ಮೂರನೇ ಸಿನಿಮಾದ ಚಿತ್ರೀಕರಣ ಮುಗಿಸಿದ ಮನೋರಂಜನ್ ರವಿಚಂದ್ರನ್
ನಟ ಮನೋರಂಜನ್ ರವಿಚಂದ್ರನ್ ತಮ್ಮ ಮೂರನೇ ಸಿನಿಮಾದ ಚಿತ್ರೀಕರಣವನ್ನು ಮುಗಿಸಿದ್ದಾರೆ. 'ಪ್ರಾರಂಭ' ಸಿನಿಮಾದ ಶೂಟಿಂಗ್ ಅಂತ್ಯವಾಗಿದ್ದು, ಕುಂಬಳಕಾಯಿ ಒಡೆಯಲಾಗಿದೆ.
ಮನೋರಂಜನ್ ಸಿನಿಮಾದ ಶೂಟಿಂಗ್ ಮುಗಿದ ವಿಷಯವನ್ನು ತಮ್ಮ ಸೋಷಿಯಲ್ ಮೀಡಿಯಾ ಖಾತೆಯ ಮೂಲಕ ತಿಳಿಸಿದ್ದಾರೆ. ಕೊನೆಯ ದಿನ ಇಡೀ ತಂಡ ಒಟ್ಟಿಗೆ ಫೋಟೋ ತೆಗೆಸಿಕೊಂಡಿದ್ದು, ಆ ಫೋಟೋವನ್ನು ಹಂಚಿಕೊಂಡಿದ್ದಾರೆ. ಬೆಂಗಳೂರು, ಮೈಸೂರು ಬಳ್ಳಾರಿ, ಚಿಕ್ಕಮಗಳೂರು, ಮೂಡಿಗೆರೆ, ಗೋವಾದಲ್ಲಿ ಸಿನಿಮಾದ ಚಿತ್ರೀಕರಣ ಮಾಡಲಾಗಿದೆ.
'ಸಾಹೇಬ' ಹಾಗೂ 'ಬೃಹಸ್ಪತಿ' ಸಿನಿಮಾದ ನಂತರ ಈ ಚಿತ್ರದಲ್ಲಿ ಮನೋರಂಜನ್ ನಟಿಸಿದ್ದಾರೆ. ಈಗಾಗಲೇ, ಸಿನಿಮಾದ ಟೀಸರ್ ಬಿಡುಗಡೆಯಾಗಿದೆ. ಟೀಸರ್ ನಲ್ಲಿ ಲಿಪ್ ಲಾಕ್ ಸೀನ್ ಇದ್ದು, ಗಾಂಧಿನಗರದಲ್ಲಿ ಸಿನಿಮಾ ಸುದ್ದಿ ಮಾಡಿತ್ತು. ಕೀರ್ತಿ ಕಲ್ಕೇರಿ ಸಿನಿಮಾದ ನಾಯಕಿಯಾಗಿದ್ದು, ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. ಎರಡು ಶೇಡ್ ಗಳಲ್ಲಿ ಮನೋರಂಜನ್ ಲುಕ್ ಇರಲಿದೆ.

ಸಿನಿಮಾಗೆ ನಟ ದರ್ಶನ್ ವಾಯ್ಸ್ ಓವರ್ ನೀಡುವ ಮೂಲಕ ಪ್ರಾರಂಭಕ್ಕೆ ಪವರ್ ನೀಡಿದ್ದಾರೆ. ಪ್ರಜ್ವಲ್ ಪೈ ಸಂಗೀತ ಸಿನಿಮಾದಲ್ಲಿ ಇದೆ. ಮನು ಕಲ್ಯಾಡಿ ಸಿನಿಮಾದ ನಿರ್ದೇಶನ ಮಾಡಿದ್ದಾರೆ.
ಸಿನಿಮಾದ ಕೆಲಸ ಮುಗಿದಿದ್ದು, ದೀಪಾವಳಿ ಹಬ್ಬವನ್ನು ಆಚರಿಸು ಮನೋರಂಜನ್ ಸಿದ್ದವಾಗಿದ್ದಾರೆ. ಅಭಿಮಾನಿಗಳಿಗೆ ಹಬ್ಬದ ವಿಶ್ ಮಾಡಿದ್ದಾರೆ.


Click it and Unblock the Notifications











