twitter
    For Quick Alerts
    ALLOW NOTIFICATIONS  
    For Daily Alerts

    ವಿಮರ್ಶಕರ ವಿಮರ್ಶೆ: 'ಬೃಹಸ್ಪತಿ' ಚಿತ್ರದ ಪ್ಲಸ್-ಮೈನಸ್ ಏನು?

    By Bharath Kumar
    |

    ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಮಗ ಮನೋರಂಜನ್ ಅಭಿನಯದ ಎರಡನೇ ಸಿನಿಮಾ ಚಿತ್ರಮಂದಿರಕ್ಕೆ ಕಾಲಿಟ್ಟಿದೆ. ಮೊದಲ ದಿನ, ಮೊದಲ ಶೋ ನೋಡಿದ ಪ್ರೇಕ್ಷಕರು 'ಬೃಹಸ್ಪತಿ' ಚಿತ್ರವನ್ನ ಮೆಚ್ಚಿಕೊಂಡರು. ಚಿತ್ರವನ್ನ ನೋಡಿ ಕೆಲವರು ಇಷ್ಟಪಟ್ಟರೇ, ಮತ್ತೆ ಕೆಲವರು ಕಷ್ಟಪಟ್ಟುಕೊಂಡಿದ್ದಾರೆ.

    ತಮಿಳಿನ ವಿಐಪಿ ಚಿತ್ರದ ಕನ್ನಡ ರೀಮೇಕ್ ಇದಾಗಿದ್ದು, ಮೂಲದ ಚಿತ್ರದ ಛಾಯೆ ಎದ್ದು ಕಾಣುತ್ತಿದೆ ಎಂಬ ಅಭಿಪ್ರಾಯ ವೀಕ್ಷಕರದ್ದು. ನಂದಕಿಶೋರ್ ನಿರ್ದೇಶನ ಮಾಡಿದ್ದು, ರಂಜಿಸುವಲ್ಲಿ ಯಶಸ್ವಿಯಾಗಿದ್ದರೂ, ಮೂಲಚಿತ್ರದ ಅಚ್ಚು ಎನ್ನುತ್ತಿದ್ದಾರೆ.

    'ಬೃಹಸ್ಪತಿ' ಚಿತ್ರಕ್ಕೆ ಶುಭಕೋರಿದ ರಾಕಿಂಗ್ ಸ್ಟಾರ್'ಬೃಹಸ್ಪತಿ' ಚಿತ್ರಕ್ಕೆ ಶುಭಕೋರಿದ ರಾಕಿಂಗ್ ಸ್ಟಾರ್

    ಹಾಗಿದ್ರೆ, ಮನೋರಂಜನ್ 'ಬೃಹಸ್ಪತಿ' ಚಿತ್ರಕ್ಕೆ ವಿಮರ್ಶಕರು ಏನಂದ್ರು? ಚಿತ್ರದಲ್ಲಿ ಏನಿಷ್ಟ ಆಯ್ತು? ಏನು ಇಷ್ಟ ಆಗಿಲ್ಲ. ಇಲ್ಲಿದೆ ನೋಡಿ ಕರ್ನಾಟಕದ ಜನಪ್ರಿಯ ದಿನಪತ್ರಿಕೆಗಳಲ್ಲಿ ಪ್ರಕಟವಾಗಿರುವ ಬೃಹಸ್ಪತಿ ಚಿತ್ರದ ವಿಮರ್ಶೆ. ಮುಂದೆ ಓದಿ....

    ಅಸ್ತವ್ಯಸ್ತ ನೆರಳಚ್ಚು

    ಅಸ್ತವ್ಯಸ್ತ ನೆರಳಚ್ಚು

    ''ಇದು ಮೂಲ ಚಿತ್ರದ ನೆರಳಚ್ಚು. ಆದರೆ ಆ ನೆರಳಚ್ಚು ಅಚ್ಚುಕಟ್ಟಾಗಿದ್ದರೂ ಕನ್ನಡಕ್ಕೆ ಒಂದು ಒಳ್ಳೆಯ ಎರವಲು ಸಿನಿಮಾ ಸಿಗುತ್ತಿತ್ತೇನೋ. ಆದರೆ ಯಾವ ಹಂತದಲ್ಲಿಯೂ ‘ಬೃಹಸ್ಪತಿ' ಮೂಲಚಿತ್ರದ ಎತ್ತರಕ್ಕೆ ಏರುವುದೇ ಇಲ್ಲ. ಅಷ್ಟೇ ಅಲ್ಲ, ಮೂಲವನ್ನು ನೋಡದ ಪ್ರೇಕ್ಷಕ, ಮೈಮರೆತು ಆಸ್ವಾದಿಸುವಷ್ಟು ಅಚ್ಚುಕಟ್ಟುತನ ಗಳಿಸಿಕೊಳ್ಳಲೂ ಸಾಧ್ಯವಾಗಿಲ್ಲ. ಹಾಗಾಗಿ ಇದೊಂದು ರೀತಿಯಲ್ಲಿ ಅಸ್ತವ್ಯಸ್ತ ನೆರಳಚ್ಚು. 'ಸಾಹೇಬ' ಚಿತ್ರಕ್ಕೆ ಹೋಲಿಸಿದರೆ ಮನೋರಂಜನ್ ಅಭಿನಯದಲ್ಲಿ ಇನ್ನಷ್ಟು ಮಾಗಿರುವುದು ಕಾಣುತ್ತದೆ. ತಂದೆಯಾಗಿ ಸಾಯಿಕುಮಾರ್, ಅಕ್ಕರೆಯ ಅಮ್ಮನಾಗಿ ಸಿತಾರ ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ನಾಯಕಿ ಮಿಸ್ತಿ ಮುದ್ದು ಮುಖ, ಚೆಂದ ನಗೆಯಿಂದ ಮನಕದಿಯುತ್ತಾರೆ'' - ಪ್ರಜಾವಾಣಿ

