For Quick Alerts
  ALLOW NOTIFICATIONS  
  For Daily Alerts

  ಚಿತ್ರೀಕರಣದ ವೇಳೆ ಗಲ್ಲಿ ಕ್ರಿಕೆಟ್ ಆಡುತ್ತಿದ್ದಾರೆ ಮನೋರಂಜನ್ ಅಂಡ್ ಟೀಂ

  By Naveen
  |

  'ಸಾಹೇಬ' ಸಿನಿಮಾದ ನಂತರ ಮನೋರಂಜನ್ ರವಿಚಂದ್ರನ್ ಇನ್ನೊಂದು ಸಿನಿಮಾದಲ್ಲಿ ಬ್ಯುಸಿ ಇದ್ದಾರೆ. ತಮಿಳಿನ 'ವಿಐಪಿ' ಚಿತ್ರದ ರೀಮೇಕ್ ಮಾಡುತ್ತಿದ್ದು, ಆ ಚಿತ್ರದ ಶೂಟಿಂಗ್ ಕೆಲ ತಿಂಗಳಿನಿಂದ ನಡೆಯುತ್ತಿದೆ.

  ರವಿಚಂದ್ರನ್ ಪುತ್ರ ಮನೋರಂಜನ್ ಎರಡನೇ ಚಿತ್ರದ ನಾಯಕಿ ಇವರೇ ನೋಡಿ

  ಸಿನಿಮಾದ ಚಿತ್ರೀಕರಣದ ವೇಳೆ ಚಿತ್ರತಂಡ ಕ್ರಿಕೆಟ್ ಆಡಿ ಸಂಭ್ರಮಿಸಿದೆ. ಈ ಗಲ್ಲಿ ಕ್ರಿಕೆಟ್ ನಲ್ಲಿ ನಟ ಮನೋರಂಜನ್, ನಿರ್ದೇಶಕ ನಂದ ಕಿಶೋರ್ ಮತ್ತು ಸಿನಿಮಾಟೋಗ್ರಾಫರ್ ಸತ್ಯ ಹೆಗಡೆ ಭಾಗಿಯಾಗಿದ್ದಾರೆ. ಚಿತ್ರತಂಡದ ಜೊತೆ ಕ್ರಿಕೆಟ್ ಆಡುತ್ತಿರುವ ಫೋಟೋವನ್ನು ಮನೋರಂಜನ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

  ಸಿನಿಮಾದ ಕೊನೆಯ ಹಂತದ ಚಿತ್ರೀಕರಣ ಇದಾಗಿದೆ. ಅಂದಹಾಗೆ, ಈ ಚಿತ್ರದ ನಾಯಕಿಯ ಹೆಸರು ಇದೀಗ ಹೊರಬಿದ್ದಿದ್ದು, ನಟಿ ಮಿಶ್ಟಿ, ಮನೋರಂಜನ್ ಜೊತೆ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಈ ನಟಿ ಬಾಲಿವುಡ್ ನಲ್ಲಿ 'ಬೇಗಂ ಜಾನ್' ಸೇರಿದಂತೆ ಕೆಲ ಸಿನಿಮಾಗಳನ್ನು ಮಾಡಿದ್ದಾರೆ.

  English summary
  Manoranjan Ravichandran played cricket during his upcoming movie shooting.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X