For Quick Alerts
  ALLOW NOTIFICATIONS  
  For Daily Alerts

  ಗಾಂಜಾ ಸ್ಮಗ್ಲರ್ ಆದ ರವಿಚಂದ್ರನ್ ಪುತ್ರ ಮನೋರಂಜನ್!

  By Harshitha
  |
  ಗಾಂಜಾ ಸ್ಮಗ್ಲರ್ ಆದ ರವಿಚಂದ್ರನ್ ಪುತ್ರ ಮನೋರಂಜನ್ | FIlmibeat Kannada

  ಶೀರ್ಷಿಕೆ ಓದಿದ ತಕ್ಷಣ ಗಾಬರಿ ಆಗಬೇಡಿ.. ಇದು ರೀಲ್ ಸುದ್ದಿ ಅನ್ನೋದು ನಿಮ್ಮ ಗಮನದಲ್ಲಿರಲಿ..

  'ಸಾಹೇಬ' ಹಾಗೂ 'ಬೃಹಸ್ಪತಿ' ಚಿತ್ರಗಳಲ್ಲಿ ಪ್ರತಿಭಾವಂತ ಹುಡುಗನ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದ ಕ್ರೇಜಿ ಸ್ಟಾರ್ ರವಿಚಂದ್ರನ್ ಪುತ್ರ ಮನೋರಂಜನ್ ಇದೀಗ ಏಕ್ದಂ ರಫ್ ಅಂಡ್ ಟಫ್ ಲುಕ್ ನಲ್ಲಿ ಮಿಂಚಲು ಸಿದ್ಧತೆ ಮಾಡಿಕೊಳ್ತಿದ್ದಾರೆ.

  ನಿರ್ದೇಶಕಿ ಜೆ.ಚಂದ್ರಕಲಾ ಅವರ 'ಚಿಲ್ಲಂ' ಚಿತ್ರದಲ್ಲಿ ನಟಿಸಲು ಮನೋರಂಜನ್ ರವಿಚಂದ್ರನ್ ಒಪ್ಪಿಕೊಂಡಿರುವ ಬಗ್ಗೆ ಇದೇ 'ಫಿಲ್ಮಿಬೀಟ್ ಕನ್ನಡ'ದಲ್ಲಿ ನಾವೇ ವರದಿ ಮಾಡಿದ್ವಿ. ಹಾಗೇ, ಇದೇ ಚಿತ್ರದಲ್ಲಿ ರಾಘವೇಂದ್ರ ರಾಜ್ ಕುಮಾರ್ ವಿಲನ್ ಆಗಿ ನಟಿಸಲು ಗ್ರೀನ್ ಸಿಗ್ನಲ್ ಕೊಟ್ಟಿರುವ ಸುದ್ದಿ ಕೂಡ ನಿಮಗೆ ಗೊತ್ತಿರಲೇಬೇಕು. ಹಿರಿಯ ನಟಿ ಸರಿತಾ ಕೂಡ 'ಚಿಲ್ಲಂ' ತಾರಾಗಣದಲ್ಲಿ ಸೇರಿಕೊಂಡಿದ್ದಾರೆ.

  ಇಷ್ಟೆಲ್ಲ ವಿಶೇಷತೆಗಳು ಹೊಂದಿರುವ 'ಚಿಲ್ಲಂ' ಚಿತ್ರದಲ್ಲಿ ಮನೋರಂಜನ್ ರವಿಚಂದ್ರನ್ 'ಗಾಂಜಾ ಸ್ಮಗ್ಲರ್' ಪಾತ್ರ ನಿರ್ವಹಿಸುತ್ತಿದ್ದಾರೆ. 'ಚಿಲ್ಲಂ' ಚಿತ್ರಕಥೆ ಡ್ರಗ್ ಮಾಫಿಯಾ ಸುತ್ತ ಸುತ್ತಲಿದ್ದು, ಪಕ್ಕಾ ಮಾಸ್ ಲುಕ್ ನಲ್ಲಿ ಮನೋರಂಜನ್ ಕಾಣಿಸಿಕೊಳ್ಳಲಿದ್ದಾರೆ.

  ರಾಘವೇಂದ್ರ ರಾಜ್ ಕುಮಾರ್ ಸಿನಿಮಾದಲ್ಲಿ ಸರಿತಾ ನಟನೆ ರಾಘವೇಂದ್ರ ರಾಜ್ ಕುಮಾರ್ ಸಿನಿಮಾದಲ್ಲಿ ಸರಿತಾ ನಟನೆ

  ಮೊದಲ ಬಾರಿಗೆ ಮಾಸ್ ಲುಕ್ ನಲ್ಲಿ ಕಾಣಿಸಿಕೊಳ್ಳಲಿರುವ ಮನೋರಂಜನ್ ರವಿಚಂದ್ರನ್, ಗಾಂಜಾ ಸ್ಮಗ್ಲರ್ ಪಾತ್ರಕ್ಕಾಗಿ ಹೊಸ ಅವತಾರ ತಾಳಲಿದ್ದಾರಂತೆ. ಅದಕ್ಕಾಗಿ ಕೊಂಚ ಬಾಡಿ ಬಿಲ್ಡ್ ಮಾಡಲು ಮನೋರಂಜನ್ ಪ್ಲಾನ್ ಮಾಡಿದ್ದಾರೆ.

  ಮನೋರಂಜನ್ ಕಾಲಿಗೆ ಪೆಟ್ಟು: ಎರಡು ವಾರ ಕದಲುವ ಹಾಗಿಲ್ಲ!ಮನೋರಂಜನ್ ಕಾಲಿಗೆ ಪೆಟ್ಟು: ಎರಡು ವಾರ ಕದಲುವ ಹಾಗಿಲ್ಲ!

  ಸದ್ಯ ಮನೋರಂಜನ್ ಕಾಲಿಗೆ ಪೆಟ್ಟಾಗಿರುವುದರಿಂದ ಕೊಂಚ ವಿಶ್ರಾಂತಿ ಪಡೆಯುತ್ತಿದ್ದಾರೆ. ಪೂರ್ತಿ ಫಿಟ್ ಅಂಡ್ ಫೈನ್ ಆದ ಬಳಿಕ, ಜಿಮ್ ಕಡೆ ಮುಖ ಮಾಡಲು ಮನೋರಂಜನ್ ನಿರ್ಧರಿಸಿದ್ದಾರೆ.

  'ಚಿಲ್ಲಂ' ಬಗ್ಗೆ ಹೆಚ್ಚಿನ ಅಪ್ ಡೇಟ್ಸ್ ಕೊಡ್ತಾಯಿರ್ತೀವಿ, 'ಫಿಲ್ಮಿಬೀಟ್ ಕನ್ನಡ' ಓದುತ್ತಿರಿ...

  English summary
  Manoranjan Ravichandran to play drug smuggler role in Kannada Movie Chillam.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X