For Quick Alerts
  ALLOW NOTIFICATIONS  
  For Daily Alerts

  ದರ್ಶನ್ ಜೊತೆ 'ಮುಗಿಲ್ ಪೇಟೆ'ಗೆ ಹೋಗ್ತಾರೆ ಮನೋರಂಜನ್

  |

  'ಗಾಳಿಪಟ' ಸಿನಿಮಾದಲ್ಲಿ ಬರುವ 'ಮುಗಿಲ್ ಪೇಟೆ' ಊರಿನ ಹೆಸರು ಈಗ ಒಂದು ಸಿನಿಮಾದ ಟೈಟಲ್ ಆಗಿದೆ. ಮನೋರಂಜನ್ ರವಿಚಂದ್ರನ್ ಈ ಸಿನಿಮಾದ ನಾಯಕನಾಗಿದ್ದಾರೆ.

  'ಮುಗಿಲ್ ಪೇಟೆ' ಮನೋರಂಜನ್ ರವಿಚಂದ್ರನ್ ನಟನೆಯ ನಾಲ್ಕನೇ ಸಿನಿಮಾ. ಈ ಸಿನಿಮಾ ಇದೇ ವಾರ ಲಾಂಚ್ ಆಗುತ್ತಿದೆ. ನಟ ದರ್ಶನ್ ಈ ಶುಭ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ದರ್ಶನ್ ಮೂಲಕ ಮನೋರಂಜನ್ ನಾಲ್ಕನೇ ಸಿನಿಮಾ ಶುರು ಆಗುತ್ತಿದೆ.

  ರವಿಚಂದ್ರನ್ ಸಿನಿಮಾ ನೋಡಿ ಅವ್ರ ಮಕ್ಕಳೇ ಭಯ ಪಟ್ಟರು ರವಿಚಂದ್ರನ್ ಸಿನಿಮಾ ನೋಡಿ ಅವ್ರ ಮಕ್ಕಳೇ ಭಯ ಪಟ್ಟರು

  ಬೆಂಗಳೂರಿನ ಬಸವೇಶ್ವರ ನಗರದ ಡಾ ಬಿ ಆರ್ ಅಂಬೇಡ್ಕರ್ ಕ್ರೀಡಾಂಗಣದಲ್ಲಿ ನವೆಂಬರ್ 15 ರಂದು ಮಧ್ಯಾಹ್ನ 12ಗೆ ಸಿನಿಮಾದ ಮುಹೂರ್ತ ಕಾರ್ಯಕ್ರಮ ನಡೆಯಲಿದೆ. ಭರತ್ ಎಸ್ ಈ ಸಿನಿಮಾದ ನಿರ್ದೇಶನ ಮಾಡುತ್ತಿದ್ದಾರೆ.

  ಇತ್ತೀಚಿಗಷ್ಟೆ ಮನೋರಂಜನ್ ಅಭಿನಯದ ಮೂರನೇ ಸಿನಿಮಾ 'ಪ್ರಾರಂಭ' ಚಿತ್ರದ ಟ್ರೇಲರ್ ಬಿಡುಗಡೆ ಮಾಡಿದ್ದ ದರ್ಶನ್ ಈಗ ಹೊಸ ಸಿನಿಮಾಗೆ ಸಹ ಸಹಕಾರ ನೀಡುತ್ತಿದ್ದಾರೆ.

  'ಸಾಹೇಬ' ಸಿನಿಮಾದ ಮೂಲಕ ಚಿತ್ರರಂಗಕ್ಕೆ ಬಂದ ಮನೋರಂಜನ್ ರವಿಚಂದ್ರನ್ ಬಳಿಕ 'ಬೃಹಸ್ಪತಿ' ಹಾಗೂ 'ಪ್ರಾರಂಭ' ಸಿನಿಮಾಗಳಲ್ಲಿ ನಟಿಸಿದ್ದಾರೆ. 'ಪ್ರಾರಂಭ' ಸಿನಿಮಾದ ಚಿತ್ರೀಕರಣ ಮುಗಿದಿದ್ದು, ಪೊಸ್ಟ್ ಪ್ರೊಡಕ್ಷನ್ ಕೆಲಸ ನಡೆಯುತ್ತಿದೆ.

  English summary
  Actor Manoranjan Ravichandran 4th movie titled as 'Mugilpete'.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X