ಸ್ವಾರ್ಥವಿಲ್ಲದ ವ್ಯಕ್ತಿ ನನ್ನ ತಾಯಿ: ಅಮ್ಮನಿಗೆ ರವಿಚಂದ್ರನ್ ಪುತ್ರ ನಮನ

ತಾಯಿ ಸ್ವಾರ್ಥವಿಲ್ಲದ ವ್ಯಕ್ತಿ. ತನ್ನ ಮಕ್ಕಳಿಗಾಗಿ ಆಕೆ ಮಾಡುವ ತ್ಯಾಗ ಬಹಳ ದೊಡ್ಡದು. ಈ ರೀತಿ ತಾಯಿಯ ತ್ಯಾಗದ ಬಗ್ಗೆ ನಟ ಮನೋರಂಜನ್ ನಾಲ್ಕು ಸಾಲು ಬರೆದಿದ್ದಾರೆ.

ಕ್ರೇಜಿ ಸ್ಟಾರ್ ರವಿಚಂದ್ರನ್ ಮನೆಯ ಹೋಮ್ ಮಿನಿಸ್ಟರ್ ಅಂದರೆ, ಅವರ ಪತ್ನಿ ಸುಮತಿ ಇಂದು (ಅಕ್ಟೋಬರ್ 28) ತಮ್ಮ ಹುಟ್ಟುಹಬ್ಬದ ಸಂಭ್ರಮದಲ್ಲಿ ಇದ್ದಾರೆ. ಈ ವಿಶೇಷ ದಿನ ತಾಯಿಗೆ ಮಗನ ಪ್ರೀತಿಯ ಶುಭಾಶಯ ಸಿಕ್ಕಿದೆ. ತಾಯಿಯ ಜೊತೆಗಿನ ಮುದ್ದಾದ ಫೋಟೋವನ್ನು ಮನೋರಂಜನ್ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

''ನನ್ನ ಜೀವನದ ಒಬ್ಬ ಅದ್ಭುತ ಹಾಗೂ ಸ್ವಾರ್ಥವಿಲ್ಲದ ವ್ಯಕ್ತಿಗೆ ಹ್ಯಾಪಿ ಬರ್ತ್ ಡೇ. ಇವರು ನನ್ನ ದುಃಖದಲ್ಲಿ ಅಳುವಂತಹ, ನನ್ನ ಸುಖದಲ್ಲಿ ಖುಷಿಪಡುವಂತಹ, ನನ್ನ ಶಕ್ತಿ ಮತ್ತು ದೌರ್ಬಲ್ಯ ಎರಡೂ. ನನ್ನ ಪ್ರೀತಿ ಅಮ್ಮ. ಆಕೆಯ ಖುಷಿ ನಮ್ಮೊಲ್ಲರ ಖುಷಿ. ಲವ್ ಯೂ ಅಮ್ಮ'' ಎಂದು ಶುಭಾಶಯ ತಿಳಿಸಿದ್ದಾರೆ.

Manoranjan Ravichandran Wishes For Her Mother Birthday

ಗಂಡು ಮಕ್ಕಳಿಗೆ ಅಮ್ಮ ಅಂದ್ರೆ, ಬಹಳ ಇಷ್ಟ. ಆ ರೀತಿ ಮನೋರಂಜನ್ ರವಿಚಂದ್ರನ್ ಗೆ ಕೂಡ ಅಮ್ಮ ಫೇವರೇಟ್. ಆಗಾಗ ಅಮ್ಮನ ಜೊತೆಗಿನ ಫೋಟೋಗಳನ್ನು ತಮ್ಮ ಸೋಷಿಯಲ್ ಮೀಡಿಯಾ ಖಾತೆಗಳಲ್ಲಿ ಅವರು ಹಂಚಿಕೊಳ್ಳುತ್ತಾರೆ.

ಸದ್ಯ 'ಪ್ರಾರಂಭ' ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳಲ್ಲಿ ಮನೋರಂಜನ್ ಬ್ಯುಸಿ ಇದ್ದಾರೆ. ಈ ಸಿನಿಮಾದ ಚಿತ್ರೀಕರಣ ಇತ್ತೀಚಿಗಷ್ಟೆ ಮುಗಿದಿದೆ. 'ಸಾಹೇಬ' ಸಿನಿಮಾದ ಮೂಲಕ ಲಾಂಚ್ ಆದ ಮನೋರಂಜನ್ ರವಿಚಂದ್ರನ್ ಆ ಬಳಿಕ 'ಬೃಹಸ್ಪತಿ' ಸಿನಿಮಾದಲ್ಲಿ ನಟಿಸಿದ್ದರು. 'ಪ್ರಾರಂಭ' ಅವರ ಮೂರನೇ ಸಿನಿಮಾ.

More from Filmibeat

English summary
Actor Manoranjan Ravichandran wishes for her mother birthday.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X