For Quick Alerts
  ALLOW NOTIFICATIONS  
  For Daily Alerts

  ತಾತನ ಶ್ರಮವನ್ನು ನೆನೆದ ರವಿಚಂದ್ರನ್ ಪುತ್ರ

  |

  ಇಂದು ನಟ ಕ್ರೇಜಿಸ್ಟಾರ್ ರವಿಚಂದ್ರನ್ ತಂದೆ, ನಿರ್ಮಾಪಕ ವೀರಾಸ್ವಾಮಿ ಅವರ ಹುಟ್ಟುಹಬ್ಬದ ಸವಿ ನೆನಪು. ಕನ್ನಡ ಚಿತ್ರರಂಗಕ್ಕೆ ದೊಡ್ಡ ದೊಡ್ಡ ಹಿಟ್ ಸಿನಿಮಾಗಳನ್ನು ನಿರ್ಮಾಣ ಮಾಡಿದ್ದ ಹೆಮ್ಮೆಯ ನಿರ್ಮಾಪಕ ಹುಟ್ಟಿದ ದಿನ‌.

  ತಮ್ಮ ತಂದೆ ನಿರ್ಮಾಪಕ ವೀರಾಸ್ವಾಮಿ ಅವರ ಬಗ್ಗೆ ರವಿಚಂದ್ರನ್ ಯಾವಾಗಲು ನೆನೆಯುತ್ತಾರೆ. ಅದೇ ರೀತಿ ಇಂದು ಪ್ರೀತಿಯ ತಾತನ ಬಗ್ಗೆ ಮನೋರಂಜನ್ ರವಿಚಂದ್ರನ್ ಮಾತುಗಳನ್ನ ಆಡಿದ್ದಾರೆ.

  ಕ್ರೇಜಿಸ್ಟಾರ್ ರವಿಚಂದ್ರನ್ ತೆಗೆದುಕೊಂಡ ಮೊಟ್ಟ ಮೊದಲ ಸೆಲ್ಫಿ ಇದುಕ್ರೇಜಿಸ್ಟಾರ್ ರವಿಚಂದ್ರನ್ ತೆಗೆದುಕೊಂಡ ಮೊಟ್ಟ ಮೊದಲ ಸೆಲ್ಫಿ ಇದು

  ತಮ್ಮ ಇನ್ಟಾಗ್ರಾಮ್ ಖಾತೆಯಲ್ಲಿ‌ ತಾತನ ಬಗ್ಗೆ ಬರೆದುಕೊಂಡಿರುವ ಅವರು "ನಮ್ಮ ತಾತ ಕಂಡ ಕನಸು, ಅವರು ಹೊತ್ತ ಆಸೆ ಇವತ್ತು ಈಶ್ವರಿ ಪ್ರೊಡಕ್ಷನ್ಸ್ ‌ಇಷ್ಟು ದೊಡ್ಡ ಹೆಸರು ಮಾಡೋಕ್ಕೆ ಸಾಧ್ಯ ಆಯ್ತು. ನಮ್ಮ‌ ತಂದೆ ರವಿಚಂದ್ರನ್ ಅವರನ್ನು ನೀವೆಲ್ಲ‌ ಕನಸುಗಾರ ಅಂತ ಹೇಳಬಹುದು. ಆದರೆ, ಈ ಕನಸುಗಳ‌ ಹಿಂದೆ ಇದ್ದ ದೊಡ್ಡ ಶಕ್ತಿ ನಮ್ಮ‌ ತಾತ. ಇಂದು ಅವರ ಹುಟ್ಟುಹಬ್ಬ, ಲವ್ ಯೂ ತಾತ, ಸದಾ ಚಿರಋಣಿ" ಎಂದು ತಮ್ಮ ಮನಸ್ಸಿನ ಮಾತನ್ನು ಹಂಚಿಕೊಂಡಿದ್ದಾರೆ.

  ನಿರ್ದೇಶಕ ರಾಘುರಾಮ್, ರವಿಚಂದ್ರನ್ ಅಭಿಮಾನಿಗಳು ಸೇರಿದಂತೆ ಸಾಕಷ್ಟು ಜನರು ಸಾಮಾಜಿಕ ಜಾಲತಾಣಗಳಲ್ಲಿ ವೀರಾಸ್ವಾಮಿ ರವರನ್ನು ನೆನೆದಿದ್ದಾರೆ.

  'ನಾಗರಹಾವು', 'ಭೂತಯ್ಯನ ಮಗ ಅಯ್ಯು', 'ಪ್ರೇಮಲೋಕ', 'ರಣಧೀರ', 'ಶಾಂತಿ ಕ್ರಾಂತಿ', 'ರಾಮಾಚಾರಿ', 'ಚಕ್ರವ್ಯೂಹ' ಹೀಗೆ ಸಾಕಷ್ಟು ಸಿನಿಮಾಗಳು ಈಶ್ವರಿ ಪ್ರೊಡಕ್ಷನ್ ನಿಂದ ಬಂದಿವೆ.

  English summary
  Actor Manoranjan Ravichandran wishes for his grandfather N Veeraswamy birthday. Veeraswamy is popular kannada movie film producer and distributor.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X