್ದಾರೆ ಎಂದು ವರದಿಯಾಗಿದೆ.

ರಜನಿಕಾಂತ್ 170ನೇ ಚಿತ್ರದಲ್ಲಿ ಮಂಜು ವಾರಿಯರ್

ಇತ್ತೀಚಿನ ವರದಿಗಳ ಪ್ರಕಾರ ನಟಿ ಮಂಜು ವಾರಿಯರ್ ಮತ್ತೊಂದು ತಮಿಳು ಚಿತ್ರಕ್ಕೆ ಸಹಿ ಹಾಕಲು ಸಿದ್ಧರಾಗಿದ್ದಾರೆ. ಅದು ಕೂಡ ತಲೈವ ರಜನಿಕಾಂತ್ ಅವರ 170ನೇ ಚಿತ್ರ ಎನ್ನಲಾಗಿದೆ. ವದಂತಿಗಳು ನಿಜವಾದರೆ ಮಂಜು ವಾರಿಯರ್ ಮತ್ತು ರಜನಿಕಾಂತ್ ಮೊದಲ ಬಾರಿಗೆ ಪರದೆಯನ್ನು ಹಂಚಿಕೊಳ್ಳಲಿದ್ದಾರೆ.

Manju Warrier to team up with Rajinikanth 170s film

ರಜನಿಕಾಂತ್ ಅವರ 170 ಸಿನಿಮಾವನ್ನು 'ಜೈ ಭೀಮ್" ಚಿತ್ರದ ನಿರ್ದೇಶಕ ಟಿಜೆ ಜ್ಞಾನವೇಲ್ ನಿರ್ದೇಶಿಸಲಿದ್ದಾರೆ. ಇದೇ ಸಿನಿಮಾದಲ್ಲಿ ಮಂಜು ವಾರಿಯರ್ ಕಾಣಿಸಿಕೊಳ್ಳಬಹುದು. ತಲೈವರ್ 170 ಅನ್ನು ಲೈಕಾ ಪ್ರೊಡಕ್ಷನ್ಸ್ ನಿರ್ಮಿಸಲಿದೆ. ಸದ್ಯ ರಜನಿಕಾಂತ್ ಜೈಲರ್ ಸಿನಿಮಾ ಯಶಸ್ಸಿನಲ್ಲಿದ್ದಾರೆ.

ತಲೈವ ರಜನಿಕಾಂತ್ ಅವರ 170 ಸಿನಿಮಾ ಬಗೆಗಿನ ಇತ್ತೀಚಿನ ವರದಿಗಳ ಪ್ರಕಾರ, ಚಿತ್ರದ ಶೂಟಿಂಗ್ ಸೆಪ್ಟೆಂಬರ್ ಮೂರನೇ ವಾರದಲ್ಲಿ ಪ್ರಾರಂಭವಾಗಲಿದೆ. ಜೈಲರ್‌ನಲ್ಲಿ ಜಬರ್‌ದಸ್ತ್ ಮ್ಯೂಸಿಕ್ನೀಡಿರುವ ಅನಿರುದ್ಧ್ ರವಿಚಂದರ್ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಲಿದ್ದಾರೆ ಎಂಬುದೂ ಬಹುತೇಕ ಖಚಿತವಾಗಿದೆ.

ಚಿತ್ರದ ತಾರಾಗಣದ ಬಗ್ಗೆ ಊಹಾಪೋಹಗಳು ಹರಿದಾಡುತ್ತಿದ್ದರೂ ಮಂಜು ವಾರಿಯರ್ ಹೊರತು ಪಡಿಸಿ ಉಳಿದವರು ಯಾರನ್ನೂ ಅಂತಿಮಗೊಳಿಸಿಲ್ಲ ಎಂದು ಹೇಳಲಾಗುತ್ತಿದೆ. ಟಿಜೆ ಜ್ಞಾನವೇಲ್ ಅವರು ರಜನಿಕಾಂತ್ ಜೊತೆಗಿನ ತಮ್ಮ ಚಿತ್ರಕ್ಕೆ ವೆಟ್ಟೈಯಾನ್ ಎಂದು ಹೆಸರಿಡಲು ನಿರ್ಧರಿಸಿದ್ದಾರೆ ಎಂಬ ವರದಿಗಳು ಬಂದಿವೆ.

ತಿಳಿದಿರುವಂತೆ ವೆಟ್ಟೈಯಾನ್ ಎಂಬುದು ಸೂಪರ್‌ ಹಿಟ್ ಚಿತ್ರ ಚಂದ್ರಮುಖಿಯಲ್ಲಿ ರಜನಿಕಾಂತ್ ನಿರ್ವಹಿಸಿದ ನಕಾರಾತ್ಮಕ ಛಾಯೆಯ ಪಾತ್ರವಾಗಿತ್ತು. ಆದರೆ, ರಜನಿಕಾಂತ್ ಅವರ 170ನೇ ಸಿನಿಮಾಗೆ ನಿರ್ದೇಶಕರು ವೆಟ್ಟೈಯಾನ್ ಎಂದು ಹೆಸರಿಡಲು ಏಕೆ ಆಯ್ಕೆ ಮಾಡಿದ್ದಾರೆ? ಅದರ ಹಿಂದೆ ಏನಾದರೂ ಅರ್ಥವಿದೆಯೇ ಅಥವಾ ಇಲ್ಲವೇ ಎಂಬುದನ್ನು ಮುಂದೆ ಹಂತ ಹಂತವಾಗಿ ತಿಳಿಯಲಿದೆ.

ಅಮಿತಾಬ್ ಬಚ್ಚನ್ ಮತ್ತು ಫಹಾದ್ ಫಾಸಿಲ್ ತಲೈವರ್ 170 ರ ಭಾಗವಾಗಿದ್ದಾರೆ ಎಂದು ಈಗಾಗಲೇ ವದಂತಿಗಳು ಹರಡಿವೆ. ಈ ಇಬ್ಬರು ನಟರ ಜೊತೆ ಮಾತುಕತೆ ನಡೆಯುತ್ತಿದ್ದರೂ ಇನ್ನೂ ಯಾವುದನ್ನೂ ಅಂತಿಮಗೊಳಿಸಿಲ್ಲ ಎಂದು ವರದಿಯಾಗಿದೆ. ಸಿನಿಮಾದಲ್ಲಿ ಫಹಾದ್ ಫಾಸಿಲ್ ರಜನಿಕಾಂತ್‌ಗೆ ಎದುರಾಗಳಿದ್ದಾರೆ. ಇತ್ತೀಚೆಗೆ ಬಿಡುಗಡೆಯಾಗಿರುವ ಮಾಮನ್ನನ್ ಸಿನಿಮಾದಲ್ಲಿ ಫಹಾದ್ ಫಾಸಿಲ್ ಖಳನಟನಾಗಿ ಅಬ್ಬರಿಸಿದ್ದಾರೆ.

More from Filmibeat

English summary
Manju Warrier to team up with Rajinikanth.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X