Don't Miss!
- News ಮಳೆ.. ಮಳೆ.. ಮುಂದಿನ 24 ಗಂಟೆಯಲ್ಲಿ ಭರ್ಜರಿ ಮಳೆ!
- Sports IPL 2024: ಚಹಾಲ್ ಬಿಟ್ಟುಕೊಟ್ಟಿದರ ಬಗ್ಗೆ ಕಾರಣ ತಿಳಿಸಿದ ಆರ್ಸಿಬಿ ಮಾಜಿ ನಿರ್ದೇಶಕ
- Finance ಸಾಲ ತಂದು ನೌಕರರಿಗೆ ಸಂಬಳ ನೀಡಿದ ಬೈಜುಸ್ ಸಂಸ್ಥೆ!
- Technology Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- Lifestyle ಮೊಬೈಲ್ ಬೇಡ..ಗ್ಯಾಜೆಟ್ ಬೇಡ..ಹಸ್ತದಿಂದ ಪೇಮೆಂಟ್ ಮಾಡಿ..! ಇದು ಟಿಜಿಟಲ್ ಕ್ರಾಂತಿ..!
- Automobiles Kia Carens: ಗ್ಲೋಬಲ್ ಎನ್ಸಿಎಪಿ ಸುರಕ್ಷತಾ ಪರೀಕ್ಷೆ.. 3-ಸ್ಟಾರ್ ಪಡೆದ ಕಿಯಾ ಕ್ಯಾರೆನ್ಸ್
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಚಿಲಂ' ಚಿತ್ರಕ್ಕಾಗಿ ಮಾಸ್ ರಗಡ್ ಲುಕ್ ನಲ್ಲಿ ಮನೋರಂಜನ್
Recommended Video
ನಟ ಮನೋರಂಜನ್ ಬೃಹಸ್ಪತಿ ಸಿನಿಮಾ ನಂತರ 'ಚಿಲಂ' ಸಿನಿಮಾದಲ್ಲಿ ಅಭಿನಯ ಮಾಡುತ್ತಿದ್ದಾರೆ ಎನ್ನುವುದು ಹಳೆಯ ವಿಚಾರ. ಸದ್ಯ ಚಿತ್ರದ ಪಾತ್ರಕ್ಕಾಗಿ ಮನು ಹೊಸ ಲುಕ್ ನಲ್ಲಿ ಎಂಟ್ರಿಕೊಟ್ಟಿದ್ದಾರೆ. ಡ್ರಗ್ ಮಾಫಿಯಾ ಕುರಿತಾದ ಸಿನಿಮಾ ಇದಾಗಿದ್ದು ಮನೋರಂಜನ್ ಚಿತ್ರದಲ್ಲಿ ಡಿಫ್ರೆಂಟ್ ಆಗಿ ಕಾಣಿಸಿಕೊಳ್ಳಲಿದ್ದಾರೆ.
'ಚಿಲಂ' ಚಿತ್ರದಲ್ಲಿನ ಮನು ಲುಕ್ ರಿಲೀಸ್ ಆಗಿದ್ದು ಮನು ಈ ಬಾರಿ ಔಟ್ ಅಂಡ್ ಔಟ್ ಮಾಸ್ ಲುಕ್ ನಲ್ಲಿ ಕಾಣಿಸಿಕೊಳ್ಳುವ ಸೂಚನೆ ಕೊಡುತ್ತಿದ್ದಾರೆ. ಚಂದ್ರಕಲಾ ನಿರ್ದೇಶನ ಮಾಡುತ್ತಿರುವ ಈ ಚಿತ್ರದ ಶೂಟಿಂಗ್ ಶುರುವಾಗಿದ್ದು ಹದಿನಾಲ್ಕು ವರ್ಷದ ನಂತರ ರಾಘವೇಂದ್ರ ರಾಜ್ ಕುಮಾರ್ ಮತ್ತೆ ಸಿನಿಮಾದಲ್ಲಿ ಅಭಿನಯ ಮಾಡುತ್ತಿದ್ದಾರೆ.
ಗಿಡ ನೆಟ್ಟು ಪರಿಸರದ ಬಗ್ಗೆ ಅರಿವು ಮೂಡಿಸಿದ ಮನೋರಂಜನ್
ಕೈನಲ್ಲಿ ಗನ್ ಹಿಡಿದು ಕ್ಯಾಮೆರಾಗೆ ಪೋಸ್ ಕೊಟ್ಟಿರುವ ಮನು ಸಿನಿಮಾಗಾಗಿ ಗಡ್ಡ ಬಿಟ್ಟಿದ್ದಾರೆ. ಹೇರ್ ಸ್ಟೈಲ್ ಕೂಡ ಬದಲಾಗಿದ್ದು ಈ ಹಿಂದಿನ ಸಿನಿಮಾಗಳಿಗಿಂತಲೂ ವಿಭಿನ್ನವಾಗಿ ಕಾಣಿಸುತ್ತಿದ್ದಾರೆ.
ಮನೋರಂಜನ್ ಗೆ ನಾಯಕಿಯಾಗಿ ಪ್ರಿಯಾಂಕ ತಿಮ್ಮೇಶ್ ಕಾಣಿಸಿಕೊಳ್ಳಲಿದ್ದಾರೆ. ಬಾಲಿವುಡ್ ನಟ ನಾನಾ ಪಾಟೇಕರ್ ಕೂಡ 'ಚಿಲಂ' ಸಿನಿಮಾದಲ್ಲಿ ಅಭಿನಯ ಮಾಡುತ್ತಿದ್ದಾರೆ. ಕಬೀರ ಚಿತ್ರ ಖ್ಯಾತಿಯ ನವೀನ್ಕುಮಾರ್ ಛಾಯಾಗ್ರಹಣ ಮಾಡುತ್ತಿದ್ದು, ನೋಬಿನ್ ಪೌಲ್ ಸಂಗೀತ ನೀಡುತ್ತಿದ್ದಾರೆ. ಎರಡನೇ ಹಂತದ ಚಿತ್ರೀಕರಣಕ್ಕಾಗಿ ಸಿನಿಮಾ ತಂಡ ಮೈಸೂರಿಗೆ ಹೊರಡಲಿದೆ.