    ಮೂಲಕೃತಿಯ ಪಡಿಯಚ್ಚು!

    ಮೂಲಕೃತಿಯ ಪಡಿಯಚ್ಚು!

    ''ಮೂಲಚಿತ್ರ ನೋಡದಿರುವವರಿಗೆ ಮಾಸ್ ಇಮೇಜ್​ನ 'ಬೃಹಸ್ಪತಿ' ರಂಜಿಸುತ್ತಾನೆ. ಚಿತ್ರದಲ್ಲಿ ನಿರ್ದೇಶಕರ ಶ್ರಮ ತುಸು ಕಮ್ಮಿ ಎನಿಸುತ್ತದೆ. ಕಾರಣ, ತದ್ರೂಪು ದೃಶ್ಯಗಳು. ಚಿತ್ರಕಥೆಯಲ್ಲಿ ಏನೂ ಬದಲಾವಣೆ ಮಾಡದೆ, ಮೂಲಚಿತ್ರಕ್ಕೆ ನಿಷ್ಠರಾಗಿರುವ ನಿರ್ದೇಶಕ ನಂದಕಿಶೋರ್, ಯಥಾವತ್ತಾಗಿ ಕನ್ನಡೀಕರಣ ಮಾಡಿದ್ದಾರೆ. ಯಾವ ಮಟ್ಟಿಗೆಂದರೆ, ವಸ್ತ್ರ ವಿನ್ಯಾಸ, ಕ್ಯಾಮರಾ ಕೋನಗಳು ಇದಕ್ಕೆ ಹೊರತಲ್ಲ. ಮಾಸ್ ಲುಕ್​ನ ಮ್ಯಾನರಿಸಂ ತೋರಿಸುವುದರ ಜತೆಗೆ ಸೆಂಟಿಮೆಂಟ್ ಸೀನ್​ಗಳಲ್ಲೂ ಮನೋರಂಜನ್ ಅಂಕ ಗಿಟ್ಟಿಸುತ್ತಾರೆ. ನಾಯಕಿ ಮಿಷ್ಟಿ ಅಭಿನಯ ಅವರ ಸೌಂದರ್ಯದಷ್ಟೇ ಚೆಂದ. ಸಾಧುಕೋಕಿಲ, ಕುರಿ ಪ್ರತಾಪ್ ಇದ್ದರೂ ಕಾಮಿಡಿ ಪಂಚ್ ಮಿಸ್ಸಿಂಗ್! ಇಂಥ ಒಂದಷ್ಟು ಓರೆ ಕೋರೆಗಳನ್ನು ಪರಿಗಣಿಸದೆ ನೋಡಿದರೆ ಈ ‘ಬೃಹಸ್ಪತಿ' ಇಷ್ಟವಾಗುತ್ತಾನಷ್ಟೇ'' - ವಿಜಯವಾಣಿ

    ಪ್ರತಿಭಾವಂತ ನಿರುದ್ಯೋಗಿ ಕಥೆ

    ಪ್ರತಿಭಾವಂತ ನಿರುದ್ಯೋಗಿ ಕಥೆ

    "ಬೃಹಸ್ಪತಿ' ಒಂದು ಪಕ್ಕಾ ಕ್ಲಾಸ್‌ ಅಂಡ್‌ ಮಾಸ್‌ ಸಿನಿಮಾ. ಇದು ತಮಿಳಿನ "ವಿಐಪಿ' ಚಿತ್ರದ ರೀಮೇಕ್. ಅಲ್ಲಿ ಧನುಶ್ ಮಾಡಿದ ಪಾತ್ರವನ್ನು ಇಲ್ಲಿ ಮನೋರಂಜನ್‌ ಮಾಡಿದ್ದಾರೆ. ಹಾಗಾಗಿ, ಪರಿಸರ ಬದಲಾಗಿದೆಯೇ ಹೊರತು ಕಥೆಯ ವಿಷಯದಲ್ಲಿ ಹೆಚ್ಚಿನ ಬದಲಾವಣೆಯೇನೂ ಆಗಿಲ್ಲ. ಮಧ್ಯಮ ವರ್ಗದ ಹುಡುಗನ ಆಸೆ, ಪೋಲಿತನ, ತಾಯಿ ಸೆಂಟಿಮೆಂಟ್, ಕಮಿಟ್ ಮೆಂಟ್‌ ಹಾಗೂ ಗ್ಯಾಪಲ್ಲೊಂದ್ ಲವ್‌ ... ಹೀಗೆ ಹಲವು ಶೇಡ್ ನ‌ ಪಾತ್ರಗಳಲ್ಲಿ ಮನೋರಂಜನ್‌ ಚೆನ್ನಾಗಿ ನಟಿಸಿದ್ದಾರೆ. ಮುಖ್ಯವಾಗಿ ಅವರಿಲ್ಲಿ ಗಮನ ಸೆಳೆಯೋದು ಡ್ಯಾನ್ಸ್‌ ಹಾಗೂ ಫೈಟ್ ನಲ್ಲಿ. ಸೆಂಟಿಮೆಂಟ್ ದೃಶ್ಯಗಳಲ್ಲಿ ಹಾಗೂ ಡೈಲಾಗ್‌ ಡೆಲಿವರಿಯಲ್ಲಿ ಪಳಗಬೇಕು. ನಾಯಕಿ ಮಿಶಿ ಚಕ್ರವರ್ತಿಗೆ ಇಲ್ಲಿ ಹೆಚ್ಚೇನು ಕೆಲಸವಿಲ್ಲ'' - ಉದಯವಾಣಿ

    ಇವನು ಕನ್ನಡದ ಬೃಹಸ್ಪತಿ

    ಇವನು ಕನ್ನಡದ ಬೃಹಸ್ಪತಿ

    ಬೃಹಸ್ಪತಿ ತಮಿಳಿನ ವಿಐಪಿ ಚಿತ್ರದ ರಿಮೇಕ್. ಹಾಗಂತ ಮೂಲ ಸಿನಿಮಾವನ್ನು ಕಾಪಿ ಮಾಡಿಲ್ಲ ನಿರ್ದೇಶಕ ನಂದಕಿಶೋರ್. ಕನ್ನಡದ ನೆಲಕ್ಕೆ ಒಪ್ಪುವಂತೆ ಬದಲಾಯಿಸಿಕೊಂಡು ಮೇಕಿಂಗ್ ಮಾಡಿದ್ದಾರೆ. ಹಾಗಾಗಿ ಕನ್ನಡದ್ದೇ ಸಿನಿಮಾ ಎಂದು ಭಾಸವಾಗುತ್ತದೆ. ರಿಮೇಕ್ ಸಿನಿಮಾವಾದರೂ, ಚಿತ್ರಕತೆಯನ್ನು ಸಂಪೂರ್ಣವಾಗಿ ಕನ್ನಡಿಕರಿಸಿದ್ದಾರೆ. ನಾಯಕನ ಪಾತ್ರಕ್ಕೆ ಮನೋರಂಜನ್‌ ರವಿಚಂದ್ರನ್‌ ಮತ್ತು ನಾಯಕಿಯ ಪಾತ್ರಕ್ಕೆ ಮಿಶ್ತಿ ಚಕ್ರವರ್ತಿಯ ಆಯ್ಕೆಯೂ ಚೆನ್ನಾಗಿದೆ. ಡೈಲಾಗ್‌ ಡಿಲೆವರಿಯಲ್ಲಿ ಕೊಂಚ ಸ್ಪಷ್ಟತೆ ಬೇಕು ಅನಿಸುತ್ತದೆ'' ವಿಜಯ ಕರ್ನಾಟಕ

    'ಬೃಹಸ್ಪತಿ' ವಿಮರ್ಶೆ: ಬೆಂಗಳೂರು ಮಿರರ್

    'ಬೃಹಸ್ಪತಿ' ವಿಮರ್ಶೆ: ಬೆಂಗಳೂರು ಮಿರರ್

    ''There is a marked improvement in Manoranjan, even if much is still expected regarding the clarity of words he delivers. He sounds much like an unrefined Ravichandran. Nanda brings out a clinical perfection in executing this film. From the supporting cast to the behind-the-scene work by composer Harikrishna and cinematographer Satya Hegde, everyone seems to have followed the template to perfection'' - Bangalore mirror

    ಫಿಲ್ಮಿಬೀಟ್ ವಿಮರ್ಶೆ ಓದಿರಿ

    ಬೃಹಸ್ಪತಿ ವಿಮರ್ಶೆ: 'ಡೀಸೆಂಟ್ ಪೋಲಿ'ಯ ಡೀಸೆಂಟ್ ಸಿನಿಮಾ.!ಬೃಹಸ್ಪತಿ ವಿಮರ್ಶೆ: 'ಡೀಸೆಂಟ್ ಪೋಲಿ'ಯ ಡೀಸೆಂಟ್ ಸಿನಿಮಾ.!

    English summary
    crazy star ravichandran son manoranjan starrer brihaspathi movie critics review. movie has released yesterday (january 5th). the movie directed by nanda kishore.
    Saturday, January 6, 2018, 14:36
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X