ಲಿಪ್ ಲಾಕ್ ಸೀನ್ ಮಾಡಿದ ಮನೋರಂಜನ್ ರವಿಚಂದ್ರನ್
Recommended Video
ಬಾಲಿವುಡ್ ಸಿನಿಮಾಗಳಲ್ಲಿ ಲಿಪ್ ಲಾಕ್ ಸೀನ್ ಗಳು ಸಾಮಾನ್ಯವಾಗಿ ಬಿಟ್ಟಿವೆ. ಈಗ ಕನ್ನಡದಲ್ಲಿಯೂ ಈ ದೃಶ್ಯಗಳು ಹೆಚ್ಚಾಗುತ್ತಿದೆ. ಈಗ ರವಿಚಂದ್ರನ್ ಪುತ್ರ ಮನೋರಂಜನ್ ಈ ದೃಶ್ಯದಲ್ಲಿ ನಟಿಸಿದ್ದಾರೆ.
'ಪ್ರಾರಂಭ' ಸಿನಿಮಾದ ಟೀಸರ್ ನಿನ್ನೆ ಬಿಡುಗಡೆಯಾಗಿದೆ. ಈ ಟೀಸರ್ ಲಿಪ್ ಲಾಕ್ ಸೀನ್ ಮೂಲಕ ಅಂತ್ಯ ಆಗುತ್ತದೆ. ನಟ ಮನೋರಂಜನ್ ಹಾಗೂ ನಟಿ ಕೀರ್ತಿ ಕಲಕೇರಿ ನಡುವೆ ಈ ಕಿಸ್ಸಿಂಗ್ ದೃಶ್ಯ ಇದೆ.

ರವಿಚಂದ್ರನ್ ಎಂದ ತಕ್ಷಣ ಅವರ ರೋಮ್ಯಾಟಿಂಗ್ ಸಿನಿಮಾಗಳು, ಹಾಡುಗಳು ನೆನಪಾಗುತ್ತವೆ. ಈಗ ಮನೋರಂಜನ್ ಕೂಡ ಅಪ್ಪನ ಹಾಗೆ ರೋಮ್ಯಾಂಟಿಕ್ ಹೀರೋ ಆಗಿದ್ದಾರೆ. ಮೊದಲ ಕಿಸ್ಸಿಂಗ್ ದೃಶ್ಯದ ಬಗ್ಗೆ ಯೋಚನೆ ಮಾಡಿದ ಮನೋರಂಜನ್ ಬಳಿಕ ಸಿನಿಮಾಗೆ ಅಗತ್ಯ ಇದ್ದ ಕಾರಣಕ್ಕೆ ಈ ದೃಶ್ಯದಲ್ಲಿ ಕಾಣಿಸಿಕೊಂಡೆ ಎಂದು ತಿಳಿಸಿದ್ದಾರೆ.
ವಿಶೇಷ ಅಂದರೆ, ಈ ಟೀಸರ್ ಗೆ ನಟ ದರ್ಶನ್ ಧ್ವನಿ ನೀಡಿದ್ದಾರೆ. ಮನೋರಂಜನ್ ಹೊಸ ಸಿನಿಮಾಗೆ ಶುಭ ಹಾರೈಸಿದ್ದಾರೆ. ಮನು ಕಲ್ಯಾಡಿ ಈ ಸಿನಿಮಾದ ನಿರ್ದೇಶನ ಮಾಡಿದ್ದಾರೆ.

'ಸಾಹೇಬ' ಹಾಗೂ ಬೃಹಸ್ಪತಿ ಸಿನಿಮಾಗಳ ನಂತರ ಮನೋರಂಜನ್ ರವಿಚಂದ್ರನ್ ಈ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. 'ಪ್ರಾರಂಭ' ಒಂದು ಪಕ್ಕಾ ಲವ್ ಸ್ಟೋರಿ ಸಿನಿಮಾವಾಗಿದೆ.


Click it and Unblock the Notifications











