ಗಿಡ ನೆಟ್ಟು ಪರಿಸರದ ಬಗ್ಗೆ ಅರಿವು ಮೂಡಿಸಿದ ಮನೋರಂಜನ್
Recommended Video

ರವಿಮಾಮನ ಪುತ್ರನ ಪರಿಸರ ಕಾಳಜಿ ಮೆಚ್ಚಬೇಕು | Filmibeat Kannada
ವಿಶ್ವ ಪರಿಸರ ದಿನದ ಅಂಗವಾಗಿ ಕನ್ನಡದ ಎಲ್ಲಾ ಸ್ಟಾರ್ ಕಲಾವಿದರುಗಳು ತಮ್ಮದೇ ಸ್ಟೈಲ್ ನಲ್ಲಿ ಪರಿಸರ ದಿನಾಚರಣೆಯನ್ನು ಆಚರಣೆ ಮಾಡುತ್ತಿದ್ದಾರೆ. ಕೇವಲ ಒಂದು ದಿನ ಮಾತ್ರವಲ್ಲ, ಪ್ರತಿದಿನವೂ ಪರಿಸರ ಕಾಳಜಿಯನ್ನು ವಹಿಸಬೇಕು ಎನ್ನುವ ಸಂದೇಶ ಸಾರುವುದರ ಜೊತೆಯಾಗಿ ಪರಸರ ಕಾಳಜಿ ಎಷ್ಟು ಪ್ರಾಮುಖ್ಯತೆ ಎನ್ನುವುದನ್ನು ತಿಳಿಸಿ ಹೇಳುತ್ತಿದ್ದಾರೆ.
ಸ್ಯಾಂಡಲ್ ವುಡ್ ನ ಕ್ರೇಜಿಸ್ಟಾರ್ ಅವರ ಪುತ್ರ ಮನೋರಂಜನ್ ರವಿಚಂದ್ರನ್ ಕೂಡ ಪರಿಸರ ಕಾಳಜಿ ಹೇಗೆ ಮಾಡಬೇಕು ಎನ್ನುವುದು ಸಣ್ಣ ವಿಡಿಯೋ ಮಾಡುವ ಮೂಲಕ ಜನರಿಗೆ ಪರಿಸರ ಮಾಹಿತಿ ತಿಳಿಸಿದ್ದಾರೆ .
ತಮ್ಮ ಮನೆಯ ಅಂಗಳದಲ್ಲಿ ಸಣ್ಣದೊಂದು ಗಿಡ ನೆಟ್ಟು ''ಪರಿಸರ ಕಾಳಜಿ ನಮ್ಮೆಲ್ಲರ ಕರ್ತವ್ಯ ನಾನು ನನ್ನ ಕೆಲಸವನ್ನು ಮಾಡಿದ್ದೇನೆ ನೀವು ನಿಮ್ಮ ಕೆಲಸವನ್ನು ತಪ್ಪದೇ ಮಾಡಿ'' ಎಂದು ತಮ್ಮ ಅಭಿಮಾನಿಗಳಿಗೆ ಮನವಿ ಮಾಡಿದ್ದಾರೆ.

ಕೇವಲ ಮನೋರಂಜನೆ ಮಾತ್ರವಲ್ಲದೆ ಸಾಕಷ್ಟು ಕಲಾವಿದರು ಪರಿಸರ ದಿನಾಚರಣೆ ಅಂಗವಾಗಿ ಗಿಡಗಳನ್ನು ನೆಡುವ ಮೂಲಕ ವಿಶ್ವ ಪರಿಸರ ದಿನಾಚರಣೆಯನ್ನು ಆಚರಣೆ ಮಾಡಿದ್ದಾರೆ.
More from Filmibeat
English summary
Kannada actor Manoranjan Ravichandran has planted the plant as part of the world environment day awareness of the environment.


Click it and Unblock the Notifications











