»   » ಮಲ್ಟಿ ಹೀರೋ- ಹೀರೋಯಿನ್‌ಗಳ ‘ಶ್ರೀಮಂಜುನಾಥ’

ಮಲ್ಟಿ ಹೀರೋ- ಹೀರೋಯಿನ್‌ಗಳ ‘ಶ್ರೀಮಂಜುನಾಥ’

Posted By: Staff
Subscribe to Filmibeat Kannada

ಆಶಾ ಚಿತ್ರದಿಂದ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿ, ಕನ್ನಡದಲ್ಲಿ ಹೆಚ್ಚಿನ ಅವಕಾಶ ದೊರಕದೆ ತೆಲುಗು - ತಮಿಳಿನಲ್ಲಿ ಜಂಟಲ್‌ ಮ್ಯಾನ್‌ ಎನಿಸಿಕೊಂಡ ಅರ್ಜುನ್‌ ಸರ್ಜಾ, ಬೆಂಗಳೂರಿನ ಹನುಮಂತನಗರದ ಹುಡುಗಿ ಹಾಲಿ ತೆಲುಗಿನ ಸೂಪರ್‌ ಸ್ಟಾರಿಣಿ ಸೌಂದರ್ಯ, ಖ್ಯಾತ ತೆಲುಗು ನಟ ಚಿರಂಜೀವಿ, ಮೀನಾ, ಸಾಂಘವಿ, ವಿನೋದ್‌ ರಾಜ್‌, ಕುಮಾರ್‌ ಗೋವಿಂದ್‌, ಅಭಿಜಿತ್‌, ರೆಬೆಲ್‌ ಸ್ಟಾರ್‌ ಅಂಬರೀಶ್‌, ಸುಮಲತಾ ಮತ್ತಿತರ ಮಲ್ಟಿ ಹೀರೋ - ಹೀರೋಯಿನ್‌ಗಳನ್ನೊಳಗೊಂಡ, ಚಿನ್ನಿ ಫಿಲಂಸ್‌ ಲಾಂಛನದಲ್ಲಿ ಜಯಶ್ರೀ ದೇವಿ ನಿರ್ಮಿಸುತ್ತಿರುವ ಚಿತ್ರ 'ಶ್ರೀಮಂಜುನಾಥ " ನಿಗೆ ಭರದಿಂದ ಚಿತ್ರೀಕರಣ ಸಾಗಿದೆ.

ಐತಿಹಾಸಿಕ ಹಂಪೆಯ, ನಿಸರ್ಗದ ಮಡಿಲಲ್ಲಿ ನಿರ್ದೇಶಕ ಕೆ. ರಾಘವೇಂದ್ರ ರಾವ್‌ ನಿರ್ದೇಶನದಲ್ಲಿ ಹಲವು ದೃಶ್ಯಗಳ ಚಿತ್ರೀಕರಣ ಸಾಗಿದೆ. ಕಳೆದ ವಾರ ಭಕ್ತಿ ಪ್ರಧಾನವಾದ ಈ ಚಿತ್ರಕ್ಕಾಗಿ ಕಂಠೀರವ ಸ್ಟುಡಿಯೋದಲ್ಲಿ ಹಾಕಲಾಗಿದ್ದ ಭವ್ಯವಾದ ಕೈಲಾಸದ ಸೆಟ್‌ನಲ್ಲಿ ಶ್ರೀ ಮಂಜುನಾಥನ ಚರಿತೆ ಮಧುರಾ.. ಮಧುರಾ.. ಎಂಬ ಗೀತೆಗೆ ನೃತ್ಯದ ಚಿತ್ರೀಕರಣ ನಡೆಯಿತು.

ಏಳು ನಿಮಿಷಗಳ ಈ ಗೀತೆಗೆ ಸತತ 7 ದಿನಗಳ ಕಾಲ ಚಿತ್ರೀಕರಣ ನಡೆದಿದೆ. ಚಿತ್ರಕ್ಕೆ ಜೆ.ಕೆ. ಭಾರವಿ ಅವರ ಕಥೆ, ಹಂಸಲೇಖರ ಗೀತೆ, ಸಂಗೀತ, ಸುಂದರನಾಥ ಸುವರ್ಣರ ಛಾಯಾಗ್ರಹಣ, ಡಾ. ನಾಗೇಂದ್ರ ಪ್ರಸಾದ್‌ ಸಂಭಾಷಣೆ ಇದೆ.

English summary
Telugu superstar Chiranjeevi has a lead roll too
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada