ಕ್ರೇಜಿಸ್ಟಾರ್ ಪುತ್ರನಿಗೆ ಈ ವರ್ಷದ ಬರ್ತ್ ಡೇ ಸಂಭ್ರಮವಿಲ್ಲ, ಏಕೆ?
Recommended Video

ನಟ ರವಿಚಂದ್ರನ್ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳಲು ಇಷ್ಟ ಆಗುವುದಿಲ್ಲ ಎಂದು ಅನೇಕ ಬಾರಿ ಹೇಳಿಕೊಂಡಿದ್ದಾರೆ. ಇದೀಗ ಅವರ ಮಗ ಮನೋರಂಜನ್ ಕೂಡ ಈ ವರ್ಷ ತಮ್ಮ ಹುಟ್ಟುಹಬ್ಬವನ್ನು ಆಚರಣೆ ಮಾಡುತ್ತಿಲ್ಲ.
ನಟ ಅಂಬರೀಶ್ ಅವರ ನಿಧನದ ಹಿನ್ನಲೆಯಲ್ಲಿ ಮನೋರಂಜನ್ ರವಿಚಂದ್ರನ್ ತಮ್ಮ ಬರ್ತ್ ಡೇಯನ್ನು ಆಚರಿಸುತ್ತಿಲ್ಲ. ಇಂದು ಅವರ ಹುಟ್ಟುಹಬ್ಬವಿದ್ದು, ಆಚರಣೆ ನಿರಾಕರಣೆ ಬಗ್ಗೆ ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ.
''ನಮ್ಮ ಅಂಬರೀಶ್ ಸರ್ ನಿಧನದಿಂದ ನಮ್ಮ ಚಿತ್ರರಂಗದ ಕುಟುಂಬಕ್ಕೆ ಹಾಗೂ ಅಭಿಮಾನಿಗಳಿಗೆ ತುಂಬಾ ನೋವಾಗಿದೆ. Personally ನನಗೆ ಅವರ ಅಗಲಿಕೆಯಿಂದ ಈ ವರ್ಷ ನನ್ನ birthday celebrate ಮಾಡೋದಕ್ಕೆ ಮನಸ್ಸಿಲ್ಲ. ಅಭಿಮಾನಿಗಳಲ್ಲಿ ನನ್ನದೊಂದು ಕೋರಿಕೆ ಯಾರು ಕೇಕ್ ಗಳನ್ನು, ಹೂವಿನ ಹಾರ, ಪಟಾಕಿಗಳನ್ನು ತರಬೇಡಿ. ನೀವು ಹಾಗೇ ಬಂದು wish ಮಾಡಿ ಹೋಗಬಹುದು.'' ಎಂದು ಫೇಸ್ ಬುಕ್ ನಲ್ಲಿ ತಿಳಿಸಿದ್ದಾರೆ.

ನಟ ವಿನೋದ್ ಪ್ರಭಾಕರ್ ಸಹ ಇತ್ತೀಚಿಗಷ್ಟೆ ಇದ್ದ ತಮ್ಮ ಹುಟ್ಟುಹಬ್ಬವನ್ನು ಆಚರಣೆ ಮಾಡಲಿಲ್ಲ. ಅಂಬಿ ವಿಧಿವಶರಾಗಿದ್ದ ನೋವಿನಲ್ಲಿ ಇದ್ದ 'ಮರಿ ಟೈಗರ್' ಅಭಿಮಾನಿಗಳಲ್ಲಿ ಮನವಿ ಮಾಡಿದ್ದರು.
ಇನ್ನು, ಮನೋರಂಜ್, 'ಚಿಲ್ಲಂ' ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಅದರ ಜೊತೆಗೆ 'ಪ್ರಾರಂಭ' ಎಂಬ ಹೊಸ ಸಿನಿಮಾವನ್ನು ಒಪ್ಪಿಕೊಂಡಿದ್ದಾರೆ.


Click it and Unblock the Notifications